BEL Diploma and Graduate Apprenticeship Notification 2025
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)ನಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ ಡಿಪ್ಲೋಮಾ ಹಾಗೂ ಪದವೀಧರ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಬೆಲ್‌ನ ಕಲಿಕಾ ಮತ್ತು ಅಭಿವೃದ್ಧಿ ಕೇಂದ್ರ ಅಧಿಸೂಚನೆ ಪ್ರಕಟಿಸಿದೆ.
ಸದರಿ ಹುದ್ದೆಗಳ ಅರ್ಹತಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಗತ್ಯ ದಾಖಲಾತಿಗಳೊಂದಿಗೆ ನ.27ರಂದು ನಡೆಸಲಾಗುವ ವಾಕ್-ಇನ್(ಲಿಖಿತ ಪರೀಕ್ಷೆ)ಗೆ ಹಾಜರಾಗಬಹುದು ಎಂದು ಬೆಲ್ ಹೊರಡಿಸಿದ ಅಧಿಸೂಚನೆ ತಿಳಿಸಿದೆ.
ತರಬೇತಿಯ ಸಮಯದಲ್ಲಿ ಪದವೀಧರ ಎಂಜಿನಿಯರಿಂಗ್ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ರೂ.17,500 ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ರೂ.12,500 ಸ್ಟೈಫಂಡ್ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಸದರಿ ಅಪ್ರೆಂಟಿಸ್ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನ.27ರಂದು ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುವ ವಾಕ್-ಇನ್ (ಲಿಖಿತ ಪರೀಕ್ಷೆ)ಯಲ್ಲಿ ಪಾಲ್ಗೊಳ್ಳಬಹುದು.
ವಿಳಾಸ: ಕಲಿಕಾ ಮತ್ತು ಅಭಿವೃದ್ಧಿ ಕೇಂದ್ರ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು-560013
✓ ವಾಕ್-ಇನ್ (ಲಿಖಿತ ಪರೀಕ್ಷೆ) ನಡೆಸುವ ಸಮಯ:
ಪದವೀಧರ ಎಂಜಿನಿಯರಿಂಗ್ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ಬೆಳಿಗ್ಗೆ 09 ರಿಂದ 11 ಗಂಟೆಯವರೆಗೆ ಹಾಗೂ ಡಿಪ್ಲೋಮಾ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ಮಧ್ಯಾಹ್ನ 1.30 ರಿಂದ 03 ಗಂಟೆಯವರೆಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.
Mohmmad fazil a