SSC GD Answer Key 2026: ಪರೀಕ್ಷೆ ಕೀ-ಉತ್ತರ ಪ್ರಕಟ; ಆಕ್ಷೇಪಣೆ ಸಲ್ಲಿಸಲು ಅವಕಾಶ

Published on:

ಸಿಬ್ಬಂದಿ ಆಯ್ಕೆ ಆಯೋಗವು 2026ನೇ ಸಾಲಿನ ಒಟ್ಟು 25487 ಕಾನ್ಸ್ಟೇಬಲ್‌(ಜಿಡಿ) ಹುದ್ದೆಗಳ ನೇಮಕಾತಿಗಾಗಿ ಏ.27 ರಿಂದ ಮೇ 31ರವರೆಗೆ ನಡೆಸಿದ್ದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ಕೀ-ಉತ್ತರಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.

ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ ಪರೀಕ್ಷೆಯ ಅಭ್ಯರ್ಥಿಗಳ ಪ್ರತಿಕ್ರಿಯೆ ಪತ್ರಿಕೆಗಳು ಮತ್ತು ತಾತ್ಕಾಲಿಕ ಕೀ-ಉತ್ತರಗಳನ್ನು ಎಸ್‌ಎಸ್‌ಸಿ ಅಧಿಕೃತ ವೆಬ್ಸೈಟ್ https://ssc.gov.inನಲ್ಲಿ ಬಿಡುಗಡೆ ಮಾಡಿದ್ದು, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಪ್ರತಿ ಪ್ರಶ್ನೆ/ಉತ್ತರಕ್ಕೆ ನಿಗದಿತ ರೂ.50 ಶುಲ್ಕ ಪಾವತಿಸಿ ಮೂಲಕ ಜೂ.20ರೊಳಗೆ ಆಕ್ಷೇಪಣೆ ಸಲ್ಲಿಸಬಹುದು.

SSC GD ಪ್ರತಿಕ್ರಿಯೆ ಪತ್ರಿಕೆ ಮತ್ತು ತಾತ್ಕಾಲಿಕ ಕೀ-ಉತ್ತರ ಪರಿಶೀಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್ಸೈಟ್ https://ssc.gov.in/ ಗೆ ಭೇಟಿ ನೀಡಿ.

• ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.

• ಬಳಿಕ *ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPFs) ಮತ್ತು SSF ನಲ್ಲಿ ಕಾನ್ಸ್‌ಟೇಬಲ್ (GD), ಮತ್ತು ಅಸ್ಸಾಂ ರೈಫಲ್ಸ್ ಪರೀಕ್ಷೆಯಲ್ಲಿ ರೈಫಲ್‌ಮ್ಯಾನ್ (GD), 2026: ಅಭ್ಯರ್ಥಿಗಳ ಪ್ರತಿಕ್ರಿಯೆ ಪತ್ರಿಕೆ(ಗಳು) ಜೊತೆಗೆ ತಾತ್ಕಾಲಿಕ ಉತ್ತರ ಕೀ* ಲಿಂಕ್ ಮೇಲೆ ಕ್ಲಿಕ್ ಮಾಡಿ.

• ಬಳಿಕ ಅಲ್ಲಿ ನೀಡಲಾಗಿರುವ ಅಭ್ಯರ್ಥಿಗಳ ಪರೀಕ್ಷೆಯ ಪ್ರತಿಕ್ರಿಯೆ ಪತ್ರಿಕೆಗಳು ಮತ್ತು ತಾತ್ಕಾಲಿಕ ಕೀ-ಉತ್ತರಗಳನ್ನು ಪರಿಶೀಲಿಸಿ.

• ಸದರಿ ಪ್ರಕಟಿತ ತಾತ್ಕಾಲಿಕ ಕೀ-ಉತ್ತರಗಳ ವಿರುದ್ಧ ಆಕ್ಷೇಪಣೆಗಳಿದ್ದಲ್ಲಿ ಜೂನ್ 20ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Important Direct Links:

Notice PDFDownload
SSC GD Tentative Answer Key 2026 Check LinkLogin Now
Official Websitessc.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

5 thoughts on “SSC GD Answer Key 2026: ಪರೀಕ್ಷೆ ಕೀ-ಉತ್ತರ ಪ್ರಕಟ; ಆಕ್ಷೇಪಣೆ ಸಲ್ಲಿಸಲು ಅವಕಾಶ”

Leave a Comment