ಬೆಂಗಳೂರು: ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿರುವ ಗ್ರೂಪ್-ಸಿ ವೃಂದದ ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದೆ.
ಕೆಕೆ ವೃಂದದ ಒಂದು ಸ್ಥಾನ ಹಾಗೂ ಆರ್‌ಪಿಸಿ ವೃಂದದಲ್ಲಿ 25 ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಅರ್ಹತಾ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿದ್ದು, ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವವರು ಆ.17ರೊಳಗೆ ಸಂಸ್ಥೆಯ ಅಧಿಕೃತ ಜಾಲತಾಣ https://lokayukta.karnataka.gov.in/home_kan.phpಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 17
- ಅರ್ಜಿ ಸಲ್ಲಿಸಲು ಕೊನೆದಿನಾಂಕ – ಆಗಸ್ಟ್ 17
- ಅರ್ಜಿ ಶುಲ್ಕ ಪಾವತಿಸಲು ಕೊನೆದಿನ – ಆಗಸ್ಟ್ 18
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು. ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣರಾಗಿರಬೇಕು.
ವಯೋಮಿತಿ:
17-08-2026ರಂತೆ; ಕನಿಷ್ಠ 18 ವರ್ಷ
ಪ.ಜಾತಿ/ಪ.ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷ
ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 43 ವರ್ಷ
ಸಾಮಾನ್ಯ ಅರ್ಹತೆ ವರ್ಗದವರಿಗೆ 40 ವರ್ಷ
ಆಯ್ಕೆ ವಿಧಾನ:
- ಅರ್ಹತಾ ಪರೀಕ್ಷೆ(ಗಣಕಯಂತ್ರದ ಮೂಲಕ)
ಸದರಿ ಹುದ್ದೆಗೆ 1:10 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅರ್ಹತಾ ಪರೀಕ್ಷೆಯನ್ನು ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ನಡೆದಲಾಗುತ್ತದೆ ಎಂದು ಅಧಿಕೃತ ಅಧಸೂಚನೆಯಲ್ಲಿ ತಿಳಿಸಲಾಗಿದೆ.
ವೇತನ ಶ್ರೇಣಿ:
ರೂ.34100-800-35700-900-39300-1000-43300-1125-47800-1250-52800-1375-58300-1500-64300-1650-67600/-
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ, ಪ್ರವರ್ಗ-2(ಎ), 2(ಬಿ), 3(ಎ), 3(ಬಿ) ಮತ್ತು ಮಾಜಿ ಸೈನಿಕ ಅಭ್ಯರ್ತಿಗಳಿಗೆ ರೂ.250/-
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ
ಹೇಗಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ..?
ಪ್ರಿಯ ಓದುಗ ಮಿತ್ರರೇ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜು.17ರಿಂದ ಆರಂಭವಾಗಲಿದ್ದು. ಆನ್‌ಲೈನ್ ಅರ್ಜಿ ನಮೂನೆಯು ಸಂಸ್ಥೆಯ ಅಧಿಕೃತ ಜಾಲತಾಣ https://lokayukta.karnataka.gov.in/home_kan.phpದಲ್ಲಿ ಲಭ್ಯವಾದ ನಂತರ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಕುರಿತು ನವೀಕರಿಸಲಾಗುವುದು. ನಿರೀಕ್ಷಿಸಿ..
Important Direct Links:
| Official Notification PDF | Download |
| Online Application Form Link(RPC) | Apply Now |
| Online Application Form Link(KK) | Apply Now |
| Official Website | lokayukta.karnataka.gov.in |
| More Updates | KarnatakaHelp.in |