UGCET, UNEET 1st Round Counselling 2025 Time Table
ಪ್ರಸಕ್ತ ಸಾಲಿನ ಯುಜಿಸಿಇಟಿ ಹಾಗೂ ಯುಜಿನೀಟ್ ಪ್ರವೇಶಾತಿಗೆ ಸಂಬಂಧಿಸಿದಂತೆ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶದ ಬಳಿಕ ಸೀಟು ಹಂಚಿಕೆ ವಿಧಾನದ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಗುರುವಾರ(ಆ.7)ದಂದು ಬಿಡುಗಡೆ ಮಾಡಿದೆ.
ವೈದ್ಯಕೀಯ, ದಂತ ವೈದ್ಯಕೀಯ, ಹೋಮಿಯೋಪತಿ, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಫಾರ್ಮ-ಡಿ. ಬಿ.ಎಸ್.ಸಿ (ನರ್ಸಿಂಗ್), ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್ ಮುಂತಾದ ಕೋರ್ಸುಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಹಾಗೂ ಸೀಟು ಹಂಚಿಕೆ ವಿಧಾನದ ವೇಳಾಪಟ್ಟಿಯನ್ನು ಪ್ರಾಧಿಕಾರವು ಆ.2ರಂದು ಬಿಡುಗಡೆ ಮಾಡಲಾಗಿತ್ತು.
ಯುಜಿಸಿಇಟಿ ಹಾಗೂ ಯುಜಿನೀಟ್ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ಕೋರ್ಸುಗಳಿಗೆ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ (Choice ಗಳನ್ನು ಆಯ್ಕೆ ಮಾಡಿಕೊಳ್ಳಲು, ಶುಲ್ಕ ಪಾವತಿ ಮಾಡಲು ಹಾಗೂ ಆಯಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು) ಮುಂದಿನ ವಿಧಾನದ ವೇಳಾಪಟ್ಟಿಯನ್ನು ಪ್ರಾಧಿಕಾರವು KEA ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ನಲ್ಲಿ ಬಿಡುಗಡೆ ಮಾಡಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳು –
ಅಭ್ಯರ್ಥಿಗಳಿಗೆ ಆ.2 ರಿಂದ ಚಾಯ್ಸ್ ಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು – ಚಾಯ್ಸ್-1 ಆಯ್ಕೆ ಮಾಡಿದ ವಿದ್ಯಾರ್ಥಿಗಳು ಆ.14 ರೊಳಗೆ ಶುಲ್ಕ ಪಾವತಿ ಮಾಡಿ, Confirmation Slip Download ಮಾಡಿಕೊಂಡು, ಬಳಿಕ ಶುಲ್ಕ ಪಾವತಿ ಹಾಗೂ ಡೌನ್ಲೋಡ್ ಮಾಡಿದ Confirmation Slip ನೊಂದಿಗೆ ಆಯಾ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.
ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಫಾರ್ಮ-ಡಿ ವಿದ್ಯಾರ್ಥಿಗಳು –
ಅಭ್ಯರ್ಥಿಗಳಿಗೆ ಆ.4ರಿಂದ ಚಾಯ್ಸ್ ಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು – ಚಾಯ್ಸ್-1 ಆಯ್ಕೆ ಮಾಡಿದ ವಿದ್ಯಾರ್ಥಿಗಳು ಆ.14 ರೊಳಗೆ ಶುಲ್ಕ ಪಾವತಿ ಮಾಡಿ, Confirmation Slip Download ಮಾಡಿಕೊಂಡು. ನಂತರ ಶುಲ್ಕ ಪಾವತಿ ಹಾಗೂ ಡೌನ್ಲೋಡ್ ಮಾಡಿದ Confirmation Slip ನೊಂದಿಗೆ ಆಯಾ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.
ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿ, ಅಲೈಡ್ ಹೆಲ್ತ್ ಸೈನ್ಸ್, ಆರ್ಕಿಟೆಕ್ಟರ್ ವಿದ್ಯಾರ್ಥಿಗಳು –
ಅಭ್ಯರ್ಥಿಗಳಿಗೆ ಆ.5 ರಿಂದ ಚಾಯ್ಸ್ ಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು – ಚಾಯ್ಸ್-1 ಆಯ್ಕೆ ಮಾಡಿದ ವಿದ್ಯಾರ್ಥಿಗಳು ಆ.12 ರೊಳಗೆ ಶುಲ್ಕ ಪಾವತಿ ಮಾಡಿ, Confirmation Slip Download ಮಾಡಿಕೊಂಡು. ನಂತರ ಶುಲ್ಕ ಪಾವತಿ ಹಾಗೂ ಡೌನ್ಲೋಡ್ ಮಾಡಿದ Confirmation Slip ನೊಂದಿಗೆ ಆ.14 ರೊಳಗೆ ಆಯಾ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.
ಬಿ.ಎಸ್.ಸಿ (ನರ್ಸಿಂಗ್) ವಿದ್ಯಾರ್ಥಿಗಳು –
ಅಭ್ಯರ್ಥಿಗಳಿಗೆ ಆ.6 ರಿಂದ ಚಾಯ್ಸ್ ಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು – ಚಾಯ್ಸ್-1 ಆಯ್ಕೆ ಮಾಡಿದ ವಿದ್ಯಾರ್ಥಿಗಳು ಆ.12 ರೊಳಗೆ ಶುಲ್ಕ ಪಾವತಿ ಮಾಡಿ, Confirmation Slip Download ಮಾಡಿಕೊಂಡು. ನಂತರ ಶುಲ್ಕ ಪಾವತಿ ಹಾಗೂ ಡೌನ್ಲೋಡ್ ಮಾಡಿದ Confirmation Slip ನೊಂದಿಗೆ ಆ.14 ರೊಳಗೆ ಆಯಾ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.
ಹೋಮಿಯೋಪತಿ ವಿದ್ಯಾರ್ಥಿಗಳು –
ಅಭ್ಯರ್ಥಿಗಳಿಗೆ ಆ.7 ರಿಂದ ಚಾಯ್ಸ್ ಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು – ಚಾಯ್ಸ್-1 ಆಯ್ಕೆ ಮಾಡಿದ ವಿದ್ಯಾರ್ಥಿಗಳು ಆ.12 ರೊಳಗೆ ಶುಲ್ಕ ಪಾವತಿ ಮಾಡಿ, Confirmation Slip Download ಮಾಡಿಕೊಂಡು. ನಂತರ ಶುಲ್ಕ ಪಾವತಿ ಹಾಗೂ ಡೌನ್ಲೋಡ್ ಮಾಡಿದ Confirmation Slip ನೊಂದಿಗೆ ಆ.14 ರೊಳಗೆ ಆಯಾ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.
ವೈದ್ಯಕೀಯ, ದಂತವೈದ್ಯಕೀಯ ಅಭ್ಯರ್ಥಿಗಳು –
ಅಭ್ಯರ್ಥಿಗಳಿಗೆ ಆ.9 ರಿಂದ ಚಾಯ್ಸ್ ಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು – ಚಾಯ್ಸ್-1 ಆಯ್ಕೆ ಮಾಡಿದ ವಿದ್ಯಾರ್ಥಿಗಳು ಆ.15 ರೊಳಗೆ ಶುಲ್ಕ ಪಾವತಿ ಮಾಡಿ, Confirmation Slip Download ಮಾಡಿಕೊಂಡು. ನಂತರ ಶುಲ್ಕ ಪಾವತಿ ಹಾಗೂ ಡೌನ್ಲೋಡ್ ಮಾಡಿದ Confirmation Slip ನೊಂದಿಗೆ ಆ.16 ರೊಳಗೆ ಆಯಾ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು.
UGCET, UNEET 1st Round Counselling 2025 Time Table PDF(Dated on 7/8/2025)