ಸಿಬ್ಬಂದಿ ಆಯ್ಕೆ ಆಯೋಗ(SSC)ವು 2025ರ ಕಾನ್ಸ್ಟೇಬಲ್(ಜಿಡಿ) 53,690 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಂತಿಮ ಫಲಿತಾಂಶವನ್ನು ಗುರುವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.
2025ರ ಆಗಸ್ಟ್ 20 ರಿಂದ ಸೆ.15ರವರೆಗೆ ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ದೈಹಿಕ ಗುಣಮಟ್ಟ ಪರೀಕ್ಷೆ (ಪಿಎಸ್‌ಟಿ) ನಡೆಸಿ, ಅ.15ರಂದು 95,575 ಅಭ್ಯರ್ಥಿಗಳನ್ನು ಒಳಗೊಂಡ ಫಲಿತಾಂಶ ಪ್ರಕಟಿಸಲಾಗಿತ್ತು. ನಂತರ ವಿವರವಾದ ವೈದ್ಯಕೀಯ ಪರೀಕ್ಷೆ (DME), ದಾಖಲೆ ಪರಿಶೀಲನೆ (DV) ಮತ್ತು ಪರಿಶೀಲನಾ ವೈದ್ಯಕೀಯ ಪರೀಕ್ಷೆ (RME)ಯಲ್ಲಿ ಅರ್ಹತೆ ಪಡೆದ 53,690 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಆಯೋಗದ ಅಧಿಕೃತ ವೆಬ್ಸೈಟ್ https://ssc.gov.in/ ನಲ್ಲಿ ಪ್ರಕಟಿಸಲಾಗಿದೆ, ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಫಲಿತಾಂಶ ಪರಿಶೀಲಿಸಬಹುದು ಎಂದು ಆಯೋಗ ಹೊರಡಿಸಿದ ಪ್ರಕಟಣೆ ತಿಳಿಸಿದೆ.




Shivanna
Miyapur
Devadurga
Racihur
Vaishnavi bagoji
Gokak