AISSEE 2026: ಮುಂಗಡ ಸಿಟಿ ಇಂಟಿಮೇಶನ್ ಸ್ಲಿಪ್ ಬಿಡುಗಡೆ
2026ರ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ(AISSEE)ಗೆ ಸಂಬಂಧಿತ ಪ್ರವೇಶ ಪರೀಕ್ಷೆ ಜ.18 ರಂದು ಜರುಗಲಿದ್ದು, ಪರೀಕ್ಷೆಯ ಮುಂಗಡ ಪರೀಕ್ಷಾ ಸಿಟಿ ಇಂಟಿಮೇಶನ್ ಸ್ಲಿಪ್ ಅನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಮಂಗಳವಾರ(ಜ.06) ಬಿಡುಗಡೆಗೊಳಿಸಿದೆ. ದೇಶಾದ್ಯಂತ ಒಟ್ಟು 464 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ. ಸದರಿ ಪರೀಕ್ಷೆಯ ಸಿಟಿ ಇಂಟಿಮೇಶನ್ ಸ್ಲಿಪ್ ಅನ್ನು NTA ಅಧಿಕೃತ ಜಾಲತಾಣ https://exams.nta.nic.in/sainik-school-society/ದಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ನಮೂದಿಸುವ ಮೂಲಕ ಯಾವ ನಗರದಲ್ಲಿ ಪರೀಕ್ಷೆ … More