ಉಡುಪಿ | ವೈದ್ಯಾಧಿಕಾರಿ, ಎಎನ್‌ಎಂ/ಪಿಹೆಚ್‌ಸಿಒ ಹುದ್ದೆಗಳ ನೇಮಕಾತಿ

ಸಂದರ್ಶನ ಮುಖೇನ ಆಯ್ಕೆ

Published on:

ಅನಿಸಿಕೆ
DHFWS Udupi ANM PHСО Notification 2026
DHFWS Udupi Notification 2026

ಉಡುಪಿ: ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ವತಿಯಿಂದ 2026-27ನೇ ಸಾಲಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಾಗೂ ನಮ್ಮ ಕ್ಲಿನಿಕ್‌ಗಳಲ್ಲಿ ಖಾಲಿ ನಾನಾ ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ.

ವೈದ್ಯಾಧಿಕಾರಿ 13 ಸ್ಥಾನ ಹಾಗೂ ANM/PHCO 04 ಸ್ಥಾನ ಸೇರಿದಂತೆ ಒಟ್ಟು 17 ಹುದ್ದೆಗಳನ್ನು ಗುತ್ತಿಗೆ ಆಧಾರವಾಗಿ ನೇಮಕ ನಡೆಯಲಿದೆ. ಎಂಬಿಬಿಎಸ್ ಪದವಿ, ಎಎನ್‌ಎಂ ಅರ್ಹತೆ ಹೊಂದಿರುವವರು, ಉಡುಪಿ ಜಿಲ್ಲೆ ಅಧಿಕೃತ ಜಾಲತಾಣ https://udupi.nic.in/ದ ಮೂಲಕ ಅರ್ಜಿನಮೂನೆಯನ್ನು ಡೌನ್ಲೋಡ್ ಮಾಡಿ ಹಾಗೂ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ, ಜೂ.11ರಂದು ‘ಜಿಲ್ಲಾ ಯೋಜನಾ ನಿರ್ವಹಣಾ ಘಟಕ ಎನ್.ಹೆಚ್.ಎಮ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ,ಉಡುಪಿ ಜಿಲ್ಲೆ, ಅಜ್ಜರಕಾಡು, ಉಡುಪಿ – 576101’ ನಲ್ಲಿ ನಡೆಯಲಿರುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment