ಚೆನ್ನೈ: ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕಾಗಿರುವ ಇಂಡಿಯನ್ ಓವರ್ಸೀಸ್ ಬ್ಯಾಂಕಿ(ಐಒಬಿ)ನಲ್ಲಿ 2026-27ನೇ ಸಾಲಿಗೆ ಶಿಶಿಕ್ಷು ಅಧಿನಿಯಮ 1961ರಡಿ ಶಿಶಿಕ್ಷು ತರಬೇತಿಗಾಗಿ(ಅಪ್ರೆಂಟಿಸ್) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯದಲ್ಲಿರುವ ತನ್ನ ಶಾಖೆಗಳಿಗೆ 750 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಒಂದು ವರ್ಷದ ತರಬೇತಿ ಒದಗಿಸಲಿದೆ. ಯಾವುದೇ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗಾಗಿ ಬಿಎಫ್‌ಎಸ್‌ಐ ಎಸ್‌ಎಸ್‌ಸಿ ಅಧಿಕೃತ ಜಾಲತಾಣ www.bfsissc.com ಅಥವಾ beep.bfsissc.comಗೆ ಭೇಟಿ ನೀಡಿ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ -ಜುಲೈ 07
- ಅರ್ಜಿ ಸಲ್ಲಿಸಲು ಕೊನೆಯ ದಿನ – ಜುಲೈ 27(ವಿಸ್ತರಣೆ)
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ -ಜುಲೈ 28(ವಿಸ್ತರಣೆ)
- ಆನ್‌ಲೈನ್ ಪರೀಕ್ಷೆ ದಿನಾಂಕ – ಆಗಸ್ಟ್ 08
ಶೈಕ್ಷಣಿಕ ಅರ್ಹತೆ:
31-07-2026ರಂತೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.
ವಯೋಮಿತಿ:
01-07-2026ರಂತೆ;
ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ
ಆಯ್ಕೆ ಪ್ರಕ್ರಿಯೆ:
- ಆನ್‌ಲೈನ್ ಲಿಖಿತ ಪರೀಕ್ಷೆ(ವಸ್ತುನಿಷ್ಠ ಪ್ರಕಾರ)
- ಸ್ಥಳೀಯ ಭಾಷಾ ಪರೀಕ್ಷೆ
ಸ್ಟೈಫಂಡ್:
| ಶಾಖೆಯ ವಿಧ | ಮಾಸಿಕವಾಗಿ(ಒಟ್ಟು) | ಸರ್ಕಾರದಿಂದ (DBT ಮೂಲಕ) ಸ್ಟೈಫಂಡ್ ಮೊತ್ತ | ಬ್ಯಾಂಕಿನಿಂದ ನೀಡುವ ಸ್ಟೈಫಂಡ್ ಮೊತ್ತ |
| ಮೆಟ್ರೋ ಶಾಖೆ | ₹15,500 | ₹6,150 | ₹9,350 |
| ನಗರ ಶಾಖೆ | ₹14,500 | ₹6,150 | ₹8,350 |
| ಅರೆ-ನಗರ/ಗ್ರಾಮೀಣ ಶಾಖೆ | ₹14,000 | ₹6,150 | ₹7,850 |
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ಪಿಡಬ್ಲ್ಯೂ ವರ್ಗದವರಿಗೆ ರೂ.236/-
ಸಾಮಾನ್ಯ/ಒಪಿಸಿ/ಇಡಬ್ಲ್ಯೂಎಸ್(ಪುರುಷ) ವರ್ಗದವರಿಗೆ ರೂ.944/-
ಸಾಮಾನ್ಯ/ಒಪಿಸಿ/ಇಡಬ್ಲ್ಯೂಎಸ್(ಮಹಿಳೆ) ವರ್ಗದವರಿಗೆ ರೂ.708/-
(ಶೇ.18 ಜಿಎಸ್‌ಟಿ ಸೇರಿದಂತೆ)
ಅರ್ಜಿ ಸಲ್ಲಿಕೆ ಹೇಗೆ.?
ಗಮನಿಸಿ: ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ತಾಂತ್ರಿಕವಲ್ಲದ ಪದವೀಧರ ಅಭ್ಯರ್ಥಿಗಳು https://www.apprenticeshipindia.gov.in/ ಅಥವಾ ತಾಂತ್ರಿಕ ಪದವೀಧರರು https://nats.education.gov.in/ನಲ್ಲಿ ನೋಂದಣಿ ಆಗಿರತಕ್ಕದ್ದು.
ಹಂತ-1 ಬಿಎಫ್‌ಎಸ್‌ಐ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಆಫ್ ಇಂಡಿಯಾ (ಬಿಎಫ್‌ಎಸ್‌ಐ ಎಸ್‌ಎಸ್‌ಸಿ) ಅಧಿಕೃತ ಜಾಲತಾಣ https://beep.bfsissc.com/ಭೇಟಿ ನೀಡಿ.
ಹಂತ-2 ನಂತರ ಲಾಗಿನ್ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿ ಮಾಡಿಕೊಳ್ಳಿ.
ಹಂತ-3 ತದನಂತರ “Career Opportunities“ದಲ್ಲಿ ನೀಡಲಾದ “IOB Apprenticeship Program
FY 2026-27” ಮೇಲೆ ಕ್ಲಿಕ್ಕಿಸುವ ಮೂಲಕ ಅರ್ಜಿ ನಮೂನೆ ತೆರೆಯುತ್ತದೆ. ಅಲ್ಲಿ ಕೇಳಲಾದ ಸಂಪೂರ್ಣ ಮಾಹಿತಿಯಾನ್ನು ತುಂಬಿ ಕೇಳಲಾದ ದಾಖಲೆಗಳನ್ನು ಲಗತ್ತಿಸಿ ಹಾಗೂ ಕೊನೆಗೆ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
Important Direct Links:
| Online Form Last Extension Notice PDF | Download |
| Official Notification PDF | Download |
| Online Application Form Link | Apply Now |
| Official Website | www.iob.bank.in |
| More Updates | KarnatakaHelp.in |