ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2026-27ನೇ ಶೈಕ್ಷಣಿಕ ಸಾಲಿನ ಪದವಿಪೂರ್ವ ಕೋರ್ಸ್ಗಳ ಪ್ರವೇಶಾತಿಗಾಗಿ ನಡೆಸುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ[CUET (UG)]ಯ ನೋಂದಣಿ ಜ.03ರಿಂದ ಆರಂಭವಾಗಿದೆ.
ಪ್ರವೇಶ ಪರೀಕ್ಷೆಯು ಮೇ.11 ರಿಂದ 31ರವರೆಗೆ ನಡೆಯಲಿದೆ. ಭಾರತದ ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳು/ಭಾಗವಹಿಸುವ ವಿಶ್ವವಿದ್ಯಾಲಯಗಳಲ್ಲಿ (ರಾಜ್ಯ/ಡೀಮ್/ಖಾಸಗಿ) ಪದವಿ ಪೂರ್ವ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ನಡೆಸಲಾಗುವ ಪ್ರವೇಶ ಪರೀಕ್ಷೆಯಾಗಿದೆ. ಕನ್ನಡ ಭಾಷೆ ಸೇರಿ 13 ಭಾಷೆಗಳನ್ನೊಳಗೊಂಡ ಒಟ್ಟು 37 ವಿಷಯಗಳು ಕುರಿತು ಪರೀಕ್ಷೆ ಇದಾಗಿದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು NTA ಅಧಿಕೃತ ವೆಬ್ಸೈಟ್ https://cuet.nta.nic.in/ಗೆ ಭೇಟಿ ನೀಡಿ ಜ.30 ರೊಳಗೆ ಅರ್ಜಿ ಸಲ್ಲಿಸಬಹುದು.
CUET UG ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ – ಜನವರಿ 03, 2026
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ – ಜನವರಿ 30, 2026
ಆನ್ಲೈನ್ನಲ್ಲಿ ಪರೀಕ್ಷಾ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಜನವರಿ 31, 2026
ಆನ್ಲೈನ್ನಲ್ಲಿ ಅರ್ಜಿಯನ್ನು ತಿದ್ದುಪಡಿ ಮಾಡಲು ಕೊನೆಯ ದಿನಾಂಕ – ಫೆಬ್ರವರಿ 2-4, 2026
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯುವ ದಿನಾಂಕ – ಮೇ 11-31, 2026
ಪರೀಕ್ಷೆಯ ವಿವರ:
CUET UG-2026ರ ಪರೀಕ್ಷೆಯನ್ನು 37 ವಿಷಯಗಳ ಪತ್ರಿಕೆಗಳಿಗೆ ಒಟ್ಟು 13 ಭಾಷೆಯಲ್ಲಿ ಅಭ್ಯರ್ಥಿಗಳ ಸಂಖ್ಯೆ ಮತ್ತು ವಿಷಯದ ಆಯ್ಕೆಗಳನ್ನು ಅವಲಂಬಿಸಿ ಪರೀಕ್ಷೆಯನ್ನು ಬಹು ಪಾಳಿಗಳಲ್ಲಿ ನಡೆಸಲಾಗುತ್ತದೆ.
• ಪ್ರತಿ ಪರೀಕ್ಷಾ ಪತ್ರಿಕೆಯು ಒಟ್ಟು 50 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಹಾಗೂ ಪ್ರತಿ ಸರಿಯಾದ ಉತ್ತರಕ್ಕೆ 5 ಅಂಕಗಳು ಹಾಗೂ ಪ್ರತಿ ತಪ್ಪು ಉತ್ತರಕ್ಕೆ 1 ಋಣಾತ್ಮಕ ಅಂಕ ಇರುತ್ತದೆ.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ/ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಥವಾ 2026ರಲ್ಲಿ ಹಾಜರಾಗುತ್ತಿರುವ ಅಭ್ಯರ್ಥಿಗಳು CUET (UG) – 2026ರ ಪರೀಕ್ಷೆಗೆ ಹಾಜರಾಗಬಹುದು.
ವಯೋಮಿತಿ:
✓ CUET UG ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಯಾವುದೇ ನಿಗದಿತ ವಯಸ್ಸಿನ ಮಿತಿಯಿಲ್ಲ.
ಆಯ್ಕೆ ವಿಧಾನ:
• ಕಂಪ್ಯೂಟರ್ ಆಧಾರಿತ ಪರೀಕ್ಷೆ • ದಾಖಲೆ ಪರಿಶೀಲನೆ • ಅರ್ಹತಾ ಪಟ್ಟಿ
ಪರೀಕ್ಷಾ ಶುಲ್ಕ:
✓ ಮೂರು ವಿಷಯಗಳ ಪತ್ರಿಕೆಗಳಿಗೆ;
ಸಾಮಾನ್ಯ ಅಭ್ಯರ್ಥಿಗಳಿಗೆ – 1000ರೂ.
ಇಡಬ್ಲ್ಯೂಎಸ್ ಹಾಗೂ ಒಬಿಸಿ-ಎನ್ಸಿಎಲ್ ಅಭ್ಯರ್ಥಿಗಳಿಗೆ – 900ರೂ.
ಪ.ಜಾತಿ, ಪ.ಪಂಗಡ, ಪಿ.ಡಬ್ಲ್ಯೂ.ಡಿ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ – 800ರೂ.
ಭಾರತದ ಹೊರಗಿನ ಕೇಂದ್ರಗಳು – 4500ರೂ.
✓ ಪ್ರತಿ ಹೆಚ್ಚುವರಿ ವಿಷಯಗಳಿಗೆ;
ಸಾಮಾನ್ಯ ಅಭ್ಯರ್ಥಿಗಳಿಗೆ – 400ರೂ.
ಇಡಬ್ಲ್ಯೂಎಸ್ ಹಾಗೂ ಒಬಿಸಿ-ಎನ್ಸಿಎಲ್ ಅಭ್ಯರ್ಥಿಗಳಿಗೆ – 375ರೂ.
ಪ.ಜಾತಿ, ಪ.ಪಂಗಡ, ಪಿ.ಡಬ್ಲ್ಯೂ.ಡಿ, ಪಿ.ಡ.ಬ್ಲ್ಯೂ.ಬಿ.ಡಿ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ – 350ರೂ.
ಭಾರತದ ಹೊರಗಿನ ಕೇಂದ್ರಗಳು – 1800ರೂ.
ಅರ್ಜಿ ಸಲ್ಲಿಕೆಯ ವಿಧಾನ:
• ಮೊದಲಿಗೆ ವಿದ್ಯಾರ್ಥಿಗಳು NTA ಅಧಿಕೃತ ವೆಬ್ಸೈಟ್ https://cuet.nta.nic.in/ ಗೆ ಭೇಟಿ ನೀಡಿ.
• ನಂತರ ಅಭ್ಯರ್ಥಿ ಚಟುವಟಿಕೆ ವಿಭಾಗದ ಕೆಳಗೆ ನೀಡಲಾಗಿರುವ -“CUET(UG)-2026 ಗಾಗಿ ನೋಂದಣಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಹಾಗೂ ಕ್ಯಾಪ್ಚ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಎಲ್ಲಾ ಸ್ವ ವಿವರ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಇತ್ತೀಚಿನ ಛಾಯಾಚಿತ್ರ ಮತ್ತು ಸಹಿ ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ನಂತರ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿಕೊಳ್ಳಿ.