ಮೈಸೂರಿನಲ್ಲಿ NHM ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ; ಹೀಗೆ ಅಪ್ಲೈ ಮಾಡಿ

ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿ, ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ವಿವಿಧ ವೃಂದಗಳಲ್ಲಿ ಖಾಲಿ ಇರುವ (ಅರವಳಿಕೆ ತಜ್ಞರು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಒಟಿ ಟೆಕ್ನಿಷಿಯನ್, ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಶುಶ್ರೂಷಕ ಅಧಿಕಾರಿಗಳು) ಸೇರಿದಂತೆ ಇತರೆ ಒಟ್ಟು 67 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ … More

ಸುಪ್ರೀಂ ಕೋರ್ಟ್(SCI)ನಲ್ಲಿ ಗುಮಾಸ್ತ ಹುದ್ದೆಗಳ ಭರತಿ..!

ಭಾರತದ ಸರ್ವೋಚ್ಚ ನ್ಯಾಯಾಲಯ(SCI) ಅಲ್ಪಾವಧಿಯ ಒಪ್ಪಂದದ ನಿಯೋಜನೆ ಆಧಾರದಲ್ಲಿ ಕಾನೂನು ಗುಮಾಸ್ತ-ಕಮ್-ಸಂಶೋಧನಾ ಸಹವರ್ತಿ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 90 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನೇಮಕ ನಡೆಯಲಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಫೆ.07ರೊಳಗೆ ನ್ಯಾಯಾಲಯದ ಅಧಿಕೃತ ವೆಬ್ಸೈಟ್ https://www.sci.gov.in/recruitments/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ನೇಮಕ ಪ್ರಕ್ರಿಯೆಯು ಮೂರು ಭಾಗಗಳನ್ನು ಒಳಗೊಂಡಿದೆ. ಆನ್‌ಲೈನ್‌ MCQ ಆಧಾರಿತ ಪರೀಕ್ಷೆ, ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕಂಪ್ಯೂಟರ್‌ನಲ್ಲಿ ಪರದೆ ಮಾಡಲಾಗುವುದು ಅಭ್ಯರ್ಥಿಗಳು ಉತ್ತರಗಳನ್ನು ನೀಡಲಾದ ಉತ್ತರ … More

ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಘ(KSRLPS)ದಲ್ಲಿ ನೌಕರಿ…

ಕೋಲಾರ: ಜಿಲ್ಲೆಯ ಮಾಲೂರು, ಕೋಲಾರ, ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ತಾಲೂಕುಗಳಲ್ಲಿ ವಿವಿಧ ಖಾಲಿ ಹುದ್ದೆಗಳ ಭರ್ತಿಗಾಗಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಘ(KSRLPS) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕ್ಲಸ್ಟರ್ ಮೇಲ್ವಿಚಾರಕ(03), ಬ್ಲಾಕ್ ಮ್ಯಾನೇಜರ್(06), ಕಚೇರಿ ಸಹಾಯಕ(01) ಮತ್ತು ಜಿಲ್ಲಾ ವ್ಯವಸ್ಥಾಪಕ(01) ಸೇರಿದಂತೆ ಒಟ್ಟು 11 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಸಕ್ತರು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ, ಅರ್ಜಿ ಸಲ್ಲಿಸಲು ಜ.30ರೊಳಗೆ ಕೆಎಸ್‌ಆರ್‌ಎಲ್‌ಪಿಎಸ್‌ ಅಧಿಕೃತ ಜಾಲತಾಣ https://jobsksrlps.karnataka.gov.in/ಕ್ಕೆ ಭೇಟಿ ನೀಡಿ. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: … More

ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ(K-RIDE)ಯಲ್ಲಿ ಮ್ಯಾನೇಜರ್ ಹುದ್ದೆಗಳು

ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾಗಿರುವ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ(ಕರ್ನಾಟಕ) ಲಿಮಿಟೆಡ್‌ನಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ವಿವಿಧ ವಿಭಾಗಗಳಲ್ಲಿ 09 ಅಭ್ಯರ್ಥಿಗಳನ್ನು ಡೆಪ್ಯುಟೇಶನ್/ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಫೆ.16ರೊಳಗೆ ಕೆ-ರೈಡ್‌ ಅಧಿಕೃತ ಜಾಲತಾಣ https://kride.in/careers-in-k-ride/ಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಹುದ್ದೆಗಳ ವಿವರ: ಜನರಲ್ ಮ್ಯಾನೇಜರ್- 04 ಹುದ್ದೆಗಳುಜನರಲ್ … More

ಪದವೀಧರರಿಗೆ ನಬಾರ್ಡ್‌ನಲ್ಲಿ ಉದ್ಯೋಗಾವಕಾಶ

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌(NABARD) ತನ್ನ ಪ್ರಾದೇಶಿಕ ಕಚೇರಿಗಳಲ್ಲಿ ಖಾಲಿ ಇರುವ ಅಭಿವೃದ್ಧಿ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸೇರಿದಂತೆ 25 ಪ್ರಾದೇಶಿಕ ಕಚೇರಿಗಳಿಗೆ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಅಭಿವೃದ್ಧಿ ಸಹಾಯಕ(159) ಹಾಗೂ ಅಭಿವೃದ್ಧಿ ಸಹಾಯಕ – ಹಿಂದಿ (03) ಸೇರಿ ಒಟ್ಟು 162 ಪದವೀಧರ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಫೆ.03 ರೊಳಗೆ ಐಬಿಪಿಎಸ್‌ನ ಅಧಿಕೃತ ಜಾಲತಾಣ https://ibpsreg.ibps.in/nabhindec25/ದ ಮೂಲಕ ಅರ್ಜಿ ಸಲ್ಲಿಸಬಹುದು. … More

ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ‘ಅಪ್ರೆಂಟಿಸ್‌ಶಿಪ್‌’

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕಿನ ಪಟ್ಟಿಯಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ 600 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಂಡು ಅಪ್ರೆಂಟಿಸ್ ತರಬೇತಿ ನೀಡಲಿದೆ. ಆಸಕ್ತರು ಜ.25ರೊಳಗೆ ಅರ್ಜಿ ಸಲ್ಲಿಸಬಹುದು. ತನ್ನ 29 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಶಾಖೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು 1 ವರ್ಷದ ಅವಧಿವರೆಗೆ ತರಬೇತಿ ನೀಡಲಿದೆ. ಯಾವುದೇ ಪದವೀಧರರು ಅರ್ಜಿ ಸಲ್ಲಿಕೆಗೆ ಅರ್ಹರು. ಮೆರಿಟ್‌ ಆಧಾರಿತ ಆಯ್ಕೆ ಪ್ರಕ್ರಿಯೆ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಐಬಿಪಿಎಸ್‌ ಅಧಿಕೃತ ವೆಬ್ಸೈಟ್ ಲಿಂಕ್‌ https://ibpsreg.ibps.in/bomdec25/ಗೆ ಭೇಟಿ … More

ನ್ಯೂಸ್ಪೇಸ್ ಇಂಡಿಯಾ(NSIL)ನಲ್ಲಿ ಸಲಹೆಗಾರ ಹುದ್ದೆಗಳು

ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆ (DOS)ದಡಿ ಬರುವ ಬೆಂಗಳೂರಿನ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL)ನಲ್ಲಿ ವಿವಿಧ ಸಲಹೆಗಾರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ವಿವಿಧ ವಿಭಾಗದಲ್ಲಿ ಒಟ್ಟು 11 ಸ್ಥಾನಗಳಿಗೆ ಒಪ್ಪಂದದ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಕೆಗೆ ಜ.31 ಕೊನೆಯ ದಿನವಾಗಿದೆ. ಅಧಿಕೃತ ಜಾಲತಾಣ https://www.nsilindia.co.in/careerದ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಹುದ್ದೆಗಳ ವಿವರ: ಹಿರಿಯ ಸಲಹೆಗಾರ – 01 ಹುದ್ದೆಸಲಹೆಗಾರ(ಹಣಕಾಸು) – 01 ಹುದ್ದೆಯುವ ಸಲಹೆಗಾರ – … More

MOILನಲ್ಲಿ ವಿವಿಧ ಟ್ರೈನಿ, ಮ್ಯಾನೇಜರ್ ಹುದ್ದೆಗಳ ನೇಮಕಾತಿ

ದೇಶದ ಅತಿದೊಡ್ಡ ಮ್ಯಾಂಗನೀಸ್ ಅದಿರು ಉತ್ಪಾದಕ ಸಂಸ್ಥೆಯಾಗಿರುವ ಮ್ಯಾಂಗನೀಸ್ ಓರ್ ಇಂಡಿಯಾ ಲಿಮಿಟೆಡ್ (MOIL) ಗ್ರಾಜುಯೇಟ್ ಟ್ರೈನಿ, ಮ್ಯಾನೇಜ್ಮೆಂಟ್ ಟ್ರೈನಿ ಹಾಗೂ ಮ್ಯಾನೇಜರ್(ಸಮೀಕ್ಷೆ) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ವಿವಿಧ ವಿಭಾಗಗಳಿಗೆ ಗ್ರಾಜುಯೇಟ್ ಟ್ರೈನಿ(49), ಮ್ಯಾನೇಜ್ಮೆಂಟ್ ಟ್ರೈನಿ(15) ಹಾಗೂ ಮ್ಯಾನೇಜರ್(03) ಸೇರಿದಂತೆ ಒಟ್ಟು 67 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಿದೆ. ಸಂಬಂಧಿತ ವಿಷಯದಲ್ಲಿ ಬಿ.ಇ/ಬಿ.ಟೆಕ್/ಎಂ.ಟೆಕ್/ಡಿಪ್ಲೋಮಾ/ಪದವೀಧರರು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಜ.20ರೊಳಗೆ ಅರ್ಜಿ ಸಲ್ಲಿಸಲು IBPS ಅಧಿಕೃತ ಜಾಲತಾಣದ ಲಿಂಕ್‌ https://ibpsreg.ibps.in/moildec25/ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸುವ … More

ದಕ್ಷಿಣ ಪೂರ್ವ ರೈಲ್ವೆ(SER)ನಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ

ದಕ್ಷಿಣ ಪೂರ್ವ ರೈಲ್ವೆ, ಕೋಲ್ಕತ್ತಾ 2025-26ನೇ ಸಾಲಿನ ಕ್ರೀಡಾಕೋಟಾದಡಿ ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಕೋಶವು ಅರ್ಜಿ ಆಹ್ವಾನಿಸಿದೆ. ಗ್ರೂಪ್ ಸಿ (21) ಹಾಗೂ ಗ್ರೂಪ್ ಡಿ(33) ಸೇರಿದಂತೆ ಒಟ್ಟು 54 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಇಲಾಖೆ ಅಧಿಸೂಚನೆಯಲ್ಲಿ ಗೊತ್ತುಪಡಿಸಿದ ಕ್ರೀಡೆಯಲ್ಲಿ ಸಾಧನೆಗೈದ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಅರ್ಜಿ ಸಲ್ಲಿಕೆಗೆ ಅರ್ಹರು. ಫೆ.09 ರೊಳಗೆ ದಕ್ಷಿಣ ಪೂರ್ವ ರೈಲ್ವೆಯ ಅಧಿಕೃತ ಜಾಲತಾಣ https://iroams.com/rrc_ser_sports2025/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. … More

ರಿಸರ್ವ್ ಬ್ಯಾಂಕಿ(RBI)ನಲ್ಲಿ ಎಸ್ಸೆಸ್ಸೆಲ್ಸಿ ಆದವರಿಗೆ ಆಫೀಸ್ ಅಟೆಂಡೆಂಟ್ ಹುದ್ದೆ…

ಭಾರತೀಯ ರಿಸರ್ವ್ ಬ್ಯಾಂಕ್‌ (RBI) ತನ್ನ ಪ್ರಾದೇಶಿಕ ಕಚೇರಿಗಳಲ್ಲಿ ಖಾಲಿರುವ ಆಫೀಸ್ ಅಟೆಂಡೆಂಟ್(ಕಚೇರಿ ಪರಿಚಾರಕ) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ಒಟ್ಟು 572 ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಫೆ.04 ರೊಳಗೆ IBPS ಅಧಿಕೃತ ಜಾಲತಾಣದ ಲಿಂಕ್‌ https://ibpsreg.ibps.in/rbipodec25/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ವಲಯವಾರು ಖಾಲಿ ಇರುವ ಹುದ್ದೆಗಳ ವಿವರ: ಅಹಮದಾಬಾದ್ … More