ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ 2025ರ ಡಿಸೆಂಬರ್ ಮಾಹೆಯಲ್ಲಿ ನಡೆಯಲಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲಾ ಹಾಗೂ ಕಾಲೇಜುಗಳ ಅಭ್ಯರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ವಿಷಯವಾರು ಹೈಯರ್ ಗ್ರೇಡ್ ಹಾಗೂ ಲೋಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯನ್ನು ಡಿಸೆಂಬರ್ 17 ರಿಂದ 19 ರವರೆಗೆ ನಡೆಸಲಿದೆ. ಅಧಿಕೃತ ವೇಳಾಪಟ್ಟಿಯನ್ನು KSEAB ಜಾಲತಾಣ https://kseab.karnataka.gov.in/ದಲ್ಲಿ ಬಿಡುಗಡೆಯಾಗಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಗಳ ವೇಳಾಪಟ್ಟಿ: • ದಿನಾಂಕ 17-12-2025 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ – ವಸ್ತು ಚಿತ್ರಣ
• ದಿನಾಂಕ 17-12-2025 ಮಧ್ಯಾಹ್ನ 2 ರಿಂದ ಸಂಜೆ 3 ರವರೆಗೆ – ಸ್ಮರಣ ಚಿತ್ರಣ
• ದಿನಾಂಕ 18-12-2025 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ – ಪ್ರಕೃತಿ ಮತ್ತು ವರ್ಣ ಚಿತ್ರಣ
• ದಿನಾಂಕ 18-12-2025 ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ – ಭೂಮಿತಿ ರೇಖಾಕೃತಿ, ಅಕ್ಷರ ಲೇಖನ ಮತ್ತು ಪ್ರಮಾಣ ಚಿತ್ರಣ
• ದಿನಾಂಕ 19-12-2025 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ – ನಕ್ಷೆ ಮತ್ತು ವರ್ಣ ಚಿತ್ರಣ
• ದಿನಾಂಕ 19-12-2025 ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ – ಸರಳಗೈ ಚಿತ್ರಣ
ಲೋಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಗಳ ವೇಳಾಪಟ್ಟಿ: • ದಿನಾಂಕ 17-12-2025 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ – ವಸ್ತು ಚಿತ್ರಣ
• ದಿನಾಂಕ 17-12-2025 ಮಧ್ಯಾಹ್ನ 2 ರಿಂದ ಸಂಜೆ 3 ರವರೆಗೆ – ಸ್ಮರಣ ಚಿತ್ರಣ
• ದಿನಾಂಕ 18-12-2025 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ – ಪ್ರಕೃತಿ ಮತ್ತು ವರ್ಣ ಚಿತ್ರಣ
• ದಿನಾಂಕ 18-12-2025 ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ – ಭೂಮಿತಿ ರೇಖಾಕೃತಿ ಚಿತ್ರಣ
• ದಿನಾಂಕ 19-12-2025 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ – ನಕ್ಷೆ ಮತ್ತು ವರ್ಣ ಚಿತ್ರಣ
• ದಿನಾಂಕ 19-12-2025 ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ – ಸರಳಗೈ ಚಿತ್ರಣ
ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡುವ ವಿಧಾನ • KSEAB ಅಧಿಕೃತ ಜಾಲತಾಣ https://kseab.karnataka.gov.in/english ಕ್ಕೆ ಭೇಟಿ ನೀಡಿ.
• ಇತ್ತೀಚಿನ ಸುದ್ದಿಗಳು ವಿಭಾಗದಲ್ಲಿ ನೀಡಲಾಗಿರುವ “Click here for December-2025 Drawing grade examination timetable” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿ ಪರೀಕ್ಷಾ ದಿನಾಂಕವನ್ನು ಪರಿಶೀಲಿಸಿಕೊಳ್ಳಿ.
Important Direct Links: Drawing Grade Exam 2025 Karnataka Time Table PDF Download Drawing Grade Examination 2025 Notification Details Official Website https://kseab.karnataka.gov.in/ More Updates KarnatakaHelp.in
Please give in English I can’t understand the kannada
Drawing Lower Grade Examination December 2025