ಬಿ.ಇಡಿ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

2025ನೇ ಸಾಲಿಗೆ ಬಿ.ಇಡಿ ದಾಖಲಾತಿಗೆ ಸಂಬಂಧಿಸಿದ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆ ಸೋಮವಾರ ಪ್ರಕಟಿಸಿದೆ. ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಕಾಲೇಜಿಗೆ ದಾಖಲಾಗದ ಹಾಗೂ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳಿಗೆ ಅಭಿಮತ ದಾಖಲಿಸಲು ಡಿ.8 ರಿಂದ ಡಿ.10ವರೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಅರ್ಹ ಅಭ್ಯರ್ಥಿಗಳ ಎರಡನೇ ಸೀಟು ಹಂಚಿಕೆ ಫಲಿತಾಂಶ ಪಟ್ಟಿಗಳನ್ನು ಇಲಾಖೆಯ ಅಧಿಕೃತ ಜಾಲತಾಣದ ಲಿಂಕ್‌ https://sts.karnataka.gov.in/GPSTRHK/ದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ … More

ಬಿ.ಇಡಿ 2ನೇ ಸುತ್ತಿನ ಸೀಟು ಹಂಚಿಕೆ; ಆಯ್ಕೆ ನಮೂದಿಗೆ ಅವಕಾಶ

2025ನೇ ಸಾಲಿನ ಬಿ.ಇಡಿ ದಾಖಲಾತಿ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆಗಾಗಿ ಅಭ್ಯರ್ಥಿಗಳು ತಮ್ಮ ಆಯ್ಕೆ ನಮೂದಿಸಲು ಡಿ.8 ರಿಂದ ಅವಕಾಶ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಕಾಲೇಜಿಗೆ ದಾಖಲಾಗದ ಹಾಗೂ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳು ಡಿ.8 ರಿಂದ ಡಿ.10ರೊಳಗೆ ಇಲಾಖೆಯ ವೆಬ್‌ಸೈಟ್‌ https://sts.karnataka.gov.in/GPSTRHK/NewLogin.aspx ಮೂಲಕ ಸೀಟ್‌ ಮ್ಯಾಟ್ರಿಕ್‌ ಪ್ರಕಾರ ಇಲಾಖೆ ಪ್ರಕಟಿಸಿರುವ ಕಾಲೇಜುಗಳಿಗೆ ಆಯ್ಕೆ ನಮೂದಿಸಲು ಕೋರಲಾಗಿದೆ. ಮೊದಲ … More

ಬಿ.ಇಡಿ ಪ್ರವೇಶಾತಿ 2025: ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

2025-26ನೇ ಸಾಲಿನ ಬಿ.ಇಡಿ ಕೋರ್ಸ್‌ ಪ್ರವೇಶಾತಿಗೆ ಸಂಬಂಧಿಸಿದ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆಯು ಮಂಗಳವಾರ ಪ್ರಕಟಿಸಿದೆ. ಅರ್ಜಿ ಸಲ್ಲಿಕೆಗೆ ಅ.3 ರಿಂದ ನ.3ವರೆಗೆ ಅವಕಾಶ ನೀಡಲಾಗಿತ್ತು. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಕಾಲೇಜುಗಳನ್ವಯ ರೋಸ್ಟರ್‌ ಮತ್ತು ಮೆರಿಟ್‌ ಆಧಾರದಲ್ಲಿ ಸೀಟು ಹಂಚಿಕೆ ಪಟ್ಟಿ ತಯಾರಿಸಿ ಇಲಾಖೆಯ ವೆಬ್‌ಸೈಟ್‌ https://sts.karnataka.gov.in/GPSTRHK/ನಲ್ಲಿ ಬಿಡುಗಡೆ ಮಾಡಲಾಗಿದ್ದು, ಹಂಚಿಕೆಯಾದ ಕಾಲೇಜುಗಳಿಗೆ ಸೇರಬಯಸಿದಲ್ಲಿ ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡ್‌ ಬಳಸಿ ನ.25 ರಿಂದ ಡಿ.5ರೊಳಗೆ ನಿಗದಿತ ಶುಲ್ಕದ … More

B.Ed Admission 2025-26: ಸರ್ಕಾರಿ ಕೋಟಾ; ಬಿ.ಇಡ್‌ ಕೋರ್ಸ್‌ ಪ್ರವೇಶಕ್ಕೆ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನ ಎರಡು ವರ್ಷಗಳ ಬಿ.ಇಡ್‌ ಕೋರ್ಸ್‌ಗೆ ಸರ್ಕಾರಿ ಕೋಟಾದಡಿಯಲ್ಲಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಶೇ.50 ಅಂಕಗಳೊಂದಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ರೋಸ್ಟರ್‌ ಮತ್ತು ಮೆರಿಟ್‌ ಆಧಾರದಲ್ಲಿ ಅಭ್ಯರ್ಥಿಯು ಆಯ್ಕೆ ಮಾಡಿಕೊಂಡಿರುವ ಕಾಲೇಜುಗಳ ಅನುಸಾರ ಸೀಟು ಹಂಚಿಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ನ.3 ಕೊನೆ ದಿನವಾಗಿದೆ. ಆಸಕ್ತರು https://sts.karnataka.gov.in/GPSTRHK/ನ ಮೂಲಕ ಅರ್ಜಿ ಸಲ್ಲಿಸಬಹುದು … More