Uniformed Services Training 2024: ಸಮವಸ್ತ್ರ ಸೇವೆಗಳ ತರಬೇತಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ

Follow Us:

ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ ಸಮವಸ್ತ್ರ ಸೇವೆಗಳಿಗೆ ಸೇರ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ(Uniformed Services Training 2024) ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತು ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪೂರ್ವ ಸಿದ್ಧತೆ ಬಗ್ಗೆ ಉಚಿತವಾಗಿ 2 ತಿಂಗಳು ವಸತಿಯುತ ದೈಹಿಕ ಸಾಮರ್ಥ್ಯ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲಾಗುತ್ತದೆ. ಈ ಪ್ರಕಟಣೆ ಕುರಿತು ಸಂಪೂರ್ಣ ಮಾಹಿತಿಗಾಗಿ ಈ ಲೇಖನ ಓದಿರಿ.

Uniformed Services Training 2024
Uniformed Services Training 2024

Educational Qualification:

ವಿದ್ಯಾರ್ಹತೆ : 10ನೇ ತರಗತಿ ಪಾಸ್.

Age Eligibility:

17 ವರ್ಷ 6 ತಿಂಗಳಿನಿಂದ 23 ವರ್ಷದ ವಯೋಮಾನದವರಾಗಿರಬೇಕು.

Eligibility Criteria:

  • ಕುಟುಂಬದ ವಾರ್ಷಿಕ ಆದಾಯ ರೂ.5.00 ಲಕ್ಷ ಮೀರಿರಬಾರದು.
  • ಎಸ್‌ಸಿ / ಎಸ್‌ಟಿ ಸಮುದಾಯದ ಅಭ್ಯರ್ಥಿಗಳು‌ ಅರ್ಜಿ ಸಲ್ಲಿಸಬಹುದು.
  • ಇಲಾಖೆ ನಿಗದಿಪಡಿಸಿರುವ ದೈಹಿಕ ಸಾಮರ್ಥ್ಯ ಅರ್ಹತೆಗಳನ್ನು ಹೊಂದಿರಬೇಕು.

Selection Process:

ಮೊದಲು ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಹಂತ ಹಂತವಾಗಿ ತರಬೇತಿಗೆ ನಿಯೋಜಿಸಲಾಗುವುದು.

Last Date of Uniformed Services Training 2024 Online Application Form

ಅರ್ಜಿ ಸಲ್ಲಿಸಲು ಕೊನೆಯ ‌ದಿನಾಂಕ: 30-08-2024 (Extended)

ಅರ್ಜಿ ಸಲ್ಲಿಸುವ ವಿಧಾನ (How to Apply)

  • ಮೊದಲಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ https://swdservices.karnataka.gov.in/petccoaching/UNIHome.aspx ಭೇಟಿ ನೀಡಿ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಮೂಲಕ ಲಾಗಿನ್ ಮಾಡಿ.
  • ನಂತರ ಅರ್ಜಿ ಸಲ್ಲಿಸುವ ಮುಖಪುಟವು ನಿಮ್ಮ ಪರದೆಯ ಮೇಲೆ ತೆರೆಯುತ್ತದೆ.
  • ಅಲ್ಲಿ ಕೇಳಲಾಗುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ನಂತರ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ಕೊನೆಯದಾಗಿ “ಸಲ್ಲಿಸು ಕ್ಲಿಕ್” ಮಾಡಿ ಅರ್ಜಿ ಸಂಖ್ಯೆಯನ್ನು ಭವಿಷ್ಯದ ಉದ್ದೇಶಕ್ಕಾಗಿ ಬರೆದಿಟ್ಟುಕೊಳ್ಳಿ.

Important Links:

Uniformed Services Training 2024 Apply OnlineClick Here
Official Websiteswd services
More UpdatesKarnatakahelp.in

Leave a Comment