ಸಿಬ್ಬಂದಿ ಆಯ್ಕೆ ಆಯೋಗವು 2025-26ನೇ ಸಾಲಿನ ದೆಹಲಿ ಪೊಲೀಸ್ ಪರೀಕ್ಷೆಯ ಪರೀಕ್ಷಾ ವೇಳಾಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಪ್ರತಿ ವರ್ಷ ಸಿಬ್ಬಂದಿ ಆಯ್ಕೆ ಆಯೋಗವು ನಡೆಸುವ ನೇಮಕಾತಿ ಪರೀಕ್ಷೆಗಳಿಗೆ ಲಕ್ಷಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ವರ್ಷದ 2025ರ ದೆಹಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗಾಗಿ ನಡೆಸಲಾಗುವ ಪರೀಕ್ಷೆಯ ದಿನಾಂಕಗಳನ್ನು ನಿಗದಿ ಪಡಿಸಿಲಾಗಿದ್ದು ಅಧಿಕೃತ ವೇಳಾಪಟ್ಟಿಯನ್ನು SSC ವೆಬ್ಸೈಟ್ https://ssc.gov.in/ನಲ್ಲಿ ಬಿಡುಗಡೆಯಾಗಿದೆ. ಸದರಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
2025ರ ದೆಹಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಗಳ ದಿನಾಂಕ ಪ್ರಕಟ
ಸಿಬ್ಬಂದಿ ಆಯ್ಕೆ ಆಯೋಗವು 2025ರ ದೆಹಲಿ ಪೊಲೀಸ್ ಕಾನ್ಸ್ಟೇಬಲ್ (ಚಾಲಕ, ಕಾರ್ಯನಿರ್ವಾಹಕ), ಹೆಡ್ ಕಾನ್ಸ್ಟೇಬಲ್ (ಸಚಿವಾಲಯ) ಹಾಗೂ ಹೆಡ್ ಕಾನ್ಸ್ಟೇಬಲ್ (ಸಹಾಯಕ ವೈರ್ಲೆಸ್ ಆಪರೇಟರ್ (AWO)/ಟೆಲಿ-ಪ್ರಿಂಟರ್ ಆಪರೇಟರ್ (TPO) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಲು ಆಯ್ಕೆ ಪರೀಕ್ಷೆಯನ್ನು ಡಿಸೆಂಬರ್ 16ರಿಂದ 2026ರ ಜನವರಿ 22ರವರೆಗೆ ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲು ಆಯೋಗವು ನಿರ್ಧರಿಸಲಾಗಿದ್ದು, ಸದರಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ ಉದ್ಯೋಗಾಕಾಂಕ್ಷಿಗಳು ಪರೀಕ್ಷಾ ದಿನಾಂಕಗಳನ್ನು ಪರಿಶೀಲಿಸಬಹುದು.
2025ರ ದೆಹಲಿ ಪೊಲೀಸ್ ಪರೀಕ್ಷೆ ವೇಳಾಪಟ್ಟಿ
• “2025ರ ದೆಹಲಿ ಪೊಲೀಸ್ ಪರೀಕ್ಷೆ” ಕಾನ್ಸ್ಟೇಬಲ್, ಚಾಲಕ (ಪುರುಷ) ಹುದ್ದೆಗಳಿಗೆ – 2025ರ ಡಿಸೆಂಬರ್ 16 ಮತ್ತು 17 ರವರಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
• “2025ರ ದೆಹಲಿ ಪೊಲೀಸ್ ಪರೀಕ್ಷೆ” ಕಾನ್ಸ್ಟೇಬಲ್, ಕಾರ್ಯನಿರ್ವಾಹಕ (ಪುರುಷ ಮತ್ತು ಮಹಿಳೆ) ಹುದ್ದೆಗಳಿಗೆ – 2025ರ ಡಿಸೆಂಬರ್ 18 ರಿಂದ 2026ರ ಜನವರಿ 6 ರವರೆಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
• “2025ರ ದೆಹಲಿ ಪೊಲೀಸ್ ಪರೀಕ್ಷೆ”ಹೆಡ್ ಕಾನ್ಸ್ಟೇಬಲ್ (ಸಚಿವಾಲಯ) ಹುದ್ದೆಗಳಿಗೆ – 2026ರ ಜನವರಿ 07 ರಿಂದ 12 ರವರೆಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
• “2025ರ ದೆಹಲಿ ಪೊಲೀಸ್ ಪರೀಕ್ಷೆ” ಹೆಡ್ ಕಾನ್ಸ್ಟೇಬಲ್ (ಸಹಾಯಕ ವೈರ್ಲೆಸ್ ಆಪರೇಟರ್ (AWO)/ಟೆಲಿ-ಪ್ರಿಂಟರ್ ಆಪರೇಟರ್ (TPO) ಹುದ್ದೆಗಳಿಗೆ – 2026ರ ಜನವರಿ 15 ರಿಂದ 22 ರವರೆಗೆ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ
• 2025ರ ದೆಹಲಿ ಪೊಲೀಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೊದಲಿಗೆ ಎಸ್.ಎಸ್.ಸಿ ಅಧಿಕೃತ ಜಾಲತಾಣ https://ssc.gov.in/ ಕ್ಕೆ ಭೇಟಿ ನೀಡಿ.
• ನಂತರ ಸೂಚನಾ ಫಲಕ ವಿಭಾಗದ ಕೆಳಗೆ ನೀಡಲಾಗಿರುವ “ಪ್ರಮುಖ ಸೂಚನೆ- ಪರೀಕ್ಷೆಯ ವೇಳಾಪಟ್ಟಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ 2025ರ ದೆಹಲಿ ಪೊಲೀಸ್ ಪರೀಕ್ಷಾ ವೇಳಾಪಟ್ಟಿಯ ಪಿಡಿಎಫ್ ತೆರೆಯುತ್ತದೆ.
• ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ ಪರೀಕ್ಷಾ ದಿನಾಂಕಗಳನ್ನು ಪರಿಶೀಲಿಸಿ.