SSC ಹೆಡ್ ಕಾನ್ಸ್ಟೇಬಲ್(AWO/TPO) ಪರೀಕ್ಷೆಗೆ ಅರ್ಜಿ ಪ್ರಾರಂಭ: ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಿ
2025ರ ದೆಹಲಿ ಪೊಲೀಸ್ ಪರೀಕ್ಷೆಯ ಮೂಲಕ ಹೆಡ್ ಕಾನ್ಸ್ಟೇಬಲ್ {ಸಹಾಯಕ ವೈರ್ಲೆಸ್ ಆಪರೇಟರ್ (AWO)/ಟೆಲಿ-ಪ್ರಿಂಟರ್ ಆಪರೇಟರ್ (TPO)} ಹುದ್ದೆಗಳ ಭರ್ತಿ. ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತಾ ಮಾನದಂಡಗಳು ಇಲ್ಲವೆ.
ಸಿಬ್ಬಂದಿ ಆಯ್ಕೆ ಆಯೋಗವು ದೆಹಲಿ ಪೊಲೀಸ್ ವಿಭಾಗದಲ್ಲಿ ಹೆಡ್ ಕಾನ್ಸ್ಟೇಬಲ್ [ಸಹಾಯಕ ವೈರ್ಲೆಸ್ ಆಪರೇಟರ್ (AWO) ಮತ್ತು ಟೆಲಿ-ಪ್ರಿಂಟರ್ ಆಪರೇಟರ್ (TPO)] ಹುದ್ದೆಗಳ ನೇಮಕಾತಿಗಾಗಿ ಬುಧವಾರ(ಸೆ.24) ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ.
ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ವೈರ್ಲೆಸ್ ಆಪರೇಟರ್ – 370 ಹುದ್ದೆಗಳು, ಟೆಲಿ-ಪ್ರಿಂಟರ್ ಆಪರೇಟರ್ – 182 ಹುದ್ದೆಗಳೂ ಸೇರಿ ಒಟ್ಟು 552 ಹುದ್ದೆಗಳಿಗೆ ಈ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು SSC ಅಧಿಕೃತ ವೆಬ್ ಸೈಟ್ https://ssc.gov.in/ಗೆ ಭೇಟಿ ನೀಡಿ. ಅ.15ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಸೆಪ್ಟೆಂಬರ್ 24, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 15, 2025
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ – ಅಕ್ಟೋಬರ್ 16, 2025
ಹುದ್ದೆಗಳ ವಿವರ:
ಹೆಡ್ ಕಾನ್ಸ್ಟೇಬಲ್ (AWO/TPO) ಪುರುಷ – 370 ಹುದ್ದೆಗಳು ಹೆಡ್ ಕಾನ್ಸ್ಟೇಬಲ್ (AWO/TPO) ಮಹಿಳೆ – 182 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ವಿಜ್ಞಾನ ಮತ್ತು ಗಣಿತ ವಿಷಯದೊಂದಿಗೆ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು ಅಥವಾ ಮೆಕ್ಯಾನಿಕ್-ಕಮ್-ಆಪರೇಟರ್ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ ಸಿಸ್ಟಮ್ ಟ್ರೇಡ್ನಲ್ಲಿ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (NTC) ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನದ ಜೊತೆಗೆ ಇಂಗ್ಲಿಷ್ ಪದ ಸಂಸ್ಕರಣಾ ವೇಗದ ಪರೀಕ್ಷೆ – 15 ನಿಮಿಷಗಳಲ್ಲಿ 1000 ಕೀ ಡಿಪ್ರೆಶನ್ಗಳು.
ವಯೋಮಿತಿ:
01-07-2025 ರಂತೆ;
ಕನಿಷ್ಠ ಮಿತಿ – 18 ವರ್ಷಗಳು
ಗರಿಷ್ಠ ಮಿತಿ – 27 ವರ್ಷಗಳು
ವಯೋಮಿತಿ ಸಡಿಲಿಕೆ: ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷಗಳು, ಓಬಿಸಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 3 ವರ್ಷಗಳು
ಆಯ್ಕೆ ಪ್ರಕ್ರಿಯೆ:
→ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಎಸ್ಎಸ್ಸಿಯಿಂದ) → ದೈಹಿಕ ಸಹಿಷ್ಣುತೆ ಮತ್ತು ಮಾಪನ ಪರೀಕ್ಷೆ (PE/MT) [ದೆಹಲಿ ಪೊಲೀಸರಿಂದ] → ಟ್ರೇಡ್ ಪರೀಕ್ಷೆ [ದೆಹಲಿ ಪೊಲೀಸರಿಂದ] → ಕಂಪ್ಯೂಟರ್ ಕಾರ್ಯಾಚರಣೆಯಲ್ಲಿ ಪ್ರಾವೀಣ್ಯತೆಯ ಪರೀಕ್ಷೆ
ಸಂಬಳ:
ಸರ್ಕಾರಿ ನಿಯಮಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ(ಗುಂಪು ‘ಸಿ) ಅನುಗುಣವಾಗಿ ಮಾಸಿಕ 25,500ರೂ.ಗಳಿಂದ 81,100ರೂ.ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 100ರೂ.
ಪ.ಜಾತಿ, ಪ.ಪಂಗಡ, ಇಎಸ್ಎಂ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕವಿರುವುದಿಲ್ಲ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
SSC ಅಧಿಕೃತ ವೆಬ್ ಸೈಟ್ https://ssc.gov.in/ ಗೆ ಭೇಟಿ ನೀಡಿ.
ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
ಲಾಗಿನ್ ಆದ ನಂತರ “2025 ರ ದೆಹಲಿ ಪೊಲೀಸ್ ಪರೀಕ್ಷೆಯಲ್ಲಿ ಹೆಡ್ ಕಾನ್ಸ್ಟೇಬಲ್ {ಸಹಾಯಕ ವೈರ್ಲೆಸ್ ಆಪರೇಟರ್ (AWO)/ಟೆಲಿ-ಪ್ರಿಂಟರ್ ಆಪರೇಟರ್ (TPO) ಹುದ್ದೆಗಳ ನೇಮಕಾತಿ-2025” ಜಾಹೀರಾತನ್ನು ವೀಕ್ಷಿಸಿ ಅನ್ವಯಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.