ಬೆಂಗಳೂರು: ಕರ್ನಾಟಕ ರಾಜ್ಯ ಡಿಪ್ಲೊಮಾ ಇನ್ ನರ್ಸಿಂಗ್ ಪರೀಕ್ಷಾ ಮಂಡಳಿಯು 2026-27ನೇ ಶೈಕ್ಷಣಿಕ ಸಾಲಿನ ಡಿಪ್ಲೋಮಾ ಇನ್ ನರ್ಸಿಂಗ್ ಅಂಡ್ ಮಿಡ್ ವೈಫರಿ(ಜಿಎನ್‌ಎಮ್) ಕೋರ್ಸ್ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿದೆ.
ರಾಜ್ಯದ ಸರ್ಕಾರಿ ಶುಶ್ರೂಷ ಶಾಲೆ ಹಾಗೂ ಖಾಸಗಿ ಶುಶ್ರೂಷ ಶಾಲೆಗಳಲ್ಲಿನ ಸರ್ಕಾರಿ ಕೋಟಾದ ಶೇ.10ರಷ್ಟು ಸೀಟುಗಳನ್ನು ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂದರ್ಶನ ಅಥವಾ ಕೌನ್ಸಿಲಿಂಗ್ ಮೂಲಕ ಸೀಟು ಹಂಚಿಕೆ ಮಾಡಲಿದ್ದು, ಪ್ರವೇಶಾತ ಬಯಸುವ ಆಸಕ್ತರು ಕೆಎಸ್‌ಡಿಎನ್‌ಇಬಿ ಅಧಿಕೃತ ಜಾಲತಾಣ https://ksdneb.org/CouncillingHomePage5.html ಕ್ಕೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಏಪ್ರಿಲ್ 30, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮೇ 20, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 20, 2026
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಕರ್ನಾಟಕ ರಾಜ್ಯದಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ದ್ವಿತೀಯ ಪಿ.ಯು.ಸಿಯಲ್ಲಿ ಕಡ್ಡಾಯವಾಗಿ ಇಂಗ್ಲೀಷ್ ವಿಷಯವನ್ನು ವ್ಯಾಸಂಗ ಮಾಡಿರಬೇಕು ಅಥವಾ ಅದಕ್ಕೆ ತತ್ಸಮಾನವಾದ ಅರ್ಹತೆಯನ್ನು ಹೊಂದಿರಬೇಕು.
• ಅಭ್ಯರ್ಥಿಗಳು 1 ರಿಂದ 12ನೇ ತರಗತಿಯವರೆಗೆ ಕನಿಷ್ಠ 07 ವರ್ಷಗಳು ಕರ್ನಾಟಕ ರಾಜ್ಯದಲ್ಲಿ ವ್ಯಾಸಂಗ ಮಾಡಿರಬೇಕು ಅಥವಾ ಅಭ್ಯರ್ಥಿಯ ಪೋಷಕರಲ್ಲಿ ಒಬ್ಬರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 07 ವರ್ಷಗಳು ವ್ಯಾಸಂಗ ಮಾಡಿರಬೇಕು (ಈ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ದೃಢೀಕರಣ ಪತ್ರ ನೀಡಬೇಕು) ಮತ್ತು ಹೊರನಾಡ ಕನ್ನಡಿಗರು/ ಗಡಿನಾಡ ಕನ್ನಡಿಗರು ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ:
31-12-2026 ರಂತೆ;
ಕನಿಷ್ಠ ವಯಸ್ಸಿನ ಮಿತಿ 17 ವರ್ಷಗಳು
ಅಭ್ಯರ್ಥಿಗಳಿಗೆ ವಿಶೇಷ ಸೂಚನೆ:
• ಸರ್ಕಾರಿ ಶುಶ್ರೂಷ ಶಾಲೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತರಬೇತಿಯ ಅವಧಿಯಲ್ಲಿ ಶಿಷ್ಯವೇತನವನ್ನು ಪಡೆಯುವುದರಿಂದ, ಇಬ್ಬರು ಖಾಯಂ ರಾಜ್ಯ ಸರ್ಕಾರಿ ನೌಕರರ ಜಾಮೀನಿನಿಂದ ಕೂಡಿದ 100ರೂ. ಬಾಂಡ್ ಪತ್ರವನ್ನು ಪ್ರವೇಶ ಸಮಯದಲ್ಲಿ ಸಲ್ಲಿಸಬೇಕು.
• 3 ವರ್ಷದ ತರಬೇತಿ ಅವಧಿಯಲ್ಲಿ ಸರ್ಕಾರಿ ಶುಶ್ರೂಷ ಶಾಲೆಗಳಿಗೆ ಆಯ್ಕೆ ಬಯಸುವ ವಿದ್ಯಾರ್ಥಿಗಳು ವಿವಾಹವಾಗುವಂತಿಲ್ಲ ಹಾಗೂ ಗರ್ಭಿಣಿ ಅಭ್ಯರ್ಥಿಗಳಿಗೆ ತರಬೇತಿಗೆ ಅವಕಾಶವಿರುವುದಿಲ್ಲ.
ತರಬೇತಿಯ ಅವಧಿ:
ತರಬೇತಿ ಅವಧಿಯು ಮೂರು ವರ್ಷಗಳಾಗಿರುತ್ತದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳು ನೀಡಿದ ಆದ್ಯತೆಯ ಮೇರೆಗೆ ಅರ್ಹತೆ ಮತ್ತು ಮೀಸಲಾತಿಯನ್ವಯ ದಾಖಲಾತಿ ಪರಿಶೀಲನೆಯನ್ನು ನಡೆಸಿ ಪ್ರವೇಶಾತಿ ನೀಡಲಾಗುತ್ತದೆ.
ಶಿಷ್ಯವೇತನ:
ಸರ್ಕಾರಿ ಕೋಟಾದಡಿ ಖಾಸಗಿ ನರ್ಸಿಂಗ್ ಶಾಲೆಗಳಿಗೆ ಆಯ್ಕೆಯಾಗುವ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಅಭ್ಯರ್ಥಿಗಳು ನಿಯಮಾನುಸಾರ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಇಲಾಖೆಯಿಂದ ಶಿಷ್ಯವೇತನವನ್ನು ಪಡೆಯುತ್ತಾರೆ.
ಅರ್ಜಿ ಶುಲ್ಕ:
ಪ.ಜಾತಿ, ಪ.ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.250/-
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.400/-
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು:
• ದ್ವಿತೀಯ ಪಿಯುಸಿ ಅಂಕಪಟ್ಟಿ
• ಎಸ್ಸೆಸ್ಸೆಲ್ಸಿ ಅಂಕಪಟ್ಟಿ
• ಇತ್ತೀಚಿನ ದೇಹಧಾರ್ಡ್ಯತೆಯ ಪ್ರಮಾಣಪತ್ರ(ಅಂಗವಿಕಲ ಕೋಟಾ ಅಭ್ಯರ್ಥಿಗಳಿಗೆ ಮಾತ್ರ)
• ಜಾತಿ ಮತ್ತು ಆದಾಯ ಪ್ರಮಾಣಪತ್ರ
• 1ರಿಂದ 12ನೇ ತರಗತಿವರೆಗಿನ ಕನಿಷ್ಠ 7 ವರ್ಷದ ಕರ್ನಾಟಕದಲ್ಲಿ ಅಧ್ಯಯನ ಮಾಡಿರುವ ಪ್ರಮಾಣಪತ್ರ
• ಹಾಗೂ ಇತರೆ ದಾಖಲೆಗಳು…
2026-27 ನೇ ಸಾಲಿಗಾಗಿ ನೇಮಕಾತಿ ಪ್ರಾಧಿಕಾರದಿಂದ ನಿರಪೇಕ್ಷಣಾ ಪತ್ರ (NOC) ಪಡೆದ ನಂತರವೇ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಮತ್ತು ಪೋಸ್ಟ್/ಕೋರಿಯರ್ ಮೂಲಕ ಮೂಲ ನಿರಪೇಕ್ಷಣಾ ಪತ್ರವನ್ನು (NOC) ಕಳುಹಿಸಿಕೊಡಬೇಕು. ಒಂದು ವೇಳೆ ನಿರಪೇಕ್ಷಣಾ ಪತ್ರ (NOC) ಅರ್ಜಿ ಸಲ್ಲಿಸಿದ್ದಲ್ಲಿ ತಿರಸ್ಕರಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
• ಮೊದಲಿಗೆ ಅಭ್ಯರ್ಥಿಗಳು KSDNEB ಅಧಿಕೃತ ಜಾಲತಾಣ https://ksdneb.org/CouncillingHomePage5.html ಕ್ಕೆ ಭೇಟಿ ನೀಡಿ.
• ಬಳಿಕ *Fill Application* ಆಯ್ಕೆಯನ್ನು ಆರಿಸಿ.
• ನಂತರ ಅರ್ಜಿಯಲ್ಲಿ ಕೇಳಲಾಗುವ ಸ್ವವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಮುಂದುವರೆದಂತೆ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಿಸಿ.
Important Direct Links:
| Official Notification PDF | Download |
| Online Application Form Link | Apply Now |
| Official Website | ksdneb.org |
| More Updates | KarnatakaHelp.in |