77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ನೌಕಾಪಡೆಯಲ್ಲಿ ‘ಎಸ್‌ಎಸ್‌ಸಿ ಅಧಿಕಾರಿ’ಗಳ ನೇಮಕಾತಿ

ಅರ್ಜಿ ಸಲ್ಲಿಸಲು ಫೆ.24ರ ಗಡುವು

Published on:

ಫಾಲೋ ಮಾಡಿ
Indian Navy SSC Officer January 2027 Notification
ಭಾರತೀಯ ನೌಕಾಪಡೆಯಲ್ಲಿ ಎಸ್‌ಎಸ್‌ಸಿ ಅಧಿಕಾರಿಗಳ ನೇಮಕಾತಿ

ಕೇರಳದ ಎಜಿಮಲದ ಭಾರತೀಯ ನೌಕಾ ಅಕಾಡೆಮಿ(INA)ಯ ವಿವಿಧ ಶಾಖೆಗಳಿಗೆ ಜನವರಿ2027ರಿಂದ ಆರಂಭವಾಗಲಿರುವ ಶಾರ್ಟ್‌ ಸರ್ವಿಸ್‌ ಕಮಿಷನ್‌(SSC) ಕೋರ್ಸ್‌ಗಳ ಮೂಲಕ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಭಾರತೀಯ ನೌಕಾಪಡೆಯು ಅರ್ಜಿ ಆಹ್ವಾನಿಸಿದೆ.

ತಾಂತ್ರಿಕ ಶಾಖೆ(149 + ಹೈಡ್ರೋ ಕೇಡರ್ 06), ಶಿಕ್ಷಣ ಶಾಖೆ(15), ಕಾರ್ಯನಿರ್ವಾಹಕ ಶಾಖೆ(96)ಗೆ ಒಟ್ಟು 266 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಫೆ.24ರೊಳಗೆ ನೌಕಾಪಡೆಯ ಅಧಿಕೃತ ವೆಬ್ಸೈಟ್ https://www.joinindiannavy.gov.in/ಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment