ಅಸ್ಸಾಂ/ಗವಾಹಟಿ: ಈಶಾನ್ಯ ಗಡಿ ರೈಲ್ವೆ (ನಾರ್ಥ್ ಈಸ್ಟ್ ಫ್ರಂಟಿಯರ್ ರೈಲ್ವೆ-NFR)ಯಲ್ಲಿ 1961ರ ಅಪ್ರೆಂಟಿಸ್ ಕಾಯ್ದೆಯಡಿ ಅಪ್ರೆಂಟಿಸ್‌ಶಿಪ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ರೈಲ್ವೆ ವ್ಯಾಪ್ತಿಗೊಳಪಡುವ ಕಾರ್ಯಾಗಾರಗಳು, ಘಟಕಗಳಿಗೆ ಒಟ್ಟು 6777 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ಒದಗಿಸಲಿದೆ. ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಅಥವಾ ದ್ವಿತೀಯ ಪಿಯುಸಿ(ವಿಜ್ಞಾನ ವಿಭಾಗ)ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸದರಿ ತರಬೇತಿಗೆ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ https://app.nfr-recruitment.in/#/auth/landingಗೆ ಭೇಟಿ ನೀಡಿ.
ಆಯಾ ಟ್ರೇಡ್/ವಿಭಾಗ/ಇಲಾಖೆಗಳಿಗೆ ಅನುಗುಣವಾಗಿ 6 ತಿಂಗಳಿಂದ 1 ವರ್ಷದವರೆಗೆ ಹಾಗೂ ಇದಕ್ಕಿಂದ ಹೆಚ್ಚಿನ ಅವಧಿಯ ತರಬೇತಿ ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 20
- ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಕೊನೆ ದಿನಾಂಕ – ಆಗಸ್ಟ್ 19
ಶೈಕ್ಷಣಿಕ ಅರ್ಹತೆ:
ವಿವಿಧ ಟ್ರೇಡ್ ಅಪ್ರೆಂಟಿಸ್‌ಗೆ: ಎಸ್ಸೆಸ್ಸೆಲ್ಸಿ ಶೇ.50ರಷ್ಟು ಅಂಕಗಳೊಂದಿಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
ಲ್ಯಾಬೊರಟರಿ ಟೆಕ್ನಿಷಿಯನ್(ಪ್ಯಾಥೊಲಾಜಿ ಮತ್ತು ರೇಡಿಯೋಲಾಜಿ) ಅಪ್ರೆಂಟಿಸ್‌ಗೆ: ಎಸ್ಸೆಸ್ಸೆಲ್ಸಿ ಶೇ.50ರಷ್ಟು ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ಅಭ್ಯಸಿಸಿರಬೇಕು.
ವಯಸ್ಸಿನ ಮಿತಿ:
19-08-2026ರಂತೆ; ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ
ನೇಮಕಾತಿ ನಿಯಮಗಳ ಪ್ರಕಾರ ವಿಶೇಷ ವರ್ಗಗಳಿಗೆ ಗರಿಷ್ಠ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿ/ಅರ್ಹತಾ ಪಟ್ಟಿ
- ದಾಖಲಾತಿ ಪರಿಶೀಲನೆ
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಸ್ತುತ ಮಾಸಿಕವಾಗಿ ರೂ.9600/- ಶಿಷ್ಯವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಎಸ್‌ಸಿ /ಎಸ್‌ಟಿ/ಪಿಡಬ್ಲ್ಯೂಬಿಡಿ/ಇಬಿಸಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.100/-
ಅರ್ಜಿ ಸಲ್ಲಿಸುವುದು ಹೀಗೆ.?
ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಜಾಲತಾಣ https://app.nfr-recruitment.in/#/auth/landingಕ್ಕೆ ಭೇಟಿ ನೀಡಿ.
ಹಂತ-1 ಹೊಸ ಅಭ್ಯರ್ಥಿಗಳಾಗಿದ್ದಲ್ಲಿ ನಿಮ್ಮನ್ನು ನೋಂದಾಯಿಸಿಕೊಳ್ಳಿ
ಹಂತ-2 ಲಾಗಿನ್ ಮಾಡಿಕೊಂಡು ಅರ್ಜಿ ನಮೂನೆಯನ್ನು ತುಂಬಿ ಹಾಗೂ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಗೆ ನಿಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
ಗಮನಿಸಿ: ಒಂದು ಬಾರಿ ಸಲ್ಲಿಕೆಯಾದ ಅರ್ಜಿ ನಮೂನೆಯನ್ನು ತಿದ್ದುಪಡಿ ಮಾಡಲು ಪ್ರತಿ ಬಾರಿಯೂ ರೂ.50/- ಪಾವತಿಸಬೇಕಾಗುತ್ತದೆ. ಆದ್ದರಿಂದ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
Important Direct Links:
| Official Notification PDF | Download |
| Online Application Form Link | Apply Now |
| Official Website | nfr.indianrailways.gov.in |
| More Updates | KarnatakaHelp.in |
ITI completed.