ಹೋಮಿಯೋಪತಿ, ಆಯುರ್ವೇದ ತಜ್ಞ ವೈದ್ಯರ ನೇಮಕಾತಿ

ಕೋಲಾರ: ಜಿಲ್ಲಾ ಆಯುಷ್ ಇಲಾಖೆ ವ್ಯಾಪ್ತಿಯಡಿ ಬರುವ ಆಯುಷ್ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಖಾಲಿ ಇರುವ ಹೋಮಿಯೋಪತಿ ತಜ್ಞ ವೈದ್ಯ ಮತ್ತು ಆಯುರ್ವೇದ ತಜ್ಞ ವೈದ್ಯರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ಸರ್ಕಾರಿ ಹೋಮಿಯೋಪತಿ ಆಸ್ಪತ್ರೆ ಹಾಗೂ ಶ್ರೀನಿವಾಸಪುರ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಸಂಬಂಧಿತ ವಿಷಯದಲ್ಲಿ ಎಂಎಸ್‌/ಎಂಡಿ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು … More

ಕರ್ನಾಟಕ ಸ್ಟೇಟ್ ಮಿನರಲ್ಸ್‌ ಕಾರ್ಪೊರೇಷನ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಬೆಂಗಳೂರು: ಪ್ರತಿಷ್ಠಿತ ಗಣಿಗಾರಿಕೆ ಸಂಸ್ಥೆಯಾಗಿರುವ ಕರ್ನಾಟಕ ಸ್ಟೇಟ್ ಮಿನರಲ್ಸ್‌ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಧಾನ ವ್ಯವಸ್ಥಾಪಕರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ರಾಜ್ಯದಾದ್ಯಂತ ಇರುವ ತನ್ನ ಗಣಿ/ಘಟಕಗಳಲ್ಲಿ ಕಾರ್ಯ ನಿರ್ವಹಿಸಲು ವಿವಿಧ ವೃಂದದ ಸಹಾಯಕ ವ್ಯವಸ್ಥಾಪಕರು, ಸಹಾಯಕ ಅಭಿಯಂತರು ಹಾಗೂ ಗಣಿ ಸಂಗಾತಿ, ಗಣಿ ಮುಂದಾಳು ಸೇರಿದಂತೆ ಇತರೆ ಒಟ್ಟು 50 ಹುದ್ದೆಗಳಿಗೆ 11 ತಿಂಗಳ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಸಂದರ್ಶನ … More

ಶಿವಮೊಗ್ಗ | ಜಿಲ್ಲಾ ನ್ಯಾಯಾಲಯಗಳಲ್ಲಿ ಉದ್ಯೋಗಾವಕಾಶ

ಶಿವಮೊಗ್ಗ: ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಘಟಕ ಅಧೀನದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಜವಾನ(56) ಮತ್ತು ಆದೇಶ ಜಾರಿಕಾರ(06) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದೆ. ಎಸ್‌.ಎಸ್‌.ಎಲ್‌.ಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಕನಿಷ್ಠ 18 ವಯೋಮಾನದ ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣ https://shivamogga.dcourts.gov.in/notice-category/recruitments/ದಲ್ಲಿ ಲಭ್ಯವಿರುವ ಲಿಂಕ್‌ ಮೂಲಕ ಆ.24ರೊಳಗೆ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಜವಾನ(ಪ್ಯೂನ್‌), ಆದೇಶ ಜಾರಿಕಾರ ಹುದ್ದೆಗೆ; ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸುವ ಎಸ್‌.ಎಸ್‌.ಎಲ್‌.ಸಿ ಅಥವಾ … More

ಈಶಾನ್ಯ ಗಡಿ ರೈಲ್ವೆಯಲ್ಲಿ ‘ಅಪ್ರೆಂಟಿಸ್‌ಶಿಪ್‌’

ಅಸ್ಸಾಂ/ಗವಾಹಟಿ: ಈಶಾನ್ಯ ಗಡಿ ರೈಲ್ವೆ (ನಾರ್ಥ್ ಈಸ್ಟ್ ಫ್ರಂಟಿಯರ್ ರೈಲ್ವೆ-NFR)ಯಲ್ಲಿ 1961ರ ಅಪ್ರೆಂಟಿಸ್‌ ಕಾಯ್ದೆಯಡಿ ಅಪ್ರೆಂಟಿಸ್‌ಶಿಪ್‌ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ರೈಲ್ವೆ ವ್ಯಾಪ್ತಿಗೊಳಪಡುವ ಕಾರ್ಯಾಗಾರಗಳು, ಘಟಕಗಳಿಗೆ ಒಟ್ಟು 6777 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ಒದಗಿಸಲಿದೆ. ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಅಥವಾ ದ್ವಿತೀಯ ಪಿಯುಸಿ(ವಿಜ್ಞಾನ ವಿಭಾಗ)ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸದರಿ ತರಬೇತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ https://app.nfr-recruitment.in/#/auth/landingಗೆ ಭೇಟಿ ನೀಡಿ. ಆಯಾ ಟ್ರೇಡ್‌/ವಿಭಾಗ/ಇಲಾಖೆಗಳಿಗೆ ಅನುಗುಣವಾಗಿ 6 ತಿಂಗಳಿಂದ 1 ವರ್ಷದವರೆಗೆ ಹಾಗೂ ಇದಕ್ಕಿಂದ ಹೆಚ್ಚಿನ ಅವಧಿಯ … More

ಸೆಂಟ್ರಲ್‌ ರೈಲ್ವೆ: ಕ್ರೀಡಾ ಕೋಟಾದಡಿ ಭರ್ತಿ

ಮುಂಬೈ: ಸೆಂಟ್ರಲ್‌ ರೈಲ್ವೆಯು 2026-27ನೇ ಸಾಲಿನ ಕ್ರೀಡಾ ಕೋಟಾದಡಿ 21 ಗ್ರೂಪ್‌ ಸಿ ಹುದ್ದೆ ಹಾಗೂ 38 ಲೆವೆಲ್‌-1 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. 05 ಲೆವೆಲ್‌-5/4 ಹುದ್ದೆಗಳು, 16 ಲೆವೆಲ್‌-3/2 ಹುದ್ದೆಗಳು, 38 ಲೆವೆಲ್‌-1 ಹುದ್ದೆಗಳಿಗೆ ನೇಮಕಾತಿಗೆ ನಡೆಯಲಿದೆ. ಪದವಿ, ಪಿಯುಸಿ, ಐಟಿಐ ಮತ್ತು ಎಸ್ಸೆಸ್ಸೆಲ್ಸಿ ಜೊತೆಗೆ ಕ್ರೀಡಾ ಸಾಧನೆ ಮಾಡಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://www.rrccr.com/Home/Home_SubHeader?token=9xGKBuwIJajTWqRXmZB2Cw%3d%3dಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರಮುಖ … More

15000 ಶಿಕ್ಷಕರ ನೇಮಕಾತಿಗೆ ಸರ್ಕಾರ ಸಜ್ಜು

ಬೆಂಗಳೂರು: ಶಿಕ್ಷಕರಾಗಬೇಕು ಎಂಬ ಕನಸ್ಸಿನ ಬೀಜ ಬಿತ್ತಿ, ಹಲವು ವರ್ಷಗಳಿಂದ ಕಾದು ಕುಳಿತಿದ್ದ ಶಿಕ್ಷಕ ವೃತ್ತಿ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು 15 ಸಾವಿರ ಶಿಕ್ಷಕರ ನೇಮಕಾತಿಗೆ ಜು.14ರಂದು ಕರಡು ಅಧಿಸೂಚನೆ(ಗೆಜೆಟ್‌) ಹೊರಡಿಸಿದ್ದು, ಇದು ಬರಗಾಲದಲ್ಲಿ ಮಳೆ ಹುಯ್ದಂತಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರು(1 ರಿಂದ 5ನೇ ತರಗತಿ), ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್‌ II(1 ರಿಂದ 8ನೇ ತರಗತಿ), ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್‌ I, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು(6ರಿಂದ 8ನೇ ತರಗತಿ), ಗಣಕ ವಿಜ್ಞಾನ ಶಿಕ್ಷಕರು(1 … More

‘ಕರ್ನಾಟಕ ಲೋಕಾಯುಕ್ತ’ದಲ್ಲಿ ಉದ್ಯೋಗಾವಕಾಶ

ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿರುವ ಗ್ರೂಪ್-ಸಿ ವೃಂದದ ಕ್ಲರ್ಕ್‌-ಕಂ-ಟೈಪಿಸ್ಟ್‌ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದೆ. ಕೆಕೆ ವೃಂದದ ಒಂದು ಸ್ಥಾನ ಹಾಗೂ ಆರ್‌ಪಿಸಿ ವೃಂದದಲ್ಲಿ 25 ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಅರ್ಹತಾ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿದ್ದು, ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರು ಆ.17ರೊಳಗೆ ಸಂಸ್ಥೆಯ ಅಧಿಕೃತ ಜಾಲತಾಣ https://lokayukta.karnataka.gov.in/home_kan.phpಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ … More

ಯಾದಗಿರಿ | ಫಾರ್ಮಸಿ, ತಾಂತ್ರಿಕ ಅಧಿಕಾರಿಗಳ ನೇಮಕಾತಿ

ಯಾದಗಿರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಅಧೀನ ಸಂಸ್ಥೆಗಳಿಗೆ 11 ಫಾರ್ಮಸಿ ಅಧಿಕಾರಿ ಹಾಗೂ 15 ಕಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಅರ್ಹತೆ ಜೊತೆಗೆ ನಿಗದಿತ ಅನುಭವ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಜು.09 ರಿಂದ 18ರೊಳಗೆ ಅಧಿಕೃತ ಜಾಲತಾಣ https://yadgiri.nic.in ಮತ್ತು https://zpyadgiri. karnataka.gov.inಗಳ ಮೂಲಕ … More

ಇಂಡಿಯನ್‌ ಆಯಿಲ್‌: ನಾನಾ ರಿಫೈನರಿ ಘಟಕಗಳಲ್ಲಿ ಅಪ್ರೆಂಟಿಸ್‌ ತರಬೇತಿ

2026-27ನೇ ಸಾಲಿಗೆ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ ತನ್ನ ವಿವಿಧ ರಿಫೈನರಿ ಘಟಕಗಳಿಗೆ ಅಪ್ರೆಂಟಿಸ್‌ ಕಾಯಿದೆಯಡಿ ನಾನಾ ಟ್ರೇಡ್‌ ಅಪ್ರೆಂಟಿಸ್‌ ಮತ್ತು ಟೆಕ್ನಿಷಿಯನ್‌ ಅಪ್ರೆಂಟಿಸ್‌ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಬರೌನಿ, ಪರದೀಪ್ , ಮಥುರಾ , ಹಲ್ಡಿಯಾ , ಗವಾಹಟಿ , ಬೊಂಗೈಗಾಂವ್, ಎಓಡಿ ಡಿಗ್ಬೋಯ್ ಮತ್ತು ಗುಜರಾತ್‌ ರಿಫೈನರಿ ಘಟಕಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಯಾ ವಿಭಾಗ/ಟ್ರೇಡ್‌ ಅನುಗುಣವಾಗಿ ಒಂದು ವರ್ಷದಿಂದ ಎರಡು ವರ್ಷದವರೆಗೆ ತರಬೇತಿ ನೀಡಲಿದೆ. ಆಸಕ್ತ ಅಭ್ಯರ್ಥಿಗಳು https://apprenticeshipindia.gov.in/ ಅಥವಾ https://nats.education.gov.in/ನ ಮೂಲಕ … More

ಯಾದಗಿರಿ | ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿ; ಪರಿಷ್ಕೃತ ಅಧಿಸೂಚನೆ ಪ್ರಕಟ

ಯಾದಗಿರಿ: ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ 12 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಜು.12 ರಿಂದ 26ರೊಳಗೆ ಜಿಲ್ಲಾ ಪಂಚಾಯತಿಯ ಅಧಿಕೃತ ವೆಬ್ ಸೈಟ್ https://zpyadgir.karnataka.in ಮೂಲಕ ಯಾದಗಿರಿ, ಸುರಪುರ, ಗುರಮಿಠಕಲ್‌, ವಡಗೇರಾ, ಹುಣಸಗಿ, ನಾರಾಯಣಪೂರ, ರಾಜನಕೊಳ್ಳೂರು ವ್ಯಾಪ್ತಿಯ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು … More