ಭಾರತೀಯ ರಿಸರ್ವ್ ಬ್ಯಾಂಕ್(RBI)ನಲ್ಲಿ ಖಾಲಿ ಇರುವ ನಾನಾ ಕೇಡರ್ ಗ್ರೇಡ್ ‘ಬಿ’ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸೇವಾ ಮಂಡಳಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಲು ಮೇ 20ರವೆರೆಗೆ ಅವಕಾಶವಿದೆ.
ಗ್ರೇಡ್ ‘ಬಿ’ ಅಧಿಕಾರಿ ಜನರಲ್ ಕೇಡರ್ 40 ಸ್ಥಾನ, ಗ್ರೇಡ್ ‘ಬಿ’ ಅಧಿಕಾರಿ ಡಿಇಪಿಆರ್ ಕೇಡರ್ 10 ಸ್ಥಾನ ಹಾಗೂ ಗ್ರೇಡ್ ‘ಬಿ’ ಅಧಿಕಾರಿ ಡಿಎಸ್ಐಎಂ ಕೇಡರ್ 10 ಸ್ಥಾನ ಸೇರಿದಂತೆ ಒಟ್ಟು 60 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ https://opportunities.rbi.org.in/scripts/bs_viewcontent.aspx?Id=4997 ಅಥವಾ https://ibpsreg.ibps.in/rbisbmar26/ ಕ್ಕೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಏಪ್ರಿಲ್ 29, 2026
- ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮೇ 20, 2026
- ಆನ್‌ಲೈನ್ ಪರೀಕ್ಷೆಯ ದಿನಾಂಕ – ಜೂನ್ 13 ರಿಂದ ಜುಲೈ 26, 2026
ಶೈಕ್ಷಣಿಕ ಅರ್ಹತೆ:
✓ ಗ್ರೇಡ್ ‘ಬಿ’ ಅಧಿಕಾರಿ ಜನರಲ್ ಕೇಡರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ/ತತ್ಸಮಾನ ತಾಂತ್ರಿಕ ಅಥವಾ ವೃತ್ತಿಪರ ಅರ್ಹತೆಯನ್ನು ಹೊಂದಿರಬೇಕು.
✓ ಗ್ರೇಡ್ ‘ಬಿ’ ಅಧಿಕಾರಿ ಡಿಇಪಿಆರ್ ಕೇಡರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದಅರ್ಥಶಾಸ್ತ್ರದಲ್ಲಿ/ಅರ್ಥಶಾಸ್ತ್ರದಂತಹ ಇತರೆ iಸಂಬಂಧಿತ ಕೋರ್ಸ್‌ಗಳಲ್ಲಿ ಎಂಎ/ಎಂಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.
✓ ಗ್ರೇಡ್ ‘ಬಿ’ ಅಧಿಕಾರಿ ಡಿಎಸ್ಐಎಂ ಕೇಡರ್ ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿಪೂರ್ಣಗೊಳಿಸಿರಬೇಕು.
ವಯೋಮಿತಿ:
01-04-2026ರಂತೆ;
ಕನಿಷ್ಠ ವಯಸ್ಸಿನ ಮಿತಿ 21 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 30 ವರ್ಷಗಳು.
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10-15ವರ್ಷಗಳು.
ಆಯ್ಕೆ ವಿಧಾನ;
ಅಭ್ಯರ್ಥಿಗಳನ್ನು ಆನ್‌ಲೈನ್/ಲಿಖಿತ ಪರೀಕ್ಷೆಯನ್ನು ಹಂತ I ಮತ್ತು ಹಂತ II ರಲ್ಲಿ ನಡೆಸಿ ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹಂತ-I ಆನ್‌ಲೈನ್ ಪರೀಕ್ಷೆ (ವಸ್ತುನಿಷ್ಠ ಪ್ರಕಾರ)
ಹಂತ-II ಆನ್‌ಲೈನ್ ಪರೀಕ್ಷೆ
ಸಂದರ್ಶನ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.78,450 ರಿಂದ ರೂ.1,54,936ವರೆಗೆ ಮಾಸಿಕ ಆರಂಭಿಕ ವೇತನ ಹಾಗೂ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ರೂ.850 + 18% ಜಿಎಸ್‌ಟಿ
ಪ.ಜಾತಿ, ಪ.ಪಂಗಡ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.100 + 18% ಜಿಎಸ್‌ಟಿ
ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಂತ-ಹಂತವಾಗಿ..
• ಅಭ್ಯರ್ಥಿಗಳು ಅಧಿಕೃತ ಜಾಲತಾಣ https://opportunities.rbi.org.in/Scripts/index.aspxದಲ್ಲಿ ಲಭ್ಯವಿರುವ ಐಬಿಪಿಎಸ್ ಅರ್ಜಿ ನಮೂನೆ ಲಿಂಕ್ https://ibpsreg.ibps.in/rbisbmar26/ಗೆ ಭೇಟಿ ನೀಡಿ.
• ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೋಂದಾಯಿಸಿ ಅಥವಾ ನೊಂದಣಿ ಸಂಖ್ಯೆ, ಪಾಸ್ವರ್ಡ್ ಮತ್ತು ಭದ್ರತಾ ಕೋಡ್ ನಮೂದಿಸಿ ಲಾಗಿನ್ ಆಗಿ.
• ಬಳಿಕ ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ, ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | www.rbi.org.in |
| More Updates | KarnatakaHelp.in |
Job
Asifk
other
Job