ಯುಜಿಸಿಇಟಿ 3ನೇ, ನೀಟ್‌ 2ನೇ ಸುತ್ತಿಗೆ ಆಯ್ಕೆ ಸಲ್ಲಿಸಲು ಸೆ.8 ಕೊನೆ ದಿನ

Published on:

ಇಂಜಿನಿಯರಿಂಗ್ ಸೇರಿ ವಿವಿಧ ಕೋರ್ಸುಗಳ ಮೂರನೇ ಸುತ್ತಿನ ಸೀಟು ಹಂಚಿಕೆ ಹಾಗೂ ವೈದ್ಯಕೀಯ, ದಂತವೈದ್ಯಕೀಯ ಕೋರ್ಸುಗಳ ಎರಡನೇ ಸುತ್ತಿನ ಮುಂದುವರಿದ ಸುತ್ತಿನ ಸೀಟು ಹಂಚಿಕೆಗೆ ಸೆ.6 ರಿಂದ 8ರವರೆಗೆ ಇಚ್ಚೆ/ಆಯ್ಕೆಗಳನ್ನು ಹೊಸದಾಗಿ ಸೇರಿಸಲು/ಬದಲಾಯಿಸಲು/ಅಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಹೊಸದಾಗಿ ಬೆಳಗಾವಿ ಜೆಎನ್‌ಎಮ್ ಕಾಲೇಜಗೆ 12 ವೈದ್ಯಕೀಯ ಸೀಟುಗಳು, ಮೈಸೂರು ಫರೂಕಿಯ ದಂತ ವೈದ್ಯಕೀಯ ಕಾಲೇಜಿಗೆ 40 ಸೀಟುಗಳು ಮತ್ತು ಬಿಜಿಎಸ್ ಗ್ಲೋಬಲ್ ದಂತ ವೈದ್ಯಕೀಯ ಕಾಲೇಜಿಗೆ 50 ಸೀಟುಗಳನ್ನು ಸೇರ್ಪಡಿಸಿದ್ದು, ಎರಡನೇ ಸುತ್ತಿನಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಸದರಿ ಕಾಲೇಜುಗಳಿಗೂ ತಮ್ಮ ಇಚ್ಛೆ/ಆಯ್ಕೆಗಳನ್ನು ಹೊಸದಾಗಿ ದಾಖಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಸೀಟು ರದ್ದು;

ಮೊದಲನೇ ಅಥವಾ ಎರಡನೇ ಸುತ್ತಿನಲ್ಲಿ ತಮಗೆ ದೊರೆತಿರುವ ಸೀಟನ್ನು ಸೆ.8ರೊಳಗಾಗಿ ರದ್ದುಪಡಿಸಿಕೊಳ್ಳಬಹುದು. ರೂ.5.000/-ಕಟಾವು ಮಾಡಿಕೊಂಡು ಉಳಿದ ಮೊತ್ತವನ್ನು ಅಭ್ಯರ್ಥಿಗಳಿಗೆ ಹಿಂದಿರುಗಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಸೀಟುಗಳ ಆದ್ಯತೆ;

ಸೀಟು ಹಂಚಿಕೆಯ ಕಾರ್ಯದಲ್ಲಿ ಉದ್ಭವಿಸುವ ಸೀಟುಗಳನ್ನೂ ಸಹ ಹಂಚಿಕೆ ಮಾಡುವುದರಿಂದ ಸೀಟ್ ಮ್ಯಾಟಿಕ್ಸ್‌ನಲ್ಲಿ ಸೀಟುಗಳ ಲಭ್ಯತೆ ತೋರಿಸದಿದ್ದರೂ ಸಹ ಅಭ್ಯರ್ಥಿಗಳು ಕಾಲೇಜಿಗೆ ಸೇರಲು ಬಯಸುವ ಆದ್ಯತೆಗಳನ್ನು ಸೇರಿಸಲು/ಬದಲಾಯಿಸಲು ಸಲಹೆ ನೀಡಲಾಗಿದೆ.

Important Direct Links:

UGCET 3rd Option Entry 2025 LinkClick Here
UGNEET 2nd Option Entry 2025 Link Click Here
Official Websitecetonline.karnataka.gov.in
More UpdatesKarnatakHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

1 thought on “ಯುಜಿಸಿಇಟಿ 3ನೇ, ನೀಟ್‌ 2ನೇ ಸುತ್ತಿಗೆ ಆಯ್ಕೆ ಸಲ್ಲಿಸಲು ಸೆ.8 ಕೊನೆ ದಿನ”

Leave a Comment