ಪ್ರಸ್ತುತ ವರ್ಷದಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್ (JE) ಹುದ್ದೆಗಳ ವಿವರವನ್ನು ಸಿಬ್ಬಂದಿ ನೇಮಕಾತಿ ಸಿಬ್ಬಂದಿ ಆಯ್ಕೆ ಆಯೋಗವು ಮಂಗಳವಾರ(ಆ.5) ಬಿಡುಗಡೆ ಮಾಡಿದೆ.
ಸಚಿವಾಲಯ, ಸಂಸ್ಥೆಗಳು ಹಾಗೂ ಇಲಾಖಾವಾರು ಖಾಲಿ ಇರುವ ಜೂನಿಯರ್ ಎಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್) ಪರೀಕ್ಷೆಯ ತಾತ್ಕಾಲಿಕ ಹುದ್ದೆಗಳ ವಿವರಗಳನ್ನು SSC ಅಧಿಕೃತ ವೆಬ್ಸೈಟ್ https://ssc.gov.in/?ref=examinfo-ssc-cgl-result ನಲ್ಲಿ ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಪರಿಶೀಲನೆ ಮಾಡಬಹುದಾಗಿದೆ.