ಪ್ರಸಕ್ತ ಸಾಲಿನ ಎರಡು ವರ್ಷಗಳ ಬಿ.ಇಡ್ ಕೋರ್ಸ್ಗೆ ಸರ್ಕಾರಿ ಕೋಟಾದಡಿಯಲ್ಲಿ ರಾಜ್ಯದ ಸರ್ಕಾರಿ, ಮಾನ್ಯತೆ ಪಡೆದ ಅನುದಾನಿತ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶೇ.50 ಅಂಕಗಳೊಂದಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ರೋಸ್ಟರ್ ಮತ್ತು ಮೆರಿಟ್ ಆಧಾರದಲ್ಲಿ ಅಭ್ಯರ್ಥಿಯು ಆಯ್ಕೆ ಮಾಡಿಕೊಂಡಿರುವ ಕಾಲೇಜುಗಳ ಅನುಸಾರ ಸೀಟು ಹಂಚಿಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ನ.3 ಕೊನೆ ದಿನವಾಗಿದೆ. ಆಸಕ್ತರು https://sts.karnataka.gov.in/GPSTRHK/ನ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿದ ಅಧಿಸೂಚನೆ ತಿಳಿಸಿದೆ.
ಕನಿಷ್ಠ ಶೇ.50 ಅಂಕಗಳೊಂದಿಗೆ ಪದವಿ ಅಥವಾ ವಿಜ್ಞಾನ/ಸಾಮಾಜಿಕ ವಿಜ್ಞಾನಗಳು/ಮಾನವಿಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಥವಾ ಕನಿಷ್ಠ ಶೇ.55 ಅಂಕಗಳೊಂದಿಗೆ ಇಂಜಿನಿಯರಿಂಗ್ನಲ್ಲಿ ಪದವಿ. ಹಾಗೂ ಇತರೆ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು?
ಎಸ್ಸೆಸ್ಸೆಲ್ಸಿ ಅಂಕಪಟ್ಟಿ
ಪಿಯುಸಿ ಅಂಕಪಟ್ಟಿ
ಪದವಿ ಅಂಕಪಟ್ಟಿಗಳು
ಸ್ನಾತಕೋತ್ತರ ಅಂಕಪಟ್ಟಿಗಳು
ಕರ್ನಾಟಕದ ಅಭ್ಯರ್ಥಿ ಎಂದು ಪರಿಗಣಿಸಲು ಕನಿಷ್ಠ 7 ವರ್ಷಗಳ ವ್ಯಾಸಾಂಗ ಪ್ರಮಾಣಪತ್ರ (1 ರಿಂದ 12ನೇ ತರಗತಿವರೆಗೆ)
ಕನ್ನಡ ಮಾಧ್ಯಮ ಮೀಸಲಾತಿಗಾಗಿ ಕನ್ನಡ ಮಾಧ್ಯಮ ಪ್ರಮಾಣಪತ್ರ(1 ರಿಂದ 12ನೇ ತರಗತಿವರೆಗೆ)
ಜಾತಿ ಮತ್ತು ಆದಾಯ ಪ್ರಮಾಣಪತ್ರ
ವಾಸಸ್ಥಳ ಪ್ರಮಾಣಪತ್ರ
ಹಾಗೂ ಇತರೆ ಅವಶ್ಯಕ ದಾಖಲೆಗಳು
ಅರ್ಜಿ ಶುಲ್ಕ:
ಪ.ಜಾತಿ/ಪ.ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ – ರೂ.100, ಇತರೆ ಅಭ್ಯರ್ಥಿಗಳಿಗೆ-ರೂ.300, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿನಾಯಿತಿ ನೀಡಲಾಗಿದೆ.
ಗಮನಿಸಿ: 2025-26ನೇ ಸಾಲಿನ ಬಿ.ಇಡಿ ಪ್ರವೇಶದ ಅಧಿಸೂಚನೆ ಹೊರಡಿಸಿದ ದಿನಾಂಕದ ಪೂರ್ವದಲ್ಲಿ ನಿಗದಿತ ವಿದ್ಯಾರ್ಹತೆಯ ಪರೀಕ್ಷೆ ಬರೆದು ಅಂಕಪಟ್ಟಿಗಳನ್ನು ಪಡೆದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಕೆಗೆ ಹೇಗೆ?
ಹಂತ-1. ಅಧಿಕೃತ ವೆಬ್ಸೈಟ್ https://schooleducation.karnataka.gov.in/ಗೆ ಭೇಟಿ ನೀಡಿ
ಹಂತ- 2. ನಂತರ ಮುಖಪುಟದಲ್ಲಿ ನೀಡಲಾಗಿರುವ “Online Application for admission to 2 year B.Ed course for the year 2025-26.” ಶಿರ್ಷೀಕೆಯಡಿಯಲ್ಲಿ ನೀಡಲಾದ “ONLINE APPLICATION FOR ADMISSION” ಲಿಂಕ್ ಮೇಲೆ ಒತ್ತಿ.
B.ed Admission 2025-26
ಹಂತ- 3.ಈಗಾಗಲೇ ನೋಂದಣಿಯಾಗಿದ್ದರೆ ಲಾಗಿನ್ ಮಾಡಿ, ಇಲ್ಲದಿದ್ದರೆ ನೋಂದಣಿ(Register) ಬಟನ್ ಮೇಲೆ ಒತ್ತಿ ನೋಂದಣಿ(Registration) ಮಾಡಿಕೊಳ್ಳಿ.
B.ed Admission 2025-26
ಹಂತ – 4. ಅಲ್ಲಿ ಕೇಳಲಾದ ಎಲ್ಲಾ ಅಂಕಣಗಳನ್ನು ತಪ್ಪದೇ ಭರ್ತಿ ಮಾಡಿ. ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಿ.