ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು(AIIMS) ಮತ್ತು ಇತರೆ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿನ ಗ್ರೂಪ್-ಬಿ ಹಾಗೂ ಗ್ರೂಪ್-ಸಿ ಹುದ್ದೆಗಳನ್ನು ಸಾಮಾನ್ಯ ನೇಮಕಾತಿ ಪರೀಕ್ಷೆ-4ರ ಮೂಲಕ ಭರ್ತಿಗಾಗಿ ಏಮ್ಸ್ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ.
ವಿವಿಧ ಬೋಧಕೇತರ ವೃಂದಗಳಲ್ಲಿ ಖಾಲಿ ಇರುವ ಒಟ್ಟು 1383 ಗ್ರೂಪ್-ಬಿ ಮತ್ತು ಗ್ರೂಪ್-ಸಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.02ರೊಳಗೆ ಅರ್ಜಿ ಸಲ್ಲಿಸಲು AIIMS ಅಧಿಕೃತ ಜಾಲತಾಣ https://aiimsexams.ac.in/ಕ್ಕೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ನವೆಂಬರ್ 14, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 02, 2025
- ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಡಿಸೆಂಬರ್ 02, 2025
ಶೈಕ್ಷಣಿಕ ಅರ್ಹತೆ:
• ಆಸ್ಪತ್ರೆ ಅಟೆಂಡೆಂಟ್, ಶವಗಾರ, ಅಟೆಂಡೆಂಟ್, ಬಹುಕಾರ್ಯಕ ಸಿಬ್ಬಂದಿ ಹುದ್ದೆಗಳಿಗೆ – ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು.
• ಲ್ಯಾಬ್ ಟೆಕ್ನಿಷಿಯನ್, ಎಕ್ಸ್-ರೇ ಟೆಕ್ನಿಷಿಯನ್ ಹುದ್ದೆಗಳಿಗೆ – ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು.
• ಎಂಜಿನಿಯರಿಂಗ್ ಮತ್ತು ತಾಂತ್ರಿಕ ಹುದ್ದೆಗಳಿಗೆ – ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಎಂಜಿನಿಯರಿಂಗ್/ಡಿಪ್ಲೊಮಾ ಪೂರ್ಣಗೊಳಿಸಬೇಕು.
• ವೃತ್ತಿಪರ ಹುದ್ದೆಗಳಿಗೆ – ಅಭ್ಯರ್ಥಿಗಳು (ಬಿ.ಎಸ್ಸಿ., ಬಿ.ಟೆಕ್., ಬಿ.ಫಾರ್ಮಸಿ, ಬಿಪಿಟಿ, ಬಿಒಟಿ, ಇತ್ಯಾದಿ) ವಿಭಾಗಗಳಲ್ಲಿ ಪದವಿ ಪೂರ್ಣಗೊಳಿಸಬೇಕು.
• ಹಿರಿಯ ತಾಂತ್ರಿಕ ಹುದ್ದೆಗಳಿಗೆ – ಅಭ್ಯರ್ಥಿಗಳು (ಎಂ.ಎಸ್ಸಿ., ಎಂಟೆಕ್, ಎಂಪಿಟಿ ಇತ್ಯಾದಿ) ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
• ನರ್ಸಿಂಗ್ ಹುದ್ದೆಗಳಿಗೆ – ಅಭ್ಯರ್ಥಿಗಳು ಬಿ.ಎಸ್ಸಿ. ನರ್ಸಿಂಗ್, ಜಿಎನ್‌ಎಂ ನಂತಹ ವೃತ್ತಿಪರ ಅರ್ಹತೆಗಳನ್ನು ಹೊಂದಿರಬೇಕು.
ಗಮನಿಸಿ ಬಂಧುಗಳೇ: ಹೆಚ್ಚಿನ ಶೈಕ್ಷಣಿಕ ಅರ್ಹತೆಗಳಿಗಾಗಿ ಅಭ್ಯರ್ಥಿಗಳು ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
02-12-2025 ರಂತೆ;
- ಕನಿಷ್ಠ ವಯಸ್ಸಿನ ಮಿತಿ – 18-21 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ – 27-35 ವರ್ಷಗಳು
ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ ಸಡಿಲಿಕೆ; ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ – 10 ವರ್ಷಗಳು
ಆಯ್ಕೆ ವಿಧಾನ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ CBT
- ಕೌಶಲ್ಯ ಪರೀಕ್ಷೆ
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ (ಪೇ ಲೆವೆಲ್ 1-7ರ) ನಿಯಮದಂತೆ ಮಾಹೆಯಾನ ವೇತನ ಹಾಗೂ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ – 3000ರೂ.
ಪ.ಜಾತಿ, ಪ.ಪಂಗಡ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 2,400ರೂ.
ಪಿಡಬ್ಲ್ಯೂಬಿಡಿ – ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
• AIIMS ಅಧಿಕೃತ ಜಾಲತಾಣ https://aiimsexams.ac.in/advertisement/6915d3056d76b75af3e2187dಕ್ಕೆ ಭೇಟಿ ನೀಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಅಭ್ಯರ್ಥಿ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• ನಂತರ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
Important Direct Links:
| Official Notification PDF | Download |
| Online Application Form Link | Apply Now |
| Official Website | https://aiimsexams.ac.in/ |
| More Updates | KarnatakaHelp.in |