WhatsApp Channel Join Now
Telegram Group Join Now

SSC GD Notification 2024(OUT): ಒಟ್ಟು 39,000ಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ

ಸಿಬ್ಬಂದಿ ಆಯ್ಕೆ ಆಯೋಗವು (SSC) ಕೇಂದ್ರ ಸರ್ಕಾರ ವಿವಿಧ ಭದ್ರತಾ ಪಡೆಗಳಿಗೆ ಜೆನೆರಲ್‌ ಡ್ಯೂಟಿ ಕಾನ್ಸ್‌ಟೇಬಲ್‌ (GD)ಹುದ್ದೆಗಳನ್ನು ಭರ್ತಿಗಾಗಿ ನೇಮಾಕತಿ ಅಧಿಸೂಚನೆ(SSC GD Notification 2024)ಯನ್ನು ಇಂದು‌ ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆ ಆದ ನಂತರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಸಿಬ್ಬಂದಿ ಆಯ್ಕೆ ಆಯೋಗವು ಕೇಂದ್ರ ವಿವಿಧ ಭದ್ರತಾ ಪಡೆಗಳಿಗೆ ಜನರಲ್ ಡ್ಯೂಟಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು 39,000ಕ್ಕೂ ಅಧಿಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. 10ನೇ ತರಗತಿ ಪಾಸ್ ಮಾಡಿರುವ ಅಭ್ಯರ್ಥಿಗಳು ಸರ್ಕಾರದ ಹುದ್ದೆಯನ್ನು ಬಯಸುತ್ತಿದ್ದರೆ ಇದೊಂದು ಸುವರ್ಣ ಅವಕಾಶವಾಗಿದೆ. ನೇಮಕಾತಿಯ ಪರೀಕ್ಷೆಯನ್ನು 2025ರ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲು ಆಯೋಗವು ತೀರ್ಮಾನಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು SSC GD Recruitment 2024 ನೇಮಕಾತಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ssc.gov.in ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Ssc Gd Notification 2024
Ssc Gd Notification 2024

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿ ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು

ವಯೋಮಿತಿ:

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಟ 18 ರಿಂದ ಗರಿಷ್ಠ 23 ವರ್ಷಗಳ ಒಳಗಿರಬೇಕು.

(ವಯೋಮಿತಿ ಸಡಲಿಕ್ಕೆ ಕುರಿತು ವಿವರವಾದ ಮಾಹಿತಿಯನ್ನು ಅಧಿಸೂಚನೆಯಲ್ಲಿ ಬಿಡುಗಡೆ ಮಾಡಲಾಗುತ್ತದೆ)

ವೇತನ ವಿವರ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ INR ₹21,700 ರಿಂದ  ₹69,100 ಮಾಸಿಕ ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ದೈಹಿಕ ಪರೀಕ್ಷೆ
  • ವೈದ್ಯಕೀಯ ಪರೀಕ್ಷೆ
  • ದಾಖಲಾತಿ ಪರಿಶೀಲನೆ

ಅರ್ಜಿ ಶುಲ್ಕ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ₹100.
  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ

How to Apply for SSC GD Recruitment 2024-25

ಅರ್ಜಿ ಸಲ್ಲಿಸುವುದು ಹೇಗೆ…..?: ಸಿಬ್ಬಂದಿ ಆಯ್ಕೆ ಆಯೋಗದ ಜನರಲ್ ಡ್ಯೂಟಿ ಕಾನ್ಸ್ಟೇಬಲ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು SSC ಅಧಿಕೃತ ವೆಬ್ ಸೈಟ್ ssc.gov.in ಭೇಟಿ ನೀಡಿ, ಆನ್‌ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Important Direct Links:

Official Notification PDF Download
Online Application Form LinkLogin || Register
Official Websitessc.gov.in
More UpdatesKarnataka Help.in

Leave a Comment