ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯವು ಖಾಲಿ ಇರುವ 20 ದ್ವಿತೀಯ ದರ್ಜೆ ಸಹಾಯಕರ(ಎಸ್‌ಡಿಎ) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಉಳಿಕೆ ಮೂಲ ವೃಂದ 18 ಸ್ಥಾನ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ವೃಂದದ 02 ಬ್ಯಾಕ್‌ಲಾಗ್ ಸ್ಥಾನಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಸಂಬಂಧಿತ ವಿಷಯಗಳಲ್ಲಿ ಪದವಿ ಹೊಂದಿರಬೇಕು. ಅರ್ಜಿ ಸಲ್ಲಿಕೆಗೆ ಸೆ.11 ಕೊನೆದಿನವಾಗಿದೆ. ನ್ಯಾಯಾಲಯದ ಅಧಿಕೃತ ಜಾಲತಾಣhttps://judiciary.karnataka.gov.in/index.phpದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಸದರಿ ನೇಮಕ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಬೆಂಗಳೂರಿನ ಪ್ರಧಾನ ಪೀಠ ಅಥವಾ ಧಾರವಾಡ ಅಥವಾ ಕಲಬುರಗಿ ಪೀಠಗಳಲ್ಲಿ ನಿಯೋಜಿಸಲಾಗುವುದು ಎಂದು ಮಹಾವಿಲೇಖನಾಧಿಕಾರಿ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ದಿನಾಂಕಗಳು:
- ಅಧಿಕೃತ ಅಧಿಸೂಚನೆಯ ದಿನಾಂಕ- ಆಗಸ್ಟ್ 10
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 11 (ರಾತ್ರಿ 11:59 ರವರೆಗೆ)
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ, ಕಲೆ, ವಾಣಿಜ್ಯ, ವ್ಯವಹಾರ ನಿರ್ವಹಣೆ(Business Management), ಕಂಪ್ಯೂಟರ್ ಅಪ್ಲಿಕೇಷನ್ಸ್ ಅಥವಾ ವ್ಯವಹಾರ ಆಡಳಿತ(Business Administration) ವಿಷಯಗಳಲ್ಲಿ ಪದವಿ ಹೊಂದಿರಬೇಕು. ಇದರೊಂದಿಗೆ ಕಂಪ್ಯೂಟರ್ ನಿರ್ವಹಣಾ ಜ್ಞಾನವನ್ನು ಹೊಂದಿರಬೇಕು.
ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಪದವಿಯಲ್ಲಿ ಕನಿಷ್ಠ ಶೇಕಡಾ 55 ರಷ್ಟು ಅಂಕಗಳು ಕಡ್ಡಾಯ. ಪ.ಜಾತಿ ಮತ್ತು ಪ.ಪಂಗಡ(ST) ಅಭ್ಯರ್ಥಿಗಳಿಗೆ ಕನಿಷ್ಠ ಶೇ.50ರಷ್ಟು ಅಂಕಗಳು ಕಡ್ಡಾಯ ಪಡೆದು ತೇರ್ಗಡೆ ಹೊಂದಿರಬೇಕು.
ವಯೋಮಿತಿ:
ಕನಿಷ್ಠ 18 ವರ್ಷಗಳು
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 + 5* ವರ್ಷಗಳು
- ಹಿಂದುಳಿದ ವರ್ಗಗಳು (IIಎ, IIಬಿ, IIIಎ, IIIಬಿ) ಅಭ್ಯರ್ಥಿಗಳಿಗೆ 38 + 5* ವರ್ಷಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 40 + 5* ವರ್ಷಗಳು
(ಗಮನಿಸಿ: ಸರ್ಕಾರದ ಆದೇಶದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ).
ಆಯ್ಕೆ ವಿಧಾನ:
ಅಭ್ಯರ್ಥಿಗಳ ಆಯ್ಕೆಯನ್ನು 90 ನಿಮಿಷಗಳ ಅವಧಿಯ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ.
ಪರೀಕ್ಷೆಯ ವಿವರಗಳು (ಒಟ್ಟು 100 ಅಂಕಗಳು):
- ಆಂಗ್ಲ ಭಾಷೆಯಲ್ಲಿ ಪ್ರಬಂಧ: 30 ಅಂಕಗಳು (ಉತ್ತೀರ್ಣರಾಗಲು ಕನಿಷ್ಠ 20 ಅಂಕಗಳು ಬೇಕು)
- ಕನ್ನಡದಿಂದ ಆಂಗ್ಲ ಭಾಷೆಗೆ ಅನುವಾದ: 30 ಅಂಕಗಳು (ಉತ್ತೀರ್ಣರಾಗಲು ಕನಿಷ್ಠ 20 ಅಂಕಗಳು ಬೇಕು)
- ಸಾಮಾನ್ಯ ಜ್ಞಾನ ಪರೀಕ್ಷೆ: 20 ಅಂಕಗಳು (ಉತ್ತೀರ್ಣರಾಗಲು ಕನಿಷ್ಠ 10 ಅಂಕಗಳು ಬೇಕು)
- ಸಂದರ್ಶನ: 20 ಅಂಕಗಳು (ಉತ್ತೀರ್ಣರಾಗಲು ಕನಿಷ್ಠ 10 ಅಂಕಗಳು ಬೇಕು)
ಅರ್ಹತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ 1:10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಕರೆಯಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾದವರನ್ನು 1:5 ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ವೇತನ:
ವೇತನ ಶ್ರೇಣಿಯು ಮಾಸಿಕವಾಗಿ ₹25,500 ರಿಂದ ₹81,100 (ಲೆವೆಲ್ 4) ಮತ್ತು ನಿಯಮಾನುಸಾರ ಇತರೆ ಭತ್ಯೆಗಳು ದೊರೆಯಲಿವೆ.
ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ (IIಎ, IIಬಿ, IIIಎ, IIIಬಿ) ₹350/-
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ₹200/-
ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನ್‌ಲೈನ್ ಪಾವತಿ ಗೇಟ್‌ವೇ (ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಯುಪಿಐ) ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ.?
ಹಂತ-1 ಅಧಿಕೃತ ಜಾಲತಾಣ https://judiciary.karnataka.gov.in/index.phpಕ್ಕೆ ಬೇಟಿ ನೀಡಿ.
ಹಂತ-2 ಮುಖಪುಟದ ಮೆನು(Menu)ವಿನಲ್ಲಿ ನೀಡಲಾಗಿರುವ “Notifications” ವಿಭಾಗದಡಿ ನೀಡಲಾದ “Recruitments” ಉಪವಿಭಾಗಡಿ ನೀಡಲಾಡ “High Court” ಮೇಲೆ ಕ್ಲಿಕ್ಕಿಸಿ.
ಹಂತ-3 ನಂತರ ಅಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ “Notification Nos: HCRB/SDA – 4/2026 (RPC) and HCRB/SDA – 5/2026 (KKR) DATED 11th August 2026 DIRECT RECRUITMENT OF THE CANDIDATES TO THE POST OF SECOND DIVISION ASSISTANT” ಶೀರ್ಷಿಕೆ ಲಿಂಕ್ ಮೇಲೆ ಕ್ಲಿಕ್ಕಿಸಿ.
ಹಂತ-4 ತದನಂತರ ಮತ್ತೊಂದು ಪುಟ ತೆರೆಯುತ್ತದೆ. ಮುಂದೆ ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ವೃಂದದ ಶೀರ್ಷಿಕೆ (For Second Division Assitant(KKR or RPC) – Click here to Apply) ಮೇಲೆ ಕ್ಲಿಕ್ಕಿಸುವ ಮೂಲಕ ಅರ್ಜಿ ನಮೂನೆ ತುಂಬಿ, ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
Important Direct Links:
| Official Notification PDF | Download |
| Online Application Form Link(KKR) | Apply Now |
| Online Application Form Link(RPC) | Apply Now |
| Official Website | judiciary.karnataka.gov.in |
| More Updates | KarnatakaHelp.in |