ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2026-27ನೇ ಸಾಲಿಗೆ ಉಚಿತ ಊಟ-ವಸತಿ ಸಹಿತ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷಾ ಪೂರ್ವ ತರಬೇತಿಗಾಗಿ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ವರ್ಗದ ಯಾವುದೇ ಪದವೀಧರರು ಅರ್ಜಿ ಸಲ್ಲಿಸಹುದು. ಅಭ್ಯರ್ಥಿಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ತರಬೇತಿ ಸಮಯದಲ್ಲಿ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು https://bcwd.karnataka.gov.in ಅಥವಾ sevasindhuservices.karnataka.gov.inಗೆ ಭೇಟಿ ನೀಡಿ.
ಪ್ರಮುಖ ದಿನಾಂಕಗಳು:
- ಅಧಿಕೃತ ಪ್ರಕಟಣೆಯ ದಿನಾಂಕ – ಜುಲೈ 15
- ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ – ಆಗಸ್ಟ್ 03
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು
ಇತರೆ ಅರ್ಹತೆ: ಅಭ್ಯರ್ಥಿಯ ಕುಟುಂಬದ ಆದಾಯವು ವಾರ್ಷಿಕ ರೂ.5ಲಕ್ಷ ಮೀರಿರಬಾರದು.
ವಯೋಮಿತಿ:
03.08.2026ರಂತೆ;
ಕನಿಷ್ಠ 21 ವರ್ಷ, ಗರಿಷ್ಟ 31 ವರ್ಷ
ತರಬೇತಿ ಅವಧಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯಿಂದ 7 ರಿಂದ 9 ತಿಂಗಳುಗಳ ಕಾಲ ತರಬೇತಿ ನೀಡಲಾಗಿತ್ತದೆ.
ಆಯ್ಕೆ ವಿಧಾನ:
- ಸಾಮಾನ್ಯ ಪ್ರವೇಶ ಪರೀಕ್ಷೆ
- ಮೀಸಲಾತಿ ಅನ್ವಯ
ಅರ್ಜಿ ಸಲ್ಲಿಕೆ ಹೇಗೆ.?
ಹಂತ-1 ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ.
ಹಂತ-2 ನಂತರ ಮೊಬೈಲ್ ಅಥವಾ ಇ-ಮೇಲ್ ಮೂಲಕ ಲಾಗಿನ್ ಮಾಡಿಕೊಳ್ಳಿ.
ಹಂತ-3 ತದನಂತರ ಮೆನು ವಿಭಾಗದಲ್ಲಿ “Apply for Service” ಮೇಲೆ ಕ್ಲಿಕ್ಕಿಸಿ, ಹಾಗೆ ಮುಂದೆ “View All Available Services” ಮೇಲೆ ಮತ್ತೊಮ್ಮೆ ಕ್ಲಿಕ್ಕಿಸಿ.
ಹಂತ-4 ಮುಂದೆ “Search Bar” ಬಳಸಿಕೊಂಡು “Online Application for UPSC Pre-examination Coaching With Free Food & Accommodation” ಹುಡುಕಿ ಶಿರ್ಷೀಕೆ ಮೇಲೆ ಒತ್ತಿ. ಕೊನೆಗೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ತುಂಬಿ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ 8050770004(ಸಮಯ ಬೆಳಗ್ಗೆ 10.00 ರಿಂದ ಸಂಜೆ 5.30ರೊಳಗೆ)ಗೆ ಸಂಪರ್ಕಿಸಬಹುದು.
Important Direct Links:
| BCWD UPSC Pre-examination Coaching 2026 Online Form Link | Apply Now |
| BCWD UPSC Free Coaching 2026 Students Instructions PDF | Download |
| Official Website | bcwd.karnataka.gov.in |
| More Updates | KarnatakaHelp.in |
Job