ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಮೊದಲನೆ ಹಾಗೂ ಎರಡನೆಯ ಮೆರಿಟ್ ಪಟ್ಟಿಯನ್ನು ಏ.21ರಂದು ಬಿಡುಗಡೆ ಮಾಡಲಾಗಿತ್ತು, ಇದೀಗ 3ನೇ ಮೆರಿಟ್ ಪಟ್ಟಿ(India Post GDS 3rd Merit List 2025)ಯನ್ನು ಬಿಡುಗಡೆ ಮಾಡಿದೆ.
ಭಾರತೀಯ ಅಂಚೆ ಇಲಾಖೆಯು 21,431(ಕರ್ನಾಟಕದಲ್ಲಿ ಒಟ್ಟು 1135 ಹುದ್ದೆಗಳು) ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಸದರಿ ನೇಮಕಾತಿಗೆ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇಲಾಖೆಯೂ ಈಗಾಗಲೇ ಮೊದಲನೆಯ ಹಾಗೂ ಎರಡನೆಯ ಮೆರಿಟ್ ಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಬಿಡುಗಡೆ ಮಾಡಿದ್ದು, 3ನೇ ಮೆರಿಟ್ ಪಟ್ಟಿ 2025 ಗಾಗಿ ಎಲ್ಲಾ ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದರು. ಇಂದು 3ನೇ ಮೆರಿಟ್ ಪಟ್ಟಿ ಪ್ರಕಟಿಸುವ ಮೂಲಕ ಈ ಕಾಯುವಿಕೆಗೆ ತೆರೆ ಬಿದ್ದಿದೆ. ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ indiapostgdsonline.gov.in ಗೆ ಭೇಟಿ ನೀಡಿ 3ನೇ ಮೆರಿಟ್ ಪಟ್ಟಿಯನ್ನು ವೀಕ್ಷಿಸಬಹುದು ಹಾಗೂ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಬಹುದು.
ಇಂಡಿಯಾ ಪೋಸ್ಟ್ ಜಿಡಿಎಸ್ ನೇಮಕಾತಿ – 2025 ಪ್ರಕ್ರಿಯೆಯಲ್ಲಿ ಮೊದಲನೇ ಹಾಗೂ ಎರಡನೇ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು ಪ್ರಸ್ತುತ 3ನೇ ಮೆರಿಟ್ ಪಟ್ಟಿ ಮೇ 19ರಂದು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ನಾವು ಕೆಳಗೆ ನೀಡಲಾದ ಲಿಂಕ್ ಮೂಲಕ ಫಲಿತಾಂಶವಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
ದಾಖಲಾತಿ ಪರಿಶೀಲನೆ:
ಜಿಡಿಎಸ್ 3ನೇ ಮೆರಿಟ್ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಜೂನ್ 03, 2025ರೊಳಗೆ ನಿಮ್ಮ ಹೆಸರಿನ ಮುಂದೆ ನಮೂದಿಸಲಾದ ವಿಭಾಗಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲನೆ ಹಾಜರಾಗಬೇಕು.
3ನೇ ಮೆರಿಟ್ ಪಟ್ಟಿಯನ್ನು ನೋಡುವ ವಿಧಾನ?
ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ indiapostgdsonline.gov.in ಗೆ ಭೇಟಿ.
ಜಿಡಿಎಸ್ ಖಾಲಿ ಹುದ್ದೆಯ ಮೆರಿಟ್ ಪಟ್ಟಿ 2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಗತ್ಯವಿರುವ ದಾಖಲೆಗಳನ್ನು ನಮೂದಿಸಿ ಸಲ್ಲಿಸಿ.
ಜಿಡಿಎಸ್ ಮೂರನೇ ಮೆರಿಟ್ ಪಟ್ಟಿಯು ಪಿಡಿಎಫ್ ರೂಪದಲ್ಲಿ ಕಾಣಸಿಗುತ್ತದೆ. ಅದನ್ನು ಡೌನ್ಲೋಡ್ ಮಾಡಿ.