21,431 ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ 5ನೇ ಮೆರಿಟ್ ಪಟ್ಟಿಯನ್ನು ಭಾರತೀಯ ಅಂಚೆ ಇಲಾಖೆಯು ಇದೀಗ ಪ್ರಕಟಿಸಿದೆ.
ಈಗಾಗಲೇ ನಾಲ್ಕು ಮೆರಿಟ್ ಪಟ್ಟಿಯನ್ನು ರಾಜ್ಯವರು ಪಿಡಿಎಫ್ ರೂಪದಲ್ಲಿ ಬಿಡುಗಡೆ ಮಾಡಿದ್ದು, ಪ್ರಸ್ತುತ ಇಲಾಖೆಯು 5ನೇ ಮೆರಿಟ್ ಪಟ್ಟಿಯನ್ನು ಇಲಾಖೆಯ ತನ್ನ ಅಧಿಕೃತ ವೆಬ್ಸೈಟ್ indiapostgdsonline.gov.inನಲ್ಲಿ ಬಿಡುಗಡೆ ಮಾಡಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
How to Download India Post GDS 5th Merit List 2025?
5ನೇ ಮೆರಿಟ್ ಪಟ್ಟಿ ಪರಿಶೀಲಿಸುವ ವಿಧಾನ:
- ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ indiapostgdsonline.gov.in ಗೆ ಭೇಟಿ.
- ಅಭ್ಯರ್ಥಿಗಳ ಮೂಲೆ ವಿಭಾಗದ ಕೊನೆಯಲ್ಲಿ – GDS Online Engagement Schedule-I,January-2025 Shortlisted Candidates ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮಗೆ ಬೇಕಾದ ರಾಜ್ಯದ ಮೇಲೆ ಕ್ಲಿಕ್ ಮಾಡಿ ಅಲ್ಲಿ ಪ್ರಕಟಿಸಿರುವ 5ನೇ ಮೆರಿಟ್ ಪಟ್ಟಿಯ ಮೇಲೆ ಕ್ಲಿಕ್ ಮಾಡುವ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
- ಅದರಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಿ
5ನೇ ಮೆರಿಟ್ ಪಟ್ಟಿ ಪ್ರಕಟಿಸಿದ ನಂತರ ಏನು?
ಶಾರ್ಟ್‌ಲಿಸ್ಟ್ ಆಗಿರುವ ಅಭ್ಯರ್ಥಿಗಳು ಜು.24ರಂದು ಅಥವಾ ಅದಕ್ಕೂ ಮೊದಲು ತಮ್ಮ ಹೆಸರಿನ ಮುಂದೆ ನಮೂದಿಸಲಾದ ವಿಭಾಗೀಯ ಮುಖ್ಯಸ್ಥರ ಮೂಲಕ ತಮ್ಮ ದಾಖಲೆಗಳನ್ನು ಪರಿಶೀಲಿಸಬೇಕು.
ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಎಲ್ಲಾ ಅಗತ್ಯ ದಾಖಲೆಗಳ ಮೂಲ ಮತ್ತು ಎರಡು ಸೆಟ್ ಸ್ವಯಂ ದೃಢೀಕರಿಸಿದ ನಕಲು ಪ್ರತಿಗಳೊಂದಿಗೆ ಪರಿಶೀಲನೆಗಾಗಿ ವರದಿ ಮಾಡಬೇಕು.
Important Direct Links:
India Post (Karnataka Circle) GDS 5th Merit List PDF | Download |
All Other State Merit List PDF Link | indiapostgdsonline.gov.in |
More Updates | KarnatakaHelp.in |