ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜೂ.21ರಂದು ನಡೆಸಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ)ಯ ಫಲಿತಾಂಶವನ್ನು ಗುರುವಾರ(ಜು.16)ರಂದು ಪ್ರಕಟಿದೆ.
ವಿದೇಶದ 14 ನಗರಗಳು ಸೇರಿದಂತೆ ದೇಶದ 551 ನಗರದ 5,440 ಪರೀಕ್ಷಾ ಕೇಂದ್ರದಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗಿತ್ತು. ಸುಮಾರು 20 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 11.21 ಲಕ್ಷ ಅಭ್ಯರ್ಥಿಗಳು ಅರ್ಹತೆ ಹೊಂದಿದ್ದಾರೆ. ಇದರಲ್ಲಿ ಶೇ 58ಕ್ಕಿಂತ ಹೆಚ್ಚಿನಷ್ಟು ಮಹಿಳೆಯರೇ ಇದ್ದಾರೆ. 138 ಅಭ್ಯರ್ಥಿಗಳು 690 ಕ್ಕಿಂತ ಹೆಚ್ಚು ಅಥವಾ ಸಮಾನ ಅಂಕ ಗಳಿಸಿದ್ದಾರೆ ಎಂದು ಎನ್‌ಟಿಎ ತಿಳಿಸಿದೆ.
ಅಭ್ಯರ್ಥಿಗಳು ಅಧಿಕೃತ ಜಾಲತಾಣ https://neet.nta.nic.in/ಕ್ಕೆ ಭೇಟಿ ನೀಡಿ, ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಫಲಿತಾಂಶವನ್ನು ಪರಿಶೀಲನೆ ಮಾಡಬಹುದು.
ವರ್ಗವಾರು ಅರ್ಹತೆ ಪಡೆದ ಅಭ್ಯರ್ಥಿಗಳ ವಿವರ:
- ಸಾಮಾನ್ಯ:- 2.91 ಲಕ್ಷ
- ಒಬಿಸಿ-ಎನ್‌ಸಿಎಲ್:- 5.12 ಲಕ್ಷ
- ಎಸ್ಸಿ:- 1.59 ಲಕ್ಷ
- ಎಸ್ಟಿ:- 63,716
- ಸಾಮಾನ್ಯ-ಇಡಬ್ಲ್ಯೂಎಸ್:- 95,026
- ಪಿಡಬ್ಲ್ಯೂಬಿಡಿ:- 3,666
- ಪಿಡಬ್ಲ್ಯೂಡಿ:- 303
Important Direct Links:
| NEET UG 2026 Re Exam Score Check Link-1 | Check Now |
| NEET UG 2026 Re Exam Score Check Link-2 | Check Now |
| Topper List PDF | Download |
| Official Website | neet.nta.nic.in |
| More Updates | KarnatakaHelp.in |