DRDO: ಬೆಂಗಳೂರಿನ CABSನಲ್ಲಿ ಫೆಲೋಶಿಪ್‌

ಫೆ.25, 26ಕ್ಕೆ ನೇರ ಸಂದರ್ಶನ

Published on:

ಫಾಲೋ ಮಾಡಿ
DRDO CABS Bengaluru Junior Research Fellowship 2026 Notification
DRDO CABS JRF 2026 Notification

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಪ್ರಮುಖ ಸಂಶೋಧನಾ ಕೇಂದ್ರವಾಗಿರುವ ಬೆಂಗಳೂರಿನ ಸೆಂಟರ್ ಫಾರ್ ಏರ್‌ಬೋರ್ನ್ ಸಿಸ್ಟಮ್ಸ್(CABS)ನಲ್ಲಿ 10 ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳ ಭರ್ತಿಗಾಗಿ ವಾಕ್-ಇನ್ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್ ಅಥವಾ ಎಂ.ಇ/ಎಂ.ಟೆಕ್ ಪದವಿ ಹೊಂದಿರುವ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಆಸಕ್ತರು ಫೆ.22 ರೊಳಗೆ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ, ಸಂಸ್ಥೆಯ ಇ-ಮೇಲ್‌ ವಿಳಾಶಕ್ಕೆ ರವಾನಿಸಬೇಕು. ನಂತರ ಫೆ.25, 26ಕ್ಕೆ “ಸೆಂಟರ್ ಫಾರ್ ಏರ್‌ಬೋರ್ನ್ ಸಿಸ್ಟಮ್ (CABS), DRDO, ರಕ್ಷಣಾ ಸಚಿವಾಲಯ, ಬೇಲೂರು, ಯೆಮ್ಲೂರು ಅಂಚೆ ಕಚೇರಿ, ಬೆಂಗಳೂರು-560037″ನಲ್ಲಿ ನಡೆಯಲಿರುವ ವಾಕ್‌ ಇನ್‌ ಸಂದರ್ಶನದಲ್ಲಿ ಭಾಗವಹಿಸಬೇಕು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment