ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ(RRBs) ಖಾಲಿ ಇರುವ ಗ್ರೂಪ್ “ಎ” ಅಧಿಕಾರಿಗಳು (ಸ್ಕೇಲ್-I, II ಮತ್ತು III) ಮತ್ತು ಗ್ರೂಪ್ “ಬಿ” ಕಚೇರಿ ಸಹಾಯಕರ ಹುದ್ದೆಗಳ ನೇಮಕಾತಿಗಾಗಿ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಅಧಿಸೂಚನೆಯನ್ನು ಹೊರಡಿಸಿದೆ.
ಒಟ್ಟು 13217 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://www.ibps.in/ಕ್ಕೆ ಭೇಟಿ ನೀಡಿ, ಸೆ..01 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 01, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 28, 2025(ವಿಸ್ತರಣೆ)
- ಪರೀಕ್ಷಾ ಪೂರ್ವ ತರಬೇತಿ (ಪಿಇಟಿ) – ನವೆಂಬರ್, 2025
- ಆನ್‌ಲೈನ್ ಪರೀಕ್ಷೆ – ಪೂರ್ವಭಾವಿ (ಅಧಿಕಾರಿಗಳು/ಒಎ) – ನವೆಂಬರ್/ಡಿಸೆಂಬರ್, 2025
- ಆನ್‌ಲೈನ್ ಪರೀಕ್ಷೆ ಮುಖ್ಯ/ಏಕ (ಅಧಿಕಾರಿಗಳು/OA) – ಡಿಸೆಂಬರ್, 2025/ಫೆಬ್ರವರಿ, 2026
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಹಾಗೂ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಗಮನಿಸಿ: ಕೆಲವು ಹುದ್ದೆಗಳಿಗೆ ನಿರ್ದಿಷ್ಟ ವಿದ್ಯಾರ್ಹತೆ, ಅನುಭವ ಹೊಂದಿರಬೇಕು. ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.
ವಯೋಮಿತಿ:
01.09. 2025 ರಂತೆ;
- ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ಅನ್ವಯಿಸುತ್ತದೆ.
ಆಯ್ಕೆ ಪ್ರಕ್ರಿಯೆ:
- ಪೂರ್ವಭಾವಿ ಪರೀಕ್ಷೆ
- ಮುಖ್ಯ ಪರೀಕ್ಷೆ
- ಸಂದರ್ಶನ
- ವೈದ್ಯಕೀಯ ಪರೀಕ್ಷೆ
- ದಾಖಲೆ ಪರಿಶೀಲನೆ
ಅರ್ಜಿ ಶುಲ್ಕ:
- ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ – 850ರೂ.
- ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 175ರೂ.
How to Apply for IBPS RRB Officers and Office Assistants Recruitment 2025
ಅರ್ಜಿ ಸಲ್ಲಿಸುವ ವಿಧಾನ;
- ಅರ್ಜಿ ಸಲ್ಲಿಸಲು IBPS ->> https://www.ibps.in/index.php/rural-bank-xiv/ ಜಾಲತಾಣಕ್ಕೆ ಭೇಟಿ ನೀಡಿ.
- ನಂತರ ನೀವು ಅರ್ಜಿ ಸಲ್ಲಿಸಬಯಸುವ ಹುದ್ದೆಯ ಅರ್ಜಿ ಸಲ್ಲಿಕೆ ಲಿಂಕ್ ಕ್ಲಿಕ್ ಮಾಡಿ.
- ನೋಂದಣಿ ಸಂಖ್ಯೆ, ಪಾಸ್ವರ್ಡ್ ಹಾಗೂ ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
- ಅರ್ಜಿಯಲ್ಲಿ ಕೇಳಲಾಗಿರುವ ಮೂಲ ಮಾಹಿತಿ, ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ವಿವರಗಳನ್ನು ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
- ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
| IBPS RRB Officers (Scale-I, II & III) and Office Assistants (Multipurpose) Online Form 2025 Last Extended Notice (Dated on 21/09/2025) | Download |
| Official Notification PDF | Download |
| Group “A” – Officers (Scale-I, II & III) Online Application Form Link | Apply Now |
| Group “B” – Office Assistants (Multipurpose) Online Application Form Link | Apply Now |
| Official Website | www.ibps.in |
| More Updates | KarnatakaHelp.in |
Grop B
Give me some more information
Diploma student