SSC JE Answer Key 2024: ಭಾರತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 968 ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್) ಹುದ್ದೆಗಳಿಗೆ ನೇಮಕಾತಿಗಾಗಿ ಸಿಬ್ಬಂದಿ ಆಯ್ಕೆ ಆಯೋಗಯು (SSC) ಪರೀಕ್ಷೆಯನ್ನು ನಡೆಸಿತು. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಇತ್ತೀಚಿಗೆ ನಡೆಸಿದ್ದ ಜೂನಿಯರ್ ಇಂಜಿನಿಯರ್ (JE)- 2024 ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಜೂನಿಯರ್ ಇಂಜಿನಿಯರ್ (JE) ಪರೀಕ್ಷೆಯನ್ನು ಜೂನ್ 5, 6, ಮತ್ತು 7 2024 ರಂದು ವಿವಿಧ ಪಾಳಿಗಳಲ್ಲಿ ನಡೆಸಲಾಗಿತ್ತು. ಕೀ ಉತ್ತರಗಳನ್ನು SSC ತನ್ನ ಅಧಿಕೃತ ವೆಬ್‌ಸೈಟ್ ssc.gov.in ನಲ್ಲಿ ಬಿಡುಗಡೆ ಮಾಡಿದೆ.
ಸಿಬ್ಬಂದಿ ಅಯ್ಕೆ ಆಯೋಗವು ಪರೀಕ್ಷೆಯನ್ನು ಇದೇ ಜೂನ್ 5, 6 ಮತ್ತು 7, 2024 ರಂದು ಕಂಪ್ಯೂಟರ್ ಆಧಾರಿತ ಅನ್ ಲೈನ್ ಮೂಲಕ ನಡೆಸಲಾಯಿತು. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೀ ಉತ್ತರಗಳ PDF ಡೌನ್ಲೋಡ್ ಮಾಡಿಕೊಂಡು ತಮ್ಮ ಸ್ಕೋರ್ ಅಂದಾಜು ಮಾಡಿಕೊಳ್ಳಬಹುದಾಗಿದೆ. ಪೇಪರ್ 1 ಕೀ ಉತ್ತರಗಳು ಅಂತಿಮ ಉತ್ತರಗಳನ್ನು ಬಿಡುಗಡೆ ಮಾಡಿದೆ.