ಕೊಲ್ಕತ್ತಾ: ಪ್ರಮುಖ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಯಾಗಿರುವ ರಾಷ್ಟ್ರೀಯ ವಿಮಾ ಕಂಪನಿ ಲಿಮಿಟೆಡ್(ಎನ್‌ಐಸಿಎಲ್)ನಲ್ಲಿ ಕ್ಲಾಸ್ III ಕೇಡರ್‌ನ ಅಸಿಸ್ಟಂಟ್(ಸಹಾಯಕ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರುವ ತನ್ನ ಶಾಖೆಗಳಿಗೆ ಒಟ್ಟು 500 ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಯಾವುದೇ ವಿಭಾಗದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು https://nationalinsurance.nic.co.in/recruitment ಅಥವಾ https://ibpsreg.ibps.in/nicljul26/ಗೆ ಭೇಟಿ ನೀಡಿ, ಆ.07ರೊಳಗೆ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 18
- ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆ ದಿನ – ಆಗಸ್ಟ್ 07
- ಆನ್‌ಲೈನ್ ಪೂರ್ವಭಾವಿ ಪರೀಕ್ಷೆ ದಿನಾಂಕ – ಆಗಸ್ಟ್ 27
- ಆನ್‌ಲೈನ್ ಮುಖ್ಯ ಪರೀಕ್ಷೆ ದಿನಾಂಕ – ಅಕ್ಟೋಬರ್ 30
ಶೈಕ್ಷಣಿಕ ಅರ್ಹತೆ:
(01-07-2026ರಂತೆ) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.
ವಯೋಮಿತಿ:
01-07-2026ರಂತೆ;
ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ
ವರ್ಗವಾರು ಗರಿಷ್ಠ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.
ಆಯ್ಕೆ ಪ್ರಕ್ರಿಯೆ:
- ಹಂತ-I: ಆನ್‌ಲೈನ್ ಪೂರ್ವಭಾವಿ ಪರೀಕ್ಷೆ
- ಹಂತ-II: ಆನ್‌ಲೈನ್ ಮುಖ್ಯ ಪರೀಕ್ಷೆ
- ಪ್ರಾದೇಶಿಕ ಭಾಷಾ ಪರೀಕ್ಷೆ
- ದಾಖಲೆಗಳ ಪರಿಶೀಲನೆ
ಸಂಬಳ:
ವೇತನ ಶ್ರೇಣಿ- ರೂ.36290-2115(1)-38405-2310(2)-43025-2600(5)-56025-3005(2)-62035-3660(3)- 73015-3800(2)-80615-4050(5)-100865/-
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.850/-
ಅರ್ಜಿ ಸಲ್ಲಿಸುವುದು ಹೇಗೆ..?
ಹಂತ-1 ಅಧಿಕೃತ ಜಾಲತಾಣ https://nationalinsurance.nic.co.in/recruitmentಕ್ಕೆ ಭೇಟಿ ನೀಡಿ.
ಹಂತ-2 ನಂತರ ಅಲ್ಲಿ “RECRUITMENT OF 500 ASSISTANT (CLASS-III) 2026-27” ಶಿರ್ಷೀಕೆಯಡಿ ನೀಡಲಾದ “Click here to Apply Online” ಮೇಲೆ ಕ್ಲಿಕ್ಕಿಸಿ.
ಹಂತ-3 ತದನಂತರ IBPS ಆನ್‌ಲೈನ್ ನಮೂನೆ ಹೊಸಪುಟ ತೆರೆಯುತ್ತದೆ. ಹೊಸ ಅಭ್ಯರ್ಥಿಗಳಾಗಿದ್ದಲ್ಲಿ ನೋಂದಣಿ ಮಾಡಿಕೊಂಡು. ಅರ್ಜಿ ನಮೂನೆಯಲ್ಲಿ ಕೇಳಲಾದ ಸಂಪೂರ್ಣ ವಿವರವನ್ನು ತುಂಬಿ, ದಾಖಲೆಗಳನ್ನು ಅಪ್ಲೋಡ್ ಮಾಡಿ. ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
Important Direct Links:
| Official Notification PDF | Download |
| Online Application Form Link | Apply Now |
| Official Website | nationalinsurance.nic.co.in |
| More Updates | KarnatakaHelp.in |