BELನಲ್ಲಿ ಅಪ್ರೆಂಟಿಸ್‌ಶಿಪ್, ವಾಕ್-ಇನ್‌ಗೆ ಕರೆ

ಪದವೀಧರರಿಗೆ ರೂ.17,500 ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ ರೂ.12,500 ಶಿಷ್ಯವೇತನ

Published on:

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)ನಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ ಡಿಪ್ಲೋಮಾ ಹಾಗೂ ಪದವೀಧರ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಬೆಲ್‌ನ ಕಲಿಕಾ ಮತ್ತು ಅಭಿವೃದ್ಧಿ ಕೇಂದ್ರ ಅಧಿಸೂಚನೆ ಪ್ರಕಟಿಸಿದೆ.

ಸದರಿ ಹುದ್ದೆಗಳ ಅರ್ಹತಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಗತ್ಯ ದಾಖಲಾತಿಗಳೊಂದಿಗೆ ನ.27ರಂದು ನಡೆಸಲಾಗುವ ವಾಕ್-ಇನ್(ಲಿಖಿತ ಪರೀಕ್ಷೆ)ಗೆ ಹಾಜರಾಗಬಹುದು ಎಂದು ಬೆಲ್‌ ಹೊರಡಿಸಿದ ಅಧಿಸೂಚನೆ ತಿಳಿಸಿದೆ.

ನೇಮಕಾತಿಯ ಪ್ರಮುಖ ದಿನಾಂಕಗಳು:

  • ನೇಮಕಾತಿಯ ಪ್ರಕಟಣೆಯ ದಿನಾಂಕ – ನವೆಂಬರ್ 21, 2025
  • ವಾಕ್-ಇನ್ ಸಂದರ್ಶನ ನಡೆಯುವ ದಿನಾಂಕ – ನವೆಂಬರ್ 27, 2025

ಶೈಕ್ಷಣಿಕ ಅರ್ಹತೆ:

✓ ಪದವೀಧರ ಎಂಜಿನಿಯರಿಂಗ್ ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ ಬಿಇ/ಬಿ.ಟೆಕ್ ಪದವಿ ಪೂರ್ಣಗೊಳಿಸಬೇಕು.

✓ ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ ಮೂರು ವರ್ಷದ ಡಿಪ್ಲೋಮಾ ಪದವಿ ಪೂರ್ಣಗೊಳಿಸಬೇಕು.

ವಯೋಮಿತಿ:

ಗರಿಷ್ಠ ವಯಸ್ಸಿನ ಮಿತಿ – 25 ವರ್ಷಗಳು

ವಯೋಮಿತಿ ಸಡಿಲಿಕೆ; ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷಗಳು

ಆಯ್ಕೆ ವಿಧಾನ:

ಲಿಖಿತ ಪರೀಕ್ಷೆ
ಸಂದರ್ಶನ

ಶಿಷ್ಯವೇತನ:

ತರಬೇತಿಯ ಸಮಯದಲ್ಲಿ ಪದವೀಧರ ಎಂಜಿನಿಯರಿಂಗ್ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ರೂ.17,500 ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ರೂ.12,500 ಸ್ಟೈಫಂಡ್ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ದಾಖಲೆಪರಿಶೀಲನೆಗಾಗಿ ಒದಗಿಸಬೇಕಾದ ಅಗತ್ಯ ದಾಖಲೆಗಳು:

• ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
• ಡಿಪ್ಲೊಮಾ/ಪದವಿ ಪ್ರಮಾಣಪತ್ರ /ತಾತ್ಕಾಲಿಕ ಡಿಪ್ಲೊಮಾ/ಪದವಿ ಪ್ರಮಾಣಪತ್ರ (PDC)
• ಆಧಾರ್ ಕಾರ್ಡ್
• ಪ.ಜಾತಿ, ಪ.ಪಂಗಡ, ಒಬಿಸಿ ಪಿಡಬ್ಲ್ಯೂಡಿ ಪ್ರಮಾಣಪತ್ರಗಳು (ಅನ್ವಯಿಸಿದರೆ)

ವಾಕ್-ಇನ್ ಲಿಖಿತ ಪರೀಕ್ಷೆ ನಡೆಸುವ ದಿನಾಂಕ ಹಾಗೂ ಸ್ಥಳ

ಸದರಿ ಅಪ್ರೆಂಟಿಸ್ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನ.27ರಂದು ಈ ಕೆಳಗಿನ ವಿಳಾಸದಲ್ಲಿ ನಡೆಸಲಾಗುವ ವಾಕ್-ಇನ್ (ಲಿಖಿತ ಪರೀಕ್ಷೆ)ಯಲ್ಲಿ ಪಾಲ್ಗೊಳ್ಳಬಹುದು.

ವಿಳಾಸ: ಕಲಿಕಾ ಮತ್ತು ಅಭಿವೃದ್ಧಿ ಕೇಂದ್ರ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು-560013

✓ ವಾಕ್-ಇನ್ (ಲಿಖಿತ ಪರೀಕ್ಷೆ) ನಡೆಸುವ ಸಮಯ:

ಪದವೀಧರ ಎಂಜಿನಿಯರಿಂಗ್ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ಬೆಳಿಗ್ಗೆ 09 ರಿಂದ 11 ಗಂಟೆಯವರೆಗೆ ಹಾಗೂ ಡಿಪ್ಲೋಮಾ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ಮಧ್ಯಾಹ್ನ 1.30 ರಿಂದ 03 ಗಂಟೆಯವರೆಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

Important Direct Links:

Diploma Apprentice Official Notification PDFDownload
Graduate Apprentice Official Notification PDFDownload
Official Websitehttps://bel-india.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

6 thoughts on “BELನಲ್ಲಿ ಅಪ್ರೆಂಟಿಸ್‌ಶಿಪ್, ವಾಕ್-ಇನ್‌ಗೆ ಕರೆ”

Leave a Comment