15000 ಶಿಕ್ಷಕರ ನೇಮಕಾತಿಗೆ ಸರ್ಕಾರ ಸಜ್ಜು

Published on:

Updated On:

ಬೆಂಗಳೂರು: ಶಿಕ್ಷಕರಾಗಬೇಕು ಎಂಬ ಕನಸ್ಸಿನ ಬೀಜ ಬಿತ್ತಿ, ಹಲವು ವರ್ಷಗಳಿಂದ ಕಾದು ಕುಳಿತಿದ್ದ ಶಿಕ್ಷಕ ವೃತ್ತಿ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು 15 ಸಾವಿರ ಶಿಕ್ಷಕರ ನೇಮಕಾತಿಗೆ ಜು.14ರಂದು ಕರಡು ಅಧಿಸೂಚನೆ(ಗೆಜೆಟ್‌) ಹೊರಡಿಸಿದ್ದು, ಇದು ಬರಗಾಲದಲ್ಲಿ ಮಳೆ ಹುಯ್ದಂತಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರು(1 ರಿಂದ 5ನೇ ತರಗತಿ), ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್‌ II(1 ರಿಂದ 8ನೇ ತರಗತಿ), ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್‌ I, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು(6ರಿಂದ 8ನೇ ತರಗತಿ), ಗಣಕ ವಿಜ್ಞಾನ ಶಿಕ್ಷಕರು(1 ರಿಂದ 8ನೇ ತರಗತಿ) ಮತ್ತು ಪ್ರೌಢಶಾಲಾ ಸಹ ಶಿಕ್ಷಕರು ಸೇರಿದಂತೆ ಕೆಕೆ ವೃಂದದಲ್ಲಿ 6,967 ಸ್ಥಾನ ಹಾಗೂ ಉಳಿಕೆ ಮೂಲಕ ವೃಂದದಲ್ಲಿ 8,033 ಸ್ಥಾನಗಳ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಆಕ್ಷೇಪಣೆಗೆ ಅವಕಾಶ: ಪ್ರಕಟಿತ ಕರಡು ಅಧಿಸೂಚನೆಗೆ 15 ದಿನಗಳೊಳಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ. ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಶೀಲನೆಯ ನಂತರ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ.

ಹುದ್ದೆಗಳ ವಿವರಗಳು:

ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ)ಕೆಕೆ 800 + ಆರ್‌ಪಿಸಿ 100 = 900
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್‌ II (1 ರಿಂದ 8ನೇ ತರಗತಿ)ಕೆಕೆ 106 + ಆರ್‌ಪಿಸಿ 44 = 150
ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್‌ I)ಕೆಕೆ 319 + ಆರ್‌ಪಿಸಿ 131 = 450
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6ರಿಂದ 8ನೇ ತರಗತಿ)ಕೆಕೆ 3228 + ಆರ್‌ಪಿಸಿ 5272 = 8500
ಗಣಕ ವಿಜ್ಞಾನ ಶಿಕ್ಷಕ(1 ರಿಂದ 8ನೇ ತರಗತಿ)ಕೆಕೆ 300 + ಆರ್‌ಪಿಸಿ 200 = 500
ಪ್ರೌಢಶಾಲಾ ಸಹ ಶಿಕ್ಷಕರುಕೆಕೆ 2214 + ಆರ್‌ಪಿಸಿ 2286 = 4500
ಒಟ್ಟುಕೆಕೆ 6967 + ಆರ್‌ಪಿಸಿ 8033 = 15000

ಶೈಕ್ಷಣಿಕ ಅರ್ಹತೆ:

ಅಧಿಕೃತ ಮಾಹಿತಿಯ ಆಧಾರದ ಮೇಲೆ, ವಿವಿಧ ಶಿಕ್ಷಕರ ಹುದ್ದೆಗಳ ಕನಿಷ್ಠ ಶೈಕ್ಷಣಿಕ ಅರ್ಹತೆಗಳ ವಿವರವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ. (ಇದನ್ನೊಮ್ಮೆ ಓದಿ.. ತಪ್ಪದೇ ಕರಡು ಅಧಿಸೂಚನೆ ಪರಿಶೀಲಿಸಲು ಸೂಚಿಸಲಾಗಿದೆ)

ಹುದ್ದೆಯ ಹೆಸರುಕನಿಷ್ಠ ಶೈಕ್ಷಣಿಕ ಅರ್ಹತೆ
ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ)1. ಕನಿಷ್ಠ ಶೇ. 50 ರಷ್ಟು ಅಂಕಗಳೊಂದಿಗೆ ಪಿಯುಸಿ (PUC) ಉತ್ತೀರ್ಣತೆ ಮತ್ತು 2 ವರ್ಷಗಳ ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಶನ್ (D.El.Ed)
ಅಥವಾ
ಪಿಯುಸಿಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕಗಳು ಮತ್ತು 4 ವರ್ಷಗಳ ಬ್ಯಾಚುಲರ್ ಇನ್ ಎಲಿಮೆಂಟರಿ ಎಜುಕೇಶನ್ (B.El.Ed)
ಅಥವಾ
ಪಿಯುಸಿಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕಗಳು ಮತ್ತು 2 ವರ್ಷಗಳ ಶಿಕ್ಷಣ ಡಿಪ್ಲೋಮಾ (ವಿಶೇಷ ಶಿಕ್ಷಣ).
(ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ/ಪ್ರವರ್ಗ-1/ವಿಶೇಷ ಚೇತನ ಅಭ್ಯರ್ಥಿಗಳಿಗೆ ಪಿಯುಸಿಯಲ್ಲಿ ಕನಿಷ್ಠ ಶೇ. 45 ರಷ್ಟು ಅಂಕಗಳು).
2. ಕರ್ನಾಟಕ ಅಥವಾ ಭಾರತ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (TET – ಪತ್ರಿಕೆ I)ಯಲ್ಲಿ ಉತ್ತೀರ್ಣತೆ.
3. ಭಾಷಾ ಶಿಕ್ಷಕರಾಗಿದ್ದಲ್ಲಿ ಪಿಯುಸಿಯಲ್ಲಿ ಆಯಾ ಭಾಷೆ ಮತ್ತು ಆಂಗ್ಲ ಭಾಷೆಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕಗಳು ಹಾಗೂ ಗಣಿತ/ವಿಜ್ಞಾನ ಶಿಕ್ಷಕರಾಗಿದ್ದಲ್ಲಿ ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಪ್ರತ್ಯೇಕವಾಗಿ ಕನಿಷ್ಠ ಶೇ.50 ರಷ್ಟು ಅಂಕಗಳು ಕಡ್ಡಾಯ.
ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-II (1 ರಿಂದ 8ನೇ ತರಗತಿ)1. ಕನಿಷ್ಠ ಶೇ. 50 ರಷ್ಟು ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ (12ನೇ ತರಗತಿ ಅಥವಾ ತತ್ಸಮಾನ) ಉತ್ತೀರ್ಣತೆ.
ಅಥವಾ
ಹಿರಿಯ ಮಾಧ್ಯಮಿಕ ಉತ್ತೀರ್ಣತೆಯೊಂದಿಗೆ ಶಾಲೆ/ಕಾಲೇಜು/ಜಿಲ್ಲಾ ಹಂತದ ಕ್ರೀಡೆಗಳಲ್ಲಿ ಭಾಗವಹಿಸುವಿಕೆ (NCTE ನಿಯಮಾವಳಿ 2007ರ ಅನ್ವಯ).
ಅಥವಾ
ಕನಿಷ್ಠ ಶೇ. 45 ರಷ್ಟು ಅಂಕಗಳೊಂದಿಗೆ ಹಿರಿಯ ಮಾಧ್ಯಮಿಕ ಉತ್ತೀರ್ಣತೆ (NCTE ನಿಯಮಾವಳಿ 2002ರ ಅನ್ವಯ).
2. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ (NCTE) ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 2 ವರ್ಷಗಳ ದೈಹಿಕ ಶಿಕ್ಷಣ ಸರ್ಟಿಫಿಕೇಟ್ ಅಥವಾ ಡಿಪ್ಲೋಮಾ (C.P.Ed / D.P.Ed) ಹೊಂದಿರಬೇಕು.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6 ರಿಂದ 8ನೇ ತರಗತಿ)1. ಕನಿಷ್ಠ ಶೇ. 50 ರಷ್ಟು ಅಂಕಗಳೊಂದಿಗೆ ಪದವಿ ಮತ್ತು 2 ವರ್ಷಗಳ ಡಿಪ್ಲೊಮಾ ಇನ್ ಎಲಿಮೆಂಟರಿ ಎಜುಕೇಶನ್ (D.El.Ed)
ಅಥವಾ
ಕನಿಷ್ಠ ಶೇ. 50 ರಷ್ಟು ಅಂಕಗಳೊಂದಿಗೆ ಪದವಿ ಮತ್ತು ಬಿ.ಇಡಿ (B.Ed) ಅಥವಾ ಬಿ.ಇಡಿ (ವಿಶೇಷ ಶಿಕ್ಷಣ)
ಅಥವಾ
ಕನಿಷ್ಠ ಶೇ. 50 ರಷ್ಟು ಅಂಕಗಳೊಂದಿಗೆ ಪಿಯುಸಿ ಮತ್ತು 4 ವರ್ಷಗಳ B.El.Ed ಅಥವಾ 4 ವರ್ಷಗಳ B.A.Ed / B.Sc.Ed.
(ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ/ಪ್ರವರ್ಗ-1/ವಿಶೇಷ ಚೇತನ ಅಭ್ಯರ್ಥಿಗಳಿಗೆ ಪದವಿ ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇ. 45 ರಷ್ಟು ಅಂಕಗಳು).
2. ಕರ್ನಾಟಕ ಅಥವಾ ಭಾರತ ಸರ್ಕಾರ ನಡೆಸುವ ಶಿಕ್ಷಕರ ಅರ್ಹತಾ ಪರೀಕ್ಷೆ (TET – ಪತ್ರಿಕೆ II) ಯಲ್ಲಿ ಉತ್ತೀರ್ಣತೆ.
3. ಆಯಾ ವಿಷಯಗಳಿಗೆ ನಿಗದಿಪಡಿಸಿದ ನಿರ್ದಿಷ್ಟ ಐಚ್ಛಿಕ ವಿಷಯಗಳೊಂದಿಗೆ ಪದವಿ ವ್ಯಾಸಂಗ ಮಾಡಿರಬೇಕು (ಉದಾಹರಣೆಗೆ: ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಭೌತಶಾಸ್ತ್ರ, ಗಣಿತ ಕಡ್ಡಾಯ; ಜೀವಶಾಸ್ತ್ರ ಶಿಕ್ಷಕರಿಗೆ ರಸಾಯನಶಾಸ್ತ್ರ ಕಡ್ಡಾಯ).
ಗಣಕ ವಿಜ್ಞಾನ ಶಿಕ್ಷಕರು (1 ರಿಂದ 8ನೇ ತರಗತಿ)1. ಕನಿಷ್ಠ ಶೇ. 50 ರಷ್ಟು ಅಂಕಗಳೊಂದಿಗೆ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) / ಬಿಸಿಎ (BCA) / ಬಿ.ಎಸ್ಸಿ (ಕಂಪ್ಯೂಟರ್ ಅಪ್ಲಿಕೇಶನ್) / ಬ್ಯಾಚುಲರ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಅಥವಾ ಕಂಪ್ಯೂಟರ್ ಸೈನ್ಸ್/ಇನ್ಫರ್ಮೇಷನ್ ಸೈನ್ಸ್‌ನಲ್ಲಿ ಬಿ.ಇ (B.E) / ಬಿ.ಟೆಕ್ (B.Tech) ಪದವಿ.
2. ಎಸ್‌ಎಸ್‌ಎಲ್‌ಸಿ (SSLC) ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಭ್ಯಾಸ ಮಾಡಿರಬೇಕು.
3. ನೇಮಕಾತಿ ಹೊಂದಿದ 5 ವರ್ಷಗಳ ಒಳಗಾಗಿ ಬಿ.ಎಡ್ (B.Ed) ಪದವಿ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (TET) ಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
ಪ್ರೌಢಶಾಲಾ ಸಹ ಶಿಕ್ಷಕರು (Assistant Master)ಕಲಾ ಶಿಕ್ಷಕರು:
ಇತಿಹಾಸ, ಅರ್ಥಶಾಸ್ತ್ರ, ರಾಜಕೀಯಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಸಮಾಜಶಾಸ್ತ್ರ ಇವುಗಳಲ್ಲಿ ಯಾವುದೇ ಎರಡು ವಿಷಯಗಳನ್ನು ಐಚ್ಛಿಕವಾಗಿ ಹೊಂದಿರುವ ಕಲಾ ಪದವಿ (B.A) ಮತ್ತು ಬಿ.ಎಡ್ (B.Ed) ಪದವಿ.

ಜೀವಶಾಸ್ತ್ರ ಶಿಕ್ಷಕರು:
ರಸಾಯನಶಾಸ್ತ್ರ (ಕಡ್ಡಾಯ ಐಚ್ಛಿಕ), ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳಿರುವ ವಿಜ್ಞಾನ ಪದವಿ (B.Sc) ಮತ್ತು ಬಿ.ಎಡ್ (B.Ed) ಪದವಿ.

ಭಾಷಾ ಸಹ ಶಿಕ್ಷಕರು:
ಸಂಬಂಧಪಟ್ಟ ಭಾಷೆಯನ್ನು (ಕನ್ನಡ/ಇಂಗ್ಲಿಷ್) ಐಚ್ಛಿಕ ವಿಷಯವಾಗಿ ಹೊಂದಿರುವ ಕಲಾ ಪದವಿ ಮತ್ತು ಬಿ.ಎಡ್ ಪದವಿ.
(ಪದವಿಯಲ್ಲಿ ಐಚ್ಛಿಕವಾಗಿ ಓದದಿದ್ದಲ್ಲಿ, ಸಂಬಂಧಿತ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿ.ಎಡ್ ಹೊಂದಿರಬೇಕು).

ಬೋಧನಾ ಮಾಧ್ಯಮದ ಅರ್ಹತೆ:
ಬೋಧಿಸುವ ಮಾಧ್ಯಮದ ಭಾಷೆಯನ್ನು ಪದವಿ ಹಂತದಲ್ಲಿ ಅಥವಾ ಎಸ್‌ಎಸ್‌ಎಲ್‌ಸಿ ಯಲ್ಲಿ ಪ್ರಥಮ/ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡಿರಬೇಕು ಅಥವಾ ಆ ಮಾಧ್ಯಮದಲ್ಲೇ ವ್ಯಾಸಂಗ ಪೂರೈಸಿರಬೇಕು.
ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್-I)1. ದೈಹಿಕ ಶಿಕ್ಷಣವನ್ನು ಒಂದು ಐಚ್ಛಿಕ ವಿಷಯವಾಗಿ ಹೊಂದಿರುವ ಪದವಿಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕಗಳು.
ಅಥವಾ
ದೈಹಿಕ ಶಿಕ್ಷಣ ಐಚ್ಛಿಕ ವಿಷಯದೊಂದಿಗೆ ಶೇ. 45 ರಷ್ಟು ಅಂಕಗಳು ಮತ್ತು ರಾಷ್ಟ್ರ/ರಾಜ್ಯ/ಅಂತರ್ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವಿಕೆ.
ಅಥವಾ
ಸೇವಾನಿರತ ಅಭ್ಯರ್ಥಿಗಳಿಗೆ ಶೇ. 45 ರಷ್ಟು ಅಂಕಗಳೊಂದಿಗೆ ಪದವಿ ಮತ್ತು ಕನಿಷ್ಠ 3 ವರ್ಷಗಳ ಬೋಧನಾ ಅನುಭವ.
ಅಥವಾ
ದೈಹಿಕ ಶಿಕ್ಷಣದಲ್ಲಿ ಶೇ. 40 ರಷ್ಟು ಅಂಕಗಳೊಂದಿಗೆ ಪದವಿ ಅಥವಾ ಎನ್.ಸಿ.ಸಿ ‘ಸಿ’ ಸರ್ಟಿಫಿಕೇಟ್ ಹೊಂದಿರುವ ಪದವೀಧರರು.
2. ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ (NCTE) ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 1 ವರ್ಷದ ಅವಧಿಯ ದೈಹಿಕ ಶಿಕ್ಷಣ ಪದವಿ (B.P.Ed) ಅಥವಾ ತತ್ಸಮಾನ ವಿದ್ಯಾರ್ಹತೆ.

ವಯೋಮಿತಿ:

*ಅರ್ಜಿ ಸಲ್ಲಿಕೆಗೆ ನಿಗದಿ ಪಡಿಸಿದ ಕೊನೆದಿನಾಂಕಕ್ಕೆ ಈ ಕೆಳಗಿನ ವಯೋಮಿತಿ ಹೊಂದಿರತಕ್ಕದ್ದು.

ಕನಿಷ್ಠ 21 ವರ್ಷ

ಪ.ಜಾತಿ(SC), ಪ.ಪಂಗಡ(ST), ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 43 ವರ್ಷ
ವರ್ಗ-2ಎ, ವರ್ಗ-2ಬಿ, ವರ್ಗ-3ಎ ಮತ್ತು ವರ್ಗ-3ಬಿ ಅಭ್ಯರ್ಥಿಗಳಿಗೆ 41 ವರ್ಷ
ಸಾಮಾನ್ಯ(ಇತರೆ) ವರ್ಗದ ಅಭ್ಯರ್ಥಿಗಳಿಗೆ 38 ವರ್ಷ

ಆಯ್ಕೆ ವಿಧಾನ:

  • ಸ್ಪರ್ಧಾತ್ಮಕ ಪರೀಕ್ಷೆ(ಸಿಇಟಿ)
  • ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ ಪತ್ರಿಕೆ I)ಯಲ್ಲಿ ಪಡೆದ ಅಂಕಗಳ ಪರಿಗಣನೆ
  • ಶಿಕ್ಷಕರ ಶಿಕ್ಷಣ ಕೋರ್ಸ್‌ ಅಥವಾ ಪದವಿಯಲ್ಲಿ ಪಡೆದ ಅಂಕಗಳ ಪರಿಗಣನೆ
  • ದಾಖಲಾತಿ ಪರಿಶೀಲನೆ

ಅಭ್ಯರ್ಥಿಯ ಆಯ್ಕೆಗೆ ಅರ್ಹತಾ ಪಟ್ಟಿ ತಯಾರಿಸಲು ವೇಟೇಜ್‌ ನಿಗದಿಪಡಿಸಲಾಗಿದ್ದು, ಹೆಚಿನ ವಿವರಗಳಿಗಾಗಿ ಕರಡು ಅಧಿಸೂಚನೆಯನ್ನು ಓದಿ..

ಸಂಬಳದ ವಿವರ:

ಹುದ್ದೆಗಳ ಹೆಸರುಸಂಬಳ(ಪ್ರ.ತಿಂ)
ಪ್ರಾಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿ), ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್‌ II (1 ರಿಂದ 8ನೇ ತರಗತಿ)ರೂ.41300-81800/-
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6ರಿಂದ 8ನೇ ತರಗತಿ), ಗಣಕ ವಿಜ್ಞಾನ ಶಿಕ್ಷಕ(1 ರಿಂದ 8ನೇ ತರಗತಿ)ರೂ..44425-83700/-
ಪ್ರೌಢಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್‌ I)ರೂ.54175-99400/-

Important Direct Links:

Draft Notification(ಕರಡು ಅಧಿಸೂಚನೆ) PDFDownload
Official Websiteschooleducation.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment