ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಸಂಸ್ಥೆ, ಇಲಾಖೆ, ಕಚೇರಿಗಳಿಗೆ 3712 ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (CHSL) ಹುದ್ದೆಗಳ ಭರ್ತಿಗಾಗಿ ಪರೀಕ್ಷೆ ನಡೆಸಿತು. ಸದರಿ ಪರೀಕ್ಷೆಗಳ ಫಲಿತಾಂಶ(SSC CHSL Tier 1 Result 2024)ವನ್ನು ಇಂದು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು SSC ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.
ಸಿಬ್ಬಂದಿ ನೇಮಕಾತಿ ಆಯೋಗವು CHSL Tier 1 ಪರೀಕ್ಷೆಯನ್ನು ಜುಲೈ 1 ರಿಂದ 12 ರವರೆಗೆ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಆನ್ಲೈನ್ ಮೂಲಕ ನಡೆಸಲಾಗಿದ್ದು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲೋವರ್ ಡಿವಿಷನ್ ಕ್ಲರ್ಕ್(LDC) ಪೋಸ್ಟಲ್ ಅಸಿಸ್ಟಂಟ್ (PA), ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ, ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (JSA), ವಿಂಗಡಣೆ ಸಹಾಯಕ (SA) ಡಾಟಾ ಎಂಟ್ರಿ ಆಪರೇಟರ್ (DEO) ಹುದ್ದೆಗಳಿಗೆ ಈ ಪರೀಕ್ಷೆಯ ಮೂಲಕ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಕಟ್ ಆಫ್ ಮಾರ್ಕ್ಸ್ ಮತ್ತು ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. Tier 1 ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ Tier 2 ಪರೀಕ್ಷೆಗೆ ಹಾಜರಾಗಲು ಮಾತ್ರ ಅವಕಾಶವಿರುತ್ತದೆ.