ಪ್ರಸ್ತುತ ವರ್ಷದಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಸಂಯೋಜಿತ ಹಿಂದಿ ಅನುವಾದಕರ (JHT) ಹುದ್ದೆಗಳ ವಿವರವನ್ನು ಸಿಬ್ಬಂದಿ ನೇಮಕಾತಿ ಆಯೋಗವು ಸೋಮವಾರ ಬಿಡುಗಡೆ ಮಾಡಿದೆ.
ಖಾಲಿ ಇರುವ ಹುದ್ದೆಗಳ ವಿವರಗಳನ್ನು ಆಯೋಗದ ಅಧಿಕೃತ ವೆಬ್ಸೈಟ್ https://ssc.gov.in/ನಲ್ಲಿ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಪರಿಶೀಲನೆ ಮಾಡಬಹುದಾಗಿದೆ.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಸಚಿವಾಲಯ ಹಾಗೂ ಇಲಾಖಾವಾರು ಖಾಲಿ ಇರುವ ಹುದ್ದೆಗಳ ವಿವರ • ಸಶಸ್ತ್ರ ಪಡೆಗಳ ಪ್ರಧಾನ ಕಚೇರಿ (AFHQ), ರಕ್ಷಣಾ ಇಲಾಖೆ, ರಕ್ಷಣಾ ಸಚಿವಾಲಯ – 4 ಹುದ್ದೆಗಳು
• ಅಭಿವೃದ್ಧಿ ಆಯುಕ್ತರ ಕಚೇರಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ – 1 ಹುದ್ದೆಗಳು
• ಗೃಹ ಸಚಿವಾಲಯ – 14 ಹುದ್ದೆಗಳು
• ವಾಣಿಜ್ಯ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ – 2 ಹುದ್ದೆಗಳು
• ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ – 3 ಹುದ್ದೆಗಳು
• ಗ್ರಾಹಕ ವ್ಯವಹಾರಗಳ ಇಲಾಖೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ – 2 ಹುದ್ದೆಗಳು
• ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ – 1 ಹುದ್ದೆ
• ಸಶಸ್ತ್ರ ಪಡೆಗಳ ಪ್ರಧಾನ ಕಚೇರಿ (AFHQ), ರಕ್ಷಣಾ ಇಲಾಖೆ, ರಕ್ಷಣಾ ಸಚಿವಾಲಯ – 3 ಹುದ್ದೆಗಳು
• ರಕ್ಷಣಾ ಇಲಾಖೆ, ನಾಗರಿಕ ಮಾನವಶಕ್ತಿ ಮತ್ತು ಯೋಜನಾ ನಿರ್ದೇಶನಾಲಯ (DCMPR), IHQ, ನೌಕಾಪಡೆ, ರಕ್ಷಣಾ ಸಚಿವಾಲಯ – 2 ಹುದ್ದೆಗಳು
• ರಕ್ಷಣಾ ಖಾತೆಗಳ ನಿಯಂತ್ರಕ ಜನರಲ್ (ಸಿಜಿಡಿಎ), ರಕ್ಷಣಾ ಸಚಿವಾಲಯ – 3 ಹುದ್ದೆಗಳು
• ಕೇಂದ್ರ ಪಾಸ್ಪೋರ್ಟ್ ಕಚೇರಿ, ವಿದೇಶಾಂಗ ಸಚಿವಾಲಯ – 5 ಹುದ್ದೆಗಳು
• ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC), ಕಂದಾಯ ಇಲಾಖೆ, ಹಣಕಾಸು ಸಚಿವಾಲಯ – 35 ಹುದ್ದೆಗಳು
• ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ, ಜಲಶಕ್ತಿ ಸಚಿವಾಲಯ -2 ಹುದ್ದೆಗಳು
• ಅಭಿವೃದ್ಧಿ ಆಯುಕ್ತರ ಕಚೇರಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ – 5 ಹುದ್ದೆಗಳು
• ಗಣಿ ಸಚಿವಾಲಯ – 8 ಹುದ್ದೆಗಳು
• ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ – 3 ಹುದ್ದೆಗಳು
• ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಆಡಳಿತ-III) – 4 ಹುದ್ದೆಗಳು
• ರೈಲ್ವೆ ಮಂಡಳಿ, ರೈಲ್ವೆ ಸಚಿವಾಲಯ – 2 ಹುದ್ದೆಗಳು
• ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT), ಆದಾಯ ತೆರಿಗೆ ನಿರ್ದೇಶನಾಲಯ ಮಾನವ ಸಂಪನ್ಮೂಲ ಅಭಿವೃದ್ಧಿ, ಹಣಕಾಸು ಸಚಿವಾಲಯ – 24 ಹುದ್ದೆಗಳು
• ಆರೋಗ್ಯ ಸೇವೆಗಳ ಮಹಾ ನಿರ್ದೇಶನಾಲಯ (DGHS), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ – 3 ಹುದ್ದೆಗಳು
• ಕೇಂದ್ರ ಮೀಸಲು ಪೊಲೀಸ್ ಪಡೆಗಳು (CRPF) – 312 ಹುದ್ದೆಗಳು
ಒಟ್ಟು 437 ಸಂಯೋಜಿತ ಹಿಂದಿ ಅನುವಾದಕರ (JHT) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
Important Direct Links: