ಉಚಿತ ಹೊಲಿಗೆ ಯಂತ್ರ, ಉಪಕರಣಗಳ ವಿತರಣೆಗೆ ಅರ್ಜಿ ಆಹ್ವಾನ

Published on:

Updated On:

ಯಾದಗಿರಿ: ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 2026-27ನೇ ಸಾಲಿನ ಜಿಲ್ಲಾ ವಲಯ ಯೋಜನೆಯ ವೃತ್ತಿಪರ ಕುಶಲಕರ್ಮಿಗಳಿಗೆ ‘ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆ’ಯಡಿ ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಇಲಾಖೆಯ ಉಪ ನಿರ್ದೇಶಕರು(ಗ್ರಾಕೈ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಹಾಗೂ ವೃತ್ತಿನಿರತ ಬಡಿಗೆತನ ವೃತ್ತಿಯ ಕಸಬುದಾರರಿಗೆ ಉಚಿತವಾಗಿ ಉಪಕರಣ ವಿತರಿಸಲಾಗುವುದು. ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯು ಕನಿಷ್ಠ 8ನೇ ತರಗತಿ ತೇರ್ಗಡೆ ಹೊಂದಿದ್ದು, 18 ರಿಂದ 45 ವಯೋಮಾನದವರಾಗಿರಬೇಕು. ಬಡಿಗೆತನ ಉಪಕರಣಗಳಿಗಾಗಿ ಗರಿಷ್ಠ 55 ವರ್ಷದವರಾಗಿದ್ದು, ಅರ್ಜಿ ಸಲ್ಲಿಸುವವರಿಗೆ ಯಾವುದೇ ವಿದ್ಯಾರ್ಹತೆ ಷರತ್ತು ಅನ್ವಯಿಸುವುದಿಲ್ಲ.

ಅರ್ಜಿ ಸಲ್ಲಿಸಲು ಜು.10 ರಿಂದ 31ರವರೆಗೆ ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳು ಜಿಲ್ಲೆಯ ಅಧಿಕೃತ ಜಾಲತಾಣ https://zpyadgiri.karnataka.gov.in ಅಥವಾ https://yadgir.nic.inಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಜನ್ಮ ದಿನಾಂಕದ ಪುರಾವೆ (ಅಂಕಪಟ್ಟಿ/ವರ್ಗಾವಣೆ ಪ್ರಮಾಣಪತ್ರ)
  • ಜಾತಿ ಪ್ರಮಾಣಪತ್ರ(ಪ.ಜಾ/ಪ.ಪಂ/ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಮಾತ್ರ)
  • ವಿಕಲಚೇತನ ಪ್ರಮಾಣಪತ್ರ(ಅನ್ವಯಿಸಿದರೆ)
  • ಪ್ರಸ್ತುತ ಪಡಿತರ ಚೀಟಿ ಅಥವಾ ಆಧಾರ್‌ ಕಾರ್ಡ್‌
  • ಪಾಸ್ಪೋರ್ಟ್‌ ಸೈಜ್‌ ಅರ್ಜಿದಾರರ ಪೋಟೊ
  • ದೃಢೀಕೃತ ವೃತ್ತಿ ಪ್ರಮಾಣಪತ್ರ(ಪಿಡಿಓ ಅಥವಾ ಕೈಗಾರಿಕಾ ವಿಸ್ತರಣಾಧಿಕಾರಿಗಳಿಂದ)

ಷರತ್ತುಗಳೇನು..?

  • ಒಂದು ಕುಟುಂಬದಿಂದ ಒಂದೇ ಅರ್ಜಿ ಸಲ್ಲಿಸಬೇಕು.
  • ಉಚಿತ ಹೊಲಿಗೆ ಯಂತ್ರಕ್ಕೆ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು.
  • ಕಳೆದ ಮೂರು ವರ್ಷದಲ್ಲಿ ಇಲಾಖೆಯಿಂದ ಸಲಕರಣೆ ಪಡೆದಿರುವಂತಿಲ್ಲ.
  • ಆಯಾ ತಾಲೂಕಿನ ಅಭ್ಯರ್ಥಿಗಳು ಆಯಾ ತಾಲೂಕಿಗೆ ಅರ್ಜಿ ಸಲ್ಲಿಕೆ ಮಾಡವಂತದ್ದು.
  • ಸರ್ಕಾರಿ ನೌಕಕರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅನರ್ಹರು.
  • ಅರ್ಜಿ ಸಲ್ಲಿಸಿದ ನಂತರ ಆನ್ಲೈನ್‌ ಅರ್ಜಿ ನಮೂನೆ ಸ್ವೀಕೃತಿಯನ್ನು ಜೋಪಾನವಾಗಿ ಕಾಯ್ದಿರಿಬೇಕು. ಒಂದು ವೇಳೆ ಅಭ್ಯರ್ಥಿಯು ಆಯ್ಕೆಯಾದಾಗ ಸ್ವಿಕೃತಿಯ ಜೊತೆಗೆ ನಿಗದಿತ ದಾಖಲೆಗಳನ್ನು ಲಗತ್ತಿಸಿ, ಉಪಕರಣ ಪಡೆಯುವುದು.

ಅರ್ಜಿ ಸಲ್ಲಿಕೆ ಹೇಗೆ..?

ಆಸಕ್ತ ಅಭ್ಯರ್ಥಿಗಳು ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಆನ್‌ಲೈನ್‌ ಅರ್ಜಿ ನಮೂನೆ ಬಳಸಿಕೊಂಡು ಸ್ವತಃ ನೀವೇ ಸಲ್ಲಿಸಬಹುದು.(ಅರ್ಜಿ ಸಲ್ಲಿಕೆ ಲಿಂಕ್‌ಗಳನ್ನು ಈ ಕೆಳಗೆ ನೀಡಲಾಗಿದೆ)

Important Direct Links:

Free Sewing machine(ಹೊಲಿಗೆ ಯಂತ್ರ) Online Application LinkApply Now
Free Carpentry Tool Kit(ಕಾರ್ಪೆಂಟ್ರಿ ಟೂಲ್ ಕಿಟ್) Online Application LinkApply Now
Official Websiteyadgir.nic.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

18 thoughts on “ಉಚಿತ ಹೊಲಿಗೆ ಯಂತ್ರ, ಉಪಕರಣಗಳ ವಿತರಣೆಗೆ ಅರ್ಜಿ ಆಹ್ವಾನ”

Leave a Comment