ಯುಪಿಎಸ್‌ಸಿ ಸಿಎಸ್‌ & ಐಎಫ್‌ಎಸ್‌ ಪೂರ್ವಭಾವಿ ಪರೀಕ್ಷೆ 2026ರ ಫಲಿತಾಂಶ ಪ್ರಕಟ

Published on:

ಕೇಂದ್ರ ಲೋಕಸೇವಾ ಆಯೋಗವು 2026ನೇ ಸಾಲಿನ ನಾಗರಿಕ ಸೇವೆ ಹಾಗೂ ಭಾರತೀಯ ಅರಣ್ಯ ಸೇವೆಗಳ ನೇಮಕಾತಿ ಸಂಬಂಧ ಮೇ 25ರಂದು ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ(ಜೂ.15)ರಂದು ಪ್ರಕಟಿಸಿದೆ.

ನಾಗರಿಕ ಸೇವೆ ಪರೀಕ್ಷೆಯಲ್ಲಿ ಒಟ್ಟು 13,343 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ(ಮೇನ್ಸ್‌)ಗೆ ಆಯ್ಕೆಯಾದರೆ, ಅರಣ್ಯ ಸೇವೆ ಪರೀಕ್ಷೆಯಲ್ಲಿ 1046 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಸದರಿ ಪರೀಕ್ಷೆಯ ಫಲಿತಾಂಶವನ್ನು ಯುಪಿಎಸ್ಸಿ ಅಧಿಕೃತ ವೆಬ್ಸೈಟ್ https://upsc.gov.in/ನ ಮೂಲಕ ಪರಿಶೀಲನೆ ಮಾಡಬಹುದು.

ಫಲಿತಾಂಶ ಪರಿಶೀಲಿಸುವ ವಿಧಾನ

• ಮೊದಲಿಗೆ ಅಭ್ಯರ್ಥಿಗಳು UPSC ಅಧಿಕೃತ ವೆಬ್‌ಸೈಟ್‌ https://upsc.gov.in/ ಗೆ ಭೇಟಿ ನೀಡಿ.

• ನಂತರ ಹೊಸದೇನಿದೆ ವಿಭಾಗದ ಕೆಳಗೆ ನೀಡಲಾಗಿರುವ “ಲಿಖಿತ ಫಲಿತಾಂಶ: ಭಾರತೀಯ ಅರಣ್ಯ ಸೇವೆ (ಪ್ರಾಥಮಿಕ) ಪರೀಕ್ಷೆ, 2026 ರಿಂದ CS(P) ಪರೀಕ್ಷೆ, 2026” ಅಥವಾ “ಲಿಖಿತ ಫಲಿತಾಂಶ: ನಾಗರಿಕ ಸೇವೆಗಳ (ಪ್ರಾಥಮಿಕ) ಪರೀಕ್ಷೆ, 2026” ಲಿಂಕ್ ಮೇಲೆ ಟ್ಯಾಪ್ ಮಾಡಿ.

• ನಂತರ ಫಲಿತಾಂಶದ ಪಿಡಿಎಫ್ ತೆರೆಯುತ್ತದೆ.

• ಪಿಡಿಎಫ್ ನಲ್ಲಿ ನಿಮ್ಮ ರೋಲ್ ಸಂಖ್ಯೆಯ ಮೂಲಕ ನಿಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಿ.

• ಬಳಿಕ ನೇಮಕಾತಿಯ ಮುಂದಿನ ಹಂತವಾದ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಎಲ್ಲಾ ಅಭ್ಯರ್ಥಿಗಳು ಆಯೋಗದ ಜಾಲತಾಣದಲ್ಲಿ ಲಾಗಿನ್ ಆಗಿ.

ಶುಲ್ಕ ಪಾವತಿಯಿಂದ ವಿನಾಯಿತಿ ಪಡೆದ ಅಭ್ಯರ್ಥಿಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಭ್ಯರ್ಥಿಗಳು ರೂ.200 ಶುಲ್ಕವನ್ನು ಪಾವತಿಸಿ ಅವರ ವಿವರಗಳನ್ನು ಹಾಗೂ ಮುಖ್ಯ ಪರೀಕ್ಷೆಗೆ ಕೇಡರ್ ಆದ್ಯತೆಯನ್ನು ನವೀಕರಿಸಬೇಕು ಎಂದು ಆಯೋಗ ಸೂಚಿಸಿದೆ.

Important Direct Links:

UPSC Civil Services Prelims Result 2026 PDFDownload
UPSC IFS Prelims Result 2026 PDFDownload
Official Websitewww.upsc.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment