ಸೆಂಟ್ರಲ್‌ ರೈಲ್ವೆ: ಕ್ರೀಡಾ ಕೋಟಾದಡಿ ಭರ್ತಿ

Published on:

ಮುಂಬೈ: ಸೆಂಟ್ರಲ್‌ ರೈಲ್ವೆಯು 2026-27ನೇ ಸಾಲಿನ ಕ್ರೀಡಾ ಕೋಟಾದಡಿ 21 ಗ್ರೂಪ್‌ ಸಿ ಹುದ್ದೆ ಹಾಗೂ 38 ಲೆವೆಲ್‌-1 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.

05 ಲೆವೆಲ್‌-5/4 ಹುದ್ದೆಗಳು, 16 ಲೆವೆಲ್‌-3/2 ಹುದ್ದೆಗಳು, 38 ಲೆವೆಲ್‌-1 ಹುದ್ದೆಗಳಿಗೆ ನೇಮಕಾತಿಗೆ ನಡೆಯಲಿದೆ. ಪದವಿ, ಪಿಯುಸಿ, ಐಟಿಐ ಮತ್ತು ಎಸ್ಸೆಸ್ಸೆಲ್ಸಿ ಜೊತೆಗೆ ಕ್ರೀಡಾ ಸಾಧನೆ ಮಾಡಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://www.rrccr.com/Home/Home_SubHeader?token=9xGKBuwIJajTWqRXmZB2Cw%3d%3dಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 15
  • ಅರ್ಜಿ ಸಲ್ಲಿಸಲು ಕೊನೆ ದಿನ – ಆಗಸ್ಟ್‌ 14

ಶೈಕ್ಷಣಿಕ ಅರ್ಹತೆ:

→ ಲೆವೆಲ್‌-5/4 ಹುದ್ದೆಗೆ:- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.

→ ಲೆವೆಲ್‌-3/2 ಹುದ್ದೆಗೆ:- ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ.
ಅಥವಾ
ಎಸ್ಸೆಸ್ಸೆಲ್ಸಿ ಉತ್ತೀರ್ಣ ಜೊತೆಗೆ ಆಕ್ಟ್ ಅಪ್ರೆಂಟಿಸ್‌ಶಿಪ್ ಕೋರ್ಸ್ ಪೂರ್ಣಗೊಳಿಸಿರಬೇಕು.
ಅಥವಾ
ಎಸ್ಸೆಸ್ಸೆಲ್ಸಿ ಮತ್ತು ಐಟಿಐ ಅರ್ಹತೆ.

→ ಲೆವೆಲ್‌-1 ಹುದ್ದೆಗೆ:- ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ತರಗತಿ ಉತ್ತೀರ್ಣ
ಅಥವಾ
ಐಟಿಐ
ಅಥವಾ
ತತ್ಸಮಾನ
ಅಥವಾ
NCVT ಯಿಂದ ನೀಡಲಾದ ರಾಷ್ಟ್ರೀಯ ಶಿಷ್ಯವೃತ್ತಿ ಪ್ರಮಾಣಪತ್ರ (NAC)

ಗಮನಿಸಿ: ವಿದ್ಯಾರ್ಹತೆಯ ಜೊತೆಗೆ ನಿಗದಿತ ಕ್ರೀಡೆಯಲ್ಲಿ ಸಾಧನೆಗೈದಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.

ವಯೋಮಿತಿ:

01-01-2027ರಂತೆ; ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ.

01/01/2002 ರಿಂದ 01/01/2009ರ ನಡುವೆ ಜನಿಸಿದ ಅಭ್ಯರ್ಥಿಗಳು (ಎರಡೂ ದಿನಗಳು ಸೇರಿದಂತೆ) ಮಾತ್ರ ಅರ್ಜಿ ಸಲ್ಲಿಸಬೇಕು.

ಯಾವುದೇ ಸಮುದಾಯದ ಅಭ್ಯರ್ಥಿಗಳಿಗೆ ಕಡಿಮೆ ಅಥವಾ ಹೆಚ್ಚಿನ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಇರುವುದಿಲ್ಲ.

ಆಯ್ಕೆ ವಿಧಾನ:

  • ಮೆರಿಟ್‌ ಲಿಸ್ಟ್‌
  • ದಾಖಲಾತಿ ಪರಿಶೀಲನೆ ಮತ್ತು ಟ್ರಾಯಲ್‌ ಪರೀಕ್ಷೆಗಳು

ಸಂಬಳ:

ಲೆವೆಲ್‌-5/4 ಹುದ್ದೆಗೆ:- ರೂ.29200 – 25500/-
ಲೆವೆಲ್‌-3/2 ಹುದ್ದೆಗೆ:- ರೂ.21700 – 19900/-
ಲೆವೆಲ್‌-1 ಹುದ್ದೆಗೆ:- ರೂ.18000/-

ಅರ್ಜಿ ಶುಲ್ಕ:

ಎಸ್ಸಿ/ಎಸ್ಟಿ/ಮಾಜಿ ಸೈನಿಕ/ಮಹಿಳಾ/ಅಲ್ಪಸಂಖ್ಯಾತ/ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ ರೂ.250(ಟ್ರಾಯಲ್‌ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮರುಪಾವತಿಯಾಲಿದೆ)
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.500(ರೂ.400 ಟ್ರಾಯಲ್‌ಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮರುಪಾವತಿಯಾಲಿದೆ)

ಅರ್ಜಿ ಸಲ್ಲಿಸುವುದು ಹೇಗೆ.?

ಹಂತ-1 ಅಧಿಕೃತ ಜಾಲತಾಣದ ಲಿಂಕ್‌ https://ibtexamination.com/RRCCR_02OF2026_SPORTSQUOTA/ಗೆ ಭೇಟಿ ನೀಡಿ.

ಹಂತ-2 ಹೊಸ ಅಭ್ಯರ್ಥಿಗಳಾಗಿದ್ದಲ್ಲಿ ನೋಂದಣಿ(New Registration) ಮಾಡಿಕೊಳ್ಳಿ.

Rrc Cr Sports Quota Online Form 2026-27
RRC CR Sports Quota Online Form 2026-27

ಹಂತ-3 ನಂತರ ಅರ್ಜಿ ನಮೂನೆ ತೆರೆಯುತ್ತದೆ ಅಲ್ಲಿ ಕೇಳಲಾದ ಸಂಪೂರ್ಣ ಮಅಹಿತಿಯನ್ನು ತುಂಬಿ ಹಾಗೂ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

Important Direct Links:

Official Notification PDFDownload
Online Application Form LinkApply Now
Official Websitecr.indianrailways.gov.in
More UpdatesKarnatakaHelp.in
About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

4 thoughts on “ಸೆಂಟ್ರಲ್‌ ರೈಲ್ವೆ: ಕ್ರೀಡಾ ಕೋಟಾದಡಿ ಭರ್ತಿ”

Leave a Comment