ಸಿಬ್ಬಂದಿ ಆಯ್ಕೆ ಆಯೋಗವು 2025ರ ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಪರೀಕ್ಷೆ (ಪತ್ರಿಕೆ-I) ರ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳಿಂದ ಸ್ವಯಂ-ಸ್ಲಾಟ್ ಆಯ್ಕೆಗಾಗಿ ಕಾಲಾವಕಾಶ ನೀಡಲಾಗಿದೆ.
ಪ್ರಸ್ತುತ ವರ್ಷದಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್ (JE) (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟಿಕಲ್) ಒಟ್ಟು 1731 ಹುದ್ದೆಗಳ ನೇಮಕಾತಿಗಾಗಿ ಮೊದಲನೇ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸದರಿ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು SSC ಅಧಿಕೃತ ಜಾಲತಾಣ https://ssc.gov.in/ ಕ್ಕೆ ಭೇಟಿ ನೀಡಿ. ತಮ್ಮ ಆದ್ಯತೆಯ ಪರೀಕ್ಷಾ ನಗರ ಮತ್ತು ದಿನಾಂಕವನ್ನು ಆಯ್ಕೆ ಮಾಡಬಹುದು.
ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್) ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪೇಪರ್-I ಪರೀಕ್ಷೆಯನ್ನು ಭಾರತದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಡಿಸೆಂಬರ್ 03 ರಿಂದ 06 ರವರೆಗೆ ನಡೆಸಲು ಆಯೋಗವು ನಿರ್ಧರಿಸಲಾಗಿದ್ದು, ಅಭ್ಯರ್ಥಿಗಳ ಆಯ್ಕೆಯ ಪ್ರಕಾರ ಪರೀಕ್ಷಾ ನಗರ ಮತ್ತು ದಿನಾಂಕವನ್ನು ಆಯ್ಕೆ ಮಾಡಲು ಆಯೋಗವು ನವೆಂಬರ್ 10 ರಿಂದ 13 ರವರೆಗೆ ಕಾಲಾವಕಾಶವನ್ನು ನೀಡಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಲಾಗಿನ್ ಆಗಿ ಪರೀಕ್ಷೆ ಸ್ಲಾಟ್ ಆಯ್ಕೆಯನ್ನು ಮಾಡಬಹುದು.
ಪರೀಕ್ಷೆ ಸ್ಲಾಟ್ ಆಯ್ಕೆ ಮಾಡುವ ವಿಧಾನ
• SSC ಅಧಿಕೃತ ಜಾಲತಾಣ https://ssc.gov.in/ ಕ್ಕೆ ಭೇಟಿ ನೀಡಿ.
• SSC JE ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಭ್ಯರ್ಥಿ ಪೋರ್ಟಲ್ಗೆ ಲಾಗಿನ್ ಆಗಿ.
• ನಂತರ ಅಪ್ಲಿಕೇಶನ್ ವಿಭಾಗಕ್ಕೆ ಹೋಗಿ SSC JE ಪರೀಕ್ಷಾ ಸ್ಲಾಟ್ ಬುಕಿಂಗ್ 2025ರ – ನಗರವನ್ನು ಆರಿಸಿ, ಪರೀಕ್ಷಾ ದಿನಾಂಕ ಮತ್ತು ಶಿಫ್ಟ್ ಆಯ್ಕೆ ಮಾಡಿ.
• ಅಭ್ಯರ್ಥಿಯು ನಿಗದಿತ ಸಮಯದ ಮಿತಿಯೊಳಗೆ ಸ್ಲಾಟ್ ಆಯ್ಕೆಯನ್ನು ಮಾಡಬಹುದು.
• ಅರ್ಜಿ ವಿಂಡೋದಲ್ಲಿ ಅಥವಾ ಲಭ್ಯತೆಯ ಪ್ರಕಾರ ಆಯ್ಕೆ ಮಾಡಿದ ಯಾವುದೇ ನಗರಗಳಲ್ಲಿ ವ್ಯವಸ್ಥೆಯು ಸ್ವಯಂಚಾಲಿತವಾಗಿ ಲಭ್ಯವಿರುವ ಸ್ಲಾಟ್ ಅನ್ನು ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ.