2026ನೇ ಸಾಲಿನ ಇಂಜಿನಿಯರಿಂಗ್, ಕೃಷಿವಿಜ್ಞಾನ, ಪಶುಸಂಗೋಪನೆ, ಫಾರ್ಮಸಿ, ಬಿ.ಎಸ್ಸಿ(ನರ್ಸಿಂಗ್) ಸೇರಿ ಇತರೆ ವೃತ್ತಿಪರ ಕೋರ್ಸಗಳ ಪ್ರವೇಶಕ್ಕಾಗಿ ನಡೆಸುವ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ(ಯುಜಿಸಿಇಟಿ)ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ(ಜ.17)ದಿಂದ ನೋಂದಣಿ ಪ್ರಾರಂಭಿಸಿದೆ.
ನೋಂದಣಿಗೆ ಫೆ.17ರವರೆಗೆ ಅವಕಾಶವಿದೆ. ಏ.22, 23 ಮತ್ತು 24ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯಗಳಲ್ಲಿ ಅಭ್ಯಸಿಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ನೋಂದಣಿಗಾಗಿ https://cetonline.karnataka.gov.in/onlineapp2026/forms/login.aspxಗೆ ಭೇಟಿ ನೀಡಿ. ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್ ಹಾಗೂ ಆರ್ಡಿ ಪ್ರಮಾಣ ಪತ್ರಗಳಲ್ಲಿ ಇರುವ ಹೆಸರು ಒಂದೇ ರೀತಿಯಲ್ಲಿ ಇರಬೇಕು ಎಂದು ಕೆಇಎ ತಿಳಿಸಿದೆ.
ದ್ವಿತೀಯ ಪಿಯುಸಿ/ತತ್ಸಮಾನ ಪರೀಕ್ಷೆಯಲ್ಲಿ ಭೌತಶಾಸ್ತ್ರ/ಗಣಿತ/ರಸಾಯನಶಾಸ್ತ್ರ/ಬಯೋ-ಟೆಕ್ನಾಲಜಿ/ಜೀವಶಾಸ್ತ್ರ/ಎಲೆಕ್ಟ್ರಾನಿಕ್ಸ್ /ಕಂಪ್ಯೂಟರ್ ಸೈನ್ಸ್ ಅಥವಾ ಇತರೆ ಸಂಬಂಧಿತ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಐಚ್ಛಿಕ ವಿಷಯವನ್ನಾಗಿ ಹಾಗೂ ಇಂಗ್ಲೀಷನ್ನು ಒಂದು ಭಾಷಾ ವಿಷಯವನ್ನಾಗಿ ಅಭ್ಯಸಿಸಿರಬೇಕು.
ಹಾಗೂ ವಿವಿಧ ವೃತ್ತಿಪರ ಕೋರ್ಸ್ಗಳಿಗೆ ಆಯಾ ನಿಗದಿತ ವಿಷಯದಲ್ಲಿ ತೇರ್ಗಡೆ ಹೋಮದಿರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಇಎ ಹೊರಡಿಸಿದ ಮಾಹಿತಿ ಬುಲೆಟಿನ್ ಓದಿರಿ.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳ ವಿವರ:
➛ ವಿದ್ಯಾರ್ಥಿಯ ಫೋಟೋ, ವಿದ್ಯಾರ್ಥಿಯ ಸಹಿ ➛ 10ನೇ ತರಗತಿ ಅಂಕಪಟ್ಟಿ ➛ ಆಧಾರ್ ಕಾರ್ಡ್ ಮತ್ತು ಜಾತಿ, ಆದಾಯ ಪ್ರಮಾಣ ಪತ್ರಗಳು ➛ ವಿದ್ಯಾರ್ಥಿಯ ವಾಟ್ಸಪ್ ಹೊಂದಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸ ➛ ಕನ್ನಡ ಮಾಧ್ಯಮ/ಗ್ರಾಮೀಣ ಮಾಧ್ಯಮ/371ಜೆ/ಇತರೆ ಪ್ರಮಾಣ ಪತ್ರಗಳು (ಅನ್ವಯಿಸಿದರೆ)
ಯುಜಿಸಿಇಟಿ 2026ರ ಪ್ರವೇಶ ಪರೀಕ್ಷೆಯ ವೇಳಾಪಟ್ಟಿ
ದಿನಾಂಕ
ವಿಷಯದ ಹೆಸರು
ಪರೀಕ್ಷಾ ಸಮಯ
ಅಂಕ
ಏಪ್ರಿಲ್ 22 (ಗುರುವಾರ)
ಭೌತಶಾಸ್ತ್ರ
ಬೆಳಿಗ್ಗೆ 10.30 ರಿಂದ 11.50ರವರೆಗೆ
60
ರಸಾಯನಶಾಸ್ತ್ರ
ಮಧ್ಯಾಹ್ನ 02.30 ರಿಂದ 03.50ರವರೆಗೆ
60
ಏಪ್ರಿಲ್ 24 (ಶುಕ್ರವಾರ)
ಗಣಿತಶಾಸ್ತ್ರ
ಬೆಳಿಗ್ಗೆ 10.30 ರಿಂದ 11.50ರವರೆಗೆ
60
ಜೀವಶಾಸ್ತ್ರ
ಮಧ್ಯಾಹ್ನ 02.30 ರಿಂದ 03.50ರವರೆಗೆ
60
ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ(ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ)
ದಿನಾಂಕ
ಸಮಯ
ಅಂಕ
ಏಪ್ರಿಲ್ 22
ಬೆಳಿಗ್ಗೆ 10.30 ರಿಂದ 11.30ರ ವರೆಗೆ
4ನೇ ತರಗತಿ ಮಟ್ಟದ
50
ಅರ್ಜಿ ಸಲ್ಲಿಕೆ ಹೀಗೆ..
ಹಂತ-1 ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ
ಹಂತ-2 ನಂತರ ಮುಖಪುಟ ↦ ಪ್ರವೇಶಗಳು ವಿಭಾಗದಡಿ ↦ ಯುಜಿ ಸಿಇಟಿ-2026 ↦ “UGCET – 2026 ಆನ್ಲೈನ್ ಅರ್ಜಿ ಲಿಂಕ್. 16/01/2026” ಶೀರ್ಷಿಕೆ ಲಿಂಕ್ ಮೇಲೆ ಒತ್ತುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು.