ಕಾನ್ಸ್‌ಟೇಬಲ್ (GD)-2025ರ ನೇಮಕಾತಿಗಾಗಿ ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ನಡೆಸಲಾಗುವ ದೈಹಿಕ ಪರೀಕ್ಷೆ (PST ಹಾಗೂ PET) ಪ್ರವೇಶ ಪತ್ರವನ್ನು ಸಿಬ್ಬಂದಿ ನೇಮಕಾತಿ ಆಯೋಗವು ಬಿಡುಗಡೆ ಮಾಡಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆ (CPRF) ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುಮಾರು 3,94,121 ಅಭ್ಯರ್ಥಿಗಳಿಗೆ ಆ.20 ರಿಂದ ದೈಹಿಕ ದಕ್ಷತೆ ಪರೀಕ್ಷೆ (PET) ಹಾಗೂ ದೈಹಿಕ ಗುಣಮಟ್ಟ ಪರೀಕ್ಷೆ (PST) ನಡೆಯಲಿದೆ. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು CRPF ಅಧಿಕೃತ ವೆಬ್ಸೈಟ್ https://rect.crpf.gov.in/ ನಲ್ಲಿ ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಸಿಬ್ಬಂದಿ ಆಯ್ಕೆ ಆಯೋಗವು CAPFs, SSF, NCB ಮತ್ತು ಅಸ್ಸಾಂ ರೈಫಲ್ಸ್‌ಗಳಲ್ಲಿ ಒಟ್ಟು 53,690 ಕಾನ್ಸ್‌ಟೇಬಲ್ (GD) ಹುದ್ದೆಗಳ ನೇಮಕಾತಿಗಾಗಿ CBT ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಆಗಸ್ಟ್ 20 ರಿಂದ ಸೆಪ್ಟೆಂಬರ್ 11ರವರೆಗೆ ದೈಹಿಕ ಪರೀಕ್ಷೆಗಳಾದ PST/PET ಅನ್ನು CAPF ಗಳ ಮಂಡಳಿಗಳು 30 ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ ದಿನಕ್ಕೆ 1500 ಅಭ್ಯರ್ಥಿಗಳಂತೆ ನಡೆಸಲಾಗುತ್ತದೆ. CBT ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವತುಗಳನ್ನು ಬಳಸಿಕೊಂಡು PST/PET ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
How to Download SSC GD Physical Admit Card 2025?
ಪ್ರವೇಶ ಪತ್ರ ಡೌನ್ಲೋಡ್ ಮಾಡುವ ವಿಧಾನ;
CRPF ಅಧಿಕೃತ ವೆಬ್ಸೈಟ್ https://rect.crpf.gov.in/ ಗೆ ಭೇಟಿ ನೀಡಿ.
CT(GD) ಪರೀಕ್ಷೆ 2025ರ PET/PST ಇವೆಂಟ್ ಗಳು ವಿಭಾಗದ ಕೆಳಗೆ – *ಇ-ಪ್ರವೇಶ ಕಾರ್ಡ್ಗಾಗಿ ಲಿಂಕ್* ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ಲಾಗಿನ್ ಆಗಿ.
ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ. ಭವಿಷ್ಯದ ಉಲ್ಲೇಖಕ್ಕಾಗಿ ಇ-ಪ್ರವೇಶ ಕಾರ್ಡ್ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಅಭ್ಯರ್ಥಿಗಳ ಗಮನಕ್ಕೆ
ಎಲ್ಲಾ ಅಭ್ಯರ್ಥಿಗಳು PET/PST ಸಮಯದಲ್ಲಿ ಇ-ಅಡ್ಮಿಟ್ ಕಾರ್ಡ್ನ ಮುದ್ರಿತ ಪ್ರತಿಯನ್ನು ತರಲು ನಿರ್ದೇಶಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಪ್ರವೇಶ ಕಾರ್ಡ್ಗಳಿಲ್ಲದೆ PET/PST ಗೆ ಅನುಮತಿಸಲಾಗುವುದಿಲ್ಲ.
Important Direct Links:
SSC Constable GD Physical Admit Card 2025 Notice PDF