ಗುಪ್ತಚರ ಇಲಾಖೆ(IB) ಸೆಕ್ಯೂರಿಟಿ ಅಸಿಸ್ಟೆಂಟ್ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

Published on:

ಗೃಹ ವ್ಯವಹಾರಗಳ ಸಚಿವಾಲಯದ ಗುಪ್ತಚರ ಇಲಾಖೆಯು ಭದ್ರತಾ ಸಹಾಯಕ/ಕಾರ್ಯನಿರ್ವಾಹಕ(SA/Exe) ಹುದ್ದೆಗಳ ನೇಮಕಾತಿ ಸಂಬಂಧ ಸೆ.29 ಮತ್ತು 30 ರಂದು ನಡೆಯಲಿರುವ ಶ್ರೇಣಿ-1 ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.

ಈ ಹಿಂದೆ ಒಟ್ಟು 4987 ಭದ್ರತಾ ಸಹಾಯಕ/ಕಾರ್ಯನಿರ್ವಾಹಕ ಹುದ್ದೆಗಳ ನೇಮಕಾತಿಗಾಗಿ ಜುಲೈ 2025ರಂದು ಅಧಿಸೂಚಿಸಲಾಗಿತ್ತು. ಸದರಿ ನೇಮಕಾತಿಗಾಗಿ ಮೊದಲ ಹಂತದಲ್ಲಿ ನಡೆಸಲಾಗುವ ಶ್ರೇಣಿ -1 ಪರೀಕ್ಷೆಯ ಪ್ರವೇಶ ಪತ್ರ ಹಾಗೂ ಪರೀಕ್ಷಾ ನಗರದ ಅಧಿಕೃತ ಮಾಹಿತಿಯನ್ನು ಇಲಾಖೆ ಬಿಡುಗಡೆಗೊಳಿಸಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು IB ಅಧಿಕೃತ ಜಾಲತಾಣ https://cdn.digialm.com/EForms/configuredHtml/1258/94478/login.htmlಕ್ಕೆ ಭೇಟಿ ನೀಡಿ. ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.

ಪ್ರವೇಶಪತ್ರ ಡೌನ್ಲೋಡ್ ಮಾಡುವ ವಿಧಾನ

• ಅಭ್ಯರ್ಥಿಗಳು ಮೊದಲಿಗೆ ಇಂಟಲಿಜೆನ್ಸ್ ಬ್ಯೂರೋ (IB) ಲಾಗಿನ್ ಜಾಲತಾಣ https://cdn.digialm.com/EForms/configuredHtml/1258/94478/login.html ಕ್ಕೆ ಭೇಟಿ ನೀಡಿ.

Ib Security Assistant Executive Admit Card 2025
Ib Security Assistant Executive Admit Card 2025

• ನೋಂದಣಿ ಐಡಿ, ಪಾಸ್ವರ್ಡ್ ಹಾಗೂ ಕ್ಯಾಪ್ಚ ನಮೂದಿಸಿ ಲಾಗಿನ್ ಆಗಿ.

• ನಂತರ ನಿಮ್ಮ ಪ್ರವೇಶ ಪತ್ರವು ಪರದೆಯ ಮೇಲೆ ಕಾಣಿಸುತ್ತದೆ.

• ಪ್ರವೇಶ ಪತ್ರದಲ್ಲಿ ಪರೀಕ್ಷಾ ದಿನಾಂಕ, ಪರೀಕ್ಷಾ ಕೇಂದ್ರ, ಪರೀಕ್ಷೆಯ ಸಮಯ ಹಾಗೂ ಭಾವಚಿತ್ರ ಸಹಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

• ಭವಿಷ್ಯದ ಬಳಕೆಗಾಗಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

IB Security Assistant Admit Card 2025 LinkDownload
Official Websitewww.mha.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.