ರೈಲ್ವೆ ನೇಮಕಾತಿ ಕೋಶ (RRC) ನೈರುತ್ಯ ರೈಲ್ವೆ ನೇಮಕಾತಿ 2025 – ದಕ್ಷಿಣ ಪಶ್ಚಿಮ ರೈಲ್ವೆಯ ವಿವಿಧ ವಿಭಾಗಗಳು, ಕಾರ್ಯಾಗಾರಗಳು, ಘಟಕಗಳು ಹಾಗೂ ಗೊತ್ತುಪಡಿಸಿದ ಟ್ರೇಡ್‌ಗಳಲ್ಲಿ ಖಾಲಿ ಇರುವ ಒಟ್ಟು 904 ಅಪ್ರೆಂಟಿಸ್ ಗಳ ಹುದ್ದೆಗಳ ತರಬೇತಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಕ್ಷಿಣ ಪಶ್ಚಿಮ ರೈಲ್ವೆ ಅಧಿಕೃತ ವೆಬ್ಸೈಟ್ https://swractapp2526.onlineregister.org.in/stage1/instructions.php ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ- ಜುಲೈ 14, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 13, 2025
ವಿಭಾಗವಾರು ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ವಿವರ:
ಹುಬ್ಬಳ್ಳಿ ವಿಭಾಗ – 237
ಗಾಡಿ ದುರಸ್ತಿ ಕಾರ್ಯಾಗಾರ, ಹುಬ್ಬಳ್ಳಿ – 217
ಬೆಂಗಳೂರು ವಿಭಾಗ – 230
ಮೈಸೂರು ವಿಭಾಗ – 177
ಕೇಂದ್ರ ಕಾರ್ಯಾಗಾರ, ಮೈಸೂರು – 43
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ ಎಸ್.ಎಸ್.ಎಲ್.ಸಿ./ಮೆಟ್ರಿಕ್ಯುಲೇಷನ್/10ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳನ್ನು ಹೊಂದಿರಬೇಕು ಜೊತೆಗೆ ಸಂಬಂಧಿತ ಟ್ರೇಡ್ ನಲ್ಲಿ ಐಟಿಐ ಪ್ರಮಾಣಪತ್ರವನ್ನು ಹೊಂದಿರಬೇಕು .
ವಿಶೇಷ ಸೂಚನೆ:
ಈಗಾಗಲೇ ತರಬೇತಿ ಪಡೆಯುತ್ತಿರುವ/ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಈ ಅಧಿಸೂಚನೆಯ ವಿರುದ್ಧ ಅರ್ಜಿ ಸಲ್ಲಿಸಬಾರದು.
ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ – 100ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂ ಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
How to Apply for RRC SWR Hubli Apprentice Recruitment 2025
ಅರ್ಜಿ ಸಲ್ಲಿಸುವ ವಿಧಾನ;
ದಕ್ಷಿಣ ಪಶ್ಚಿಮ ರೈಲ್ವೆ ವೆಬ್ಸೈಟ್ https://swractapp2526.onlineregister.org.in/stage1/instructions.phpಗೆ ಭೇಟಿ ನೀಡಿ.
ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ವಿವರಗಳನ್ನು ಅಪ್ಲೋಡ್ ಮಾಡಿ.
ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
JOB HELP
Railway help
chethan Gm
Sslc.. Puc .iti
ಜಿಲ್ಲೆ ರಾಯಚೂರು ತಾಲೂಕು ಸಿಂಧನೂರು ವಿಲೇಜ್ ಸಿದ್ದರಾಂಪುರ