SSLC Scanned Copy Application 2024: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ರ ಫಲಿತಾಂಶವನ್ನು ಗುರುವಾರ (ಮೇ 9) ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಫಲಿತಾಂಶವನ್ನು ಪರೀಕ್ಷಾ ಮಂಡಳಿಯು ತನ್ನ ಅಧಿಕೃತ ವೆಬ್ಸೈಟಿನಲ್ಲಿ ಪ್ರಕಟಿಸಿದ್ದು ಈಗಾಗಲೇ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ತಿಳಿದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ತಮ್ಮ ಅಂಕದ ಮೇಲೆ ಯಾವುದೇ ಸಂದೇಹವಿದ್ದರೆ ಅಥವಾ ಪಡೆದ ಅಂಕಗಳ ಮೇಲೆ ತೃಪ್ತಿ ಇಲ್ಲದಿದ್ದರೆ ವಿದ್ಯಾರ್ಥಿಗಳು ತಮ್ಮ ಉತ್ತರ ಪ್ರತಿಯ ಸ್ಕ್ಯಾನ್ ಕಾಪಿಯನ್ನು ಪಡಿಯಬಹುದು ಎಂದು ಪರೀಕ್ಷಾ ಮಂಡಳಿಯು ತಿಳಿಸಿದೆ.
ಮೌಲ್ಯಮಾಪನವಾಗಿರುವ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ, ಮರುಎಣಿಕೆ, ಮರುಮೌಲ್ಯಮಾಪನ ಪ್ರಕ್ರಿಯೆ ನಡೆಸುವುದಕ್ಕೆ ಮಂಡಲಿಯು ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಂತೆ, ಉತ್ತರ ಪ್ರತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಕೆ ಮೇ 9ರಂದೇ ಶುರುವಾಗಿದ್ದು, ಮೇ 16 ಕೊನೇ ದಿನವಾಗಿರುತ್ತದೆ. ಇದಕ್ಕೆ ಶುಲ್ಕ ಪಾವತಿಸಬೇಕಾಗಿದ್ದು, ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ ಇಲ್ಲದವರು ಆನ್‌ಲೈನ್‌ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ಡ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ ಬಳಿಕ, ಅಫ್‌ಲೈನ್ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕವನ್ನು ಬಿ1/ಕೆ1/ಬ್ಯಾಂಕಿಗೆ ಪಾವತಿಸಬೇಕು. ಶುಲ್ಕ ಪಾವತಿ ಕೂಡ ಇಂದು ಶುರುವಾಗಿದ್ದು, ಶುಲ್ಕ ಪಾವತಿ ಮಾಡಲು ಮೇ 17 ಕೊನೇ ದಿನವಾಗಿರಲಿದೆ. ಉತ್ತರ ಪತ್ರಿಕೆಗಳಲ್ಲಿ ಅಂಕಗಳ ಮರುಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮೇ 13ಕ್ಕೆ ಶುರವಾಗಲಿದ್ದು ಮೇ 22 ಕೊನೇ ದಿನವಾಗಿರಲಿದೆ. ಇದಕ್ಕೂ ಶುಲ್ಕಪಾವತಿಸಬೇಕಾಗಿದ್ದು, ಶುಲ್ಕಪಾವತಿಗೆ ಮೇ 23 ಕೊನೇ ದಿನಾಂಕವಾಗಿದೆ.