ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರಸ್ತುತ ಖಾಲಿ ಇರುವ ಜೂನಿಯರ್ ಅಸೋಸಿಯೇಟ್ಸ್ (ಗ್ರಾಹಕ ಬೆಂಬಲ ಮತ್ತು ಮಾರಾಟ) ಅಥವಾ ಕ್ಲರ್ಕ್ ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ(SBI Clerk Notification 2024)ಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಎಸ್‌ಬಿಐನ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣದಲ್ಲಿ ನೀಡಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವಯೋಮಿತಿ ಮತ್ತು ಪ್ರಮುಖ ದಿನಾಂಕಗಳು ಮುಂತಾದ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಕೊನೆವರೆಗೆ ಓದಿ. ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
Organization Name – State Bank of India Post Name – Junior Associate (Customer Support & Sales)/ Clerk Total Vacancy – 13735 Application Process – Online Job Location – All Over India(Karnataka)
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆ ದಿನಾಂಕ – 16/12/2024
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – 17/12/2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 07/01/2025
ಶೈಕ್ಷಣಿಕ ಅರ್ಹತೆ:
ಎಸ್‌ಬಿಐ ನೇಮಕಾತಿಗಾಗಿ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ(Any Degree) ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿಯು 01-04-2024ರಂತೆ ಕನಿಷ್ಠ-20 ವರ್ಷಗಳು ಹಾಗೂ ಗರಿಷ್ಠ- 28 ವರ್ಷಗಳು.
ಆಯ್ಕೆ ಪ್ರಕ್ರಿಯೆ:
ಹಂತ-l: ಪೂರ್ವಭಾವಿ ಪರೀಕ್ಷೆ
ಹಂತ II: ಮುಖ್ಯ ಪರೀಕ್ಷೆ
ಸ್ಥಳೀಯ ಭಾಷಾ ಪರೀಕ್ಷೆ
ಅಂತಿಮ ಆಯ್ಕೆ ಪಟ್ಟಿ
ಸಂಬಳ:
ವೇತನ ಶ್ರೇಣಿ: ರೂ.24050-1340/3-28070-1650/3-33020-2000/4-41020- 2340/7-57400-4400/1-61800-2680/1-64480
ಅರ್ಜಿ ಶುಲ್ಕ:
SC/ST/PwBD/XS/DXS ಅಭ್ಯರ್ಥಿಗಳಿಗೆ- ಶುಲ್ಕ ವಿನಾಯಿತಿ ನೀಡಲಾಗಿದೆ. General/OBC/EWS ಅಭ್ಯರ್ಥಿಗಳಿಗೆ- ರೂ.750/-
How to Apply for SBI Clerk Recruitment 2024
ಮೊದಲಿಗೆ SBI ನ ಅಧಿಕೃತ ವೆಬ್ ಸೈಟ್ www.sbi.co.in ಗೆ ಭೇಟಿ ನೀಡಿ.
ಮುಖಪುಟದಲ್ಲಿ ಕಾಣುವ ‘Career’ ವಿಭಾಗವನ್ನು ಆಯ್ಕೆ ಮಾಡಿ.
ಅಲ್ಲಿ ಇತ್ತೀಚಿನ ಪ್ರಕಟಣೆಗಳಲ್ಲಿ “RECRUITMENT OF JUNIOR ASSOCIATES (CUSTOMER SUPPORT & SALES) ADVERTISEMENT NO: CRPD/CR/2024-25/24” ಕೆಳಗೆ ಕಾಣುವ Apply online ಲಿಂಕ್ ಕ್ಲಿಕ್ ಮಾಡಿ.
ಅಗತ್ಯ ವಿವರಗಳೊಂದಿಗೆ ನೀಡುವ ಮೂಲಕ ಖಾತೆಯನ್ನು ರಚಿಸಿ,
ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಫೋಟೋ ಮತ್ತು ಸಹಿಯ ಪ್ರತಿಯನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ.
ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.