WhatsApp Channel Join Now
Telegram Group Join Now

ಬರ ಪರಿಹಾರ ಸಿಗಬೇಕಾದರೆ ಬೇಕು FRUITS ID: ಪಡೆದುಕೊಳ್ಳುವುದು ಹೇಗೆ..? ಇಲ್ಲಿದೆ ಮಾಹಿತಿ

ರೈತರಿಗೆ ಇತ್ತೀಚಿನ ದಿನಗಳಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳಿಂದ ಜಮೀನು ಉಳುಮೆಯಿಂದ ಬೆಳೆ ಕಟಾವುವರೆಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ಖರೀದಿಸಲು ಫ್ರೂಟ್ಸ್ ಐಡಿ ಬೇಕಾಗುತ್ತದೆ. ಇದರೊಂದಿಗೆ ಸರ್ಕಾರದ ಯಾವುದೇ ಕೃಷಿಗೆ ಸಂಬಂಧಿಸಿದ ಬರ ಪರಿಹಾರ ಇನ್ನಿತರ ಯೋಜನೆಗೆ ಅರ್ಜಿ ಸಲ್ಲಿಸಲು ಫ್ರೂಟ್ಸ್ ಐಡಿ‌ ಕಡ್ಡಾಯವಾಗಿ ಅವಶ್ಯವಾಗಿದೆ.

ಫ್ರೂಟ್ಸ್ ಐಡಿ (FRUITS ID) ಎಂದರೆ “ಫಾರ್ಮರ್ ರೆಜಿಸ್ಟರ್ಡ್ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮೇಷನ್ ಸಿಸ್ಟಮ್” (Farmer Registered Unified Beneficiary Information System) ಎಂಬುದರ ಸಂಕ್ಷಿಪ್ತ ರೂಪ. ಇದು ಕರ್ನಾಟಕ ಸರ್ಕಾರವು ರೈತರಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಪ್ರಾರಂಭಿಸಿದ ಒಂದು ಯೋಜನೆಯಾಗಿದೆ. ಹಾಗಾದರೆ ಕೂಡ್ಸ್ ಐಡಿಯನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ಕುರಿತು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

Fruits ID Registration
Fruits ID Registration

Eligibility to Get FID Number?

ಫ್ರೂಟ್ಸ್ ಐಡಿ ಪಡೆಯಲು ಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ;

  • ಕರ್ನಾಟಕದ ನಿವಾಸಿಯಾಗಿರಬೇಕು
  • ವಯಸ್ಸು 18 ವರ್ಷ ಅಥವಾ ಅದಕ್ಕಿಂತ ಹೆಚ್ಚು
  • ಭೂಮಿಯ ಮಾಲೀಕರಾಗಿರಬೇಕು ಅಥವಾ ಕೃಷಿ ಕಾರ್ಮಿಕರಾಗಿರಬೇಕು
  • ಆಧಾರ್ ಕಾರ್ಡ್ ಹೊಂದಿರಬೇಕು

Documents Required for FRUITS-PMKISA Registration:

ಫ್ರೂಟ್ಸ್ ಐಡಿಗಾಗಿ ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿವೆ;

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಭೂಮಿಯ ದಾಖಲೆಗಳು (ಪಹಣಿ, RTC)
  • ಬ್ಯಾಂಕ್ ಪಾಸ್‌ಬುಕ್

Benefits of Fruits ID:

ಫ್ರೂಟ್ಸ್ ಐಡಿಯ ಪ್ರಯೋಜನಗಳು ಈ ಕೆಳಗಿನಂತಿವೆ;

  • ಸಬ್ಸಿಡಿಗಳನ್ನು ಪಡೆಯಲು ಅರ್ಹತೆ
  • ಬೆಳೆ ವಿಮೆ ಪಡೆಯಲು ಅರ್ಹತೆ
  • ಸಾಲ ಪಡೆಯಲು ಅರ್ಹತೆ
  • ಇತರ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅರ್ಹತೆ

How to Get Fruits ID Karnataka?

ಫ್ರೂಟ್ಸ್ ಐಡಿ ಪಡೆಯುವ ವಿಧಾನ ಈ ಕೆಳಗಿನಂತಿವೆ;

  • ಫ್ರೂಟ್ಸ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ: https://fruits.karnataka.gov.in/
  • “ಹೊಸ ನೋಂದಣಿ” ಕ್ಲಿಕ್ ಮಾಡಿ
  • ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿ ಮತ್ತು ಫಾರ್ಮ್ ಸಲ್ಲಿಸಿ
  • ನಿಮ್ಮ ನೋಂದಣಿ ಯಶಸ್ವಿಯಾದ ನಂತರ, ನಿಮಗೆ ಫ್ರೂಟ್ಸ್ ಐಡಿ ನೀಡಲಾಗುತ್ತದೆ

ಫ್ರೂಟ್ಸ್ ಐಡಿ ಕುರಿತು ಹೆಚ್ಚಿನ ಮಾಹಿತಿಗಾಗಿ:

  • ನಿಮ್ಮ ಸ್ಥಳೀಯ ಕೃಷಿ ಇಲಾಖೆಯನ್ನು ಸಂಪರ್ಕಿಸಿ.

Important Direct Links:

Official Websitefruits.karnataka.gov.in
More UpdatesKarnatakaHelp.in

Leave a Comment