ಗೇಟ್ 2027 ನೋಂದಣಿ; ಪ್ರಮುಖ ಮಾಹಿತಿ

Published on:

ಚೆನ್ನೈ: ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ ಮದ್ರಾಸ್)ಯು 2027ನೇ ಸಾಲಿನ ‘ಗೇಟ್’ (ಗ್ರಾ‌ಜ್ಯುಯೇಟ್‌ ಅಪ್ಟಿಡ್ಯೂಡ್‌ ಟೆಸ್ಟ್‌ ಇನ್‌ ಎಂಜಿನಿಯರಿಂಗ್) ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ.

ಒಟ್ಟು 30 ಪತ್ರಿಕೆಗಳನ್ನೊಳಗೊಂಡ ಪರೀಕ್ಷೆಯು ಫೆಬ್ರವರಿ 6, 7, 13, 14, 20 ಮತ್ತು 21ರಂದು ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ರೂಪದಲ್ಲಿ ನಡೆಯಲಿದೆ. ಅರ್ಜಿಗಳನ್ನು ಅಧಿಕೃತ ಪೋರ್ಟಲ್‌ https://gate2027.iitm.ac.in/ನ ಮೂಲಕ ಸಲ್ಲಿಸಬೇಕಾಗಿದೆ.

ಗೇಟ್ 2027ರ ಅರ್ಹತೆ ಹೊಂದುವ ಅಭ್ಯರ್ಥಿಗಳು ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಹಾಯ ಹಾಗೂ ಕೆಲವು ಸಂಸ್ಥೆಗಳು ಗೇಟ್ ಅಂಕಗಳನ್ನು ನೇಮಕ ಪ್ರಕ್ರಿಯೆಗೆ ಬಳಸುತ್ತವೆ. ಅಲ್ಲಿಯೂ ಈ ಅಂಕಗಳು ಸಹಾಯಕ.

ಮುಖ್ಯ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ- ಆಗಸ್ಟ್ 27
  • ಅರ್ಜಿ ಸಲ್ಲಿಸಲು (ಸಾಮಾನ್ಯ ಅವಧಿ) ಕೊನೆಯ ದಿನಾಂಕ- ಸೆಪ್ಟೆಂಬರ್ 27
  • ವಿಳಂಬ ಶುಲ್ಕದೊಂದಿಗೆ ವಿಸ್ತರಿತ ಅವಧಿ ಮುಕ್ತಾಯ ದಿನಾಂಕ- ಅಕ್ಟೋಬರ್ 5
  • ಗೇಟ್‌ 2027 ಪರೀಕ್ಷೆಯ ದಿನಾಂಕಗಳು- ಫೆಬ್ರವರಿ 6, 7, 13, 14, 20 ಮತ್ತು 21, 2027.(ಪರೀಕ್ಷಾ ಅವಧಿ ಪ್ರತಿ ಪತ್ರಿಕೆಗೆ 3 ಗಂಟೆಗಳು. ಪೂರ್ವಾಹ್ನ 9:30 ರಿಂದ ಮಧ್ಯಾಹ್ನ 12:30 ಮತ್ತು ಅಪರಾಹ್ನ 2:30 ರಿಂದ ಸಂಜೆ 5:30 ರವರೆಗೆ)
  • ಫಲಿತಾಂಶ ಪ್ರಕಟವಾಗುವ ದಿನಾಂಕ ಮಾರ್ಚ್ 19, 2027 (ಶುಕ್ರವಾರ)

ವಿದ್ಯಾರ್ಹತೆ:

ಅಭ್ಯರ್ಥಿಯು ಪ್ರಸ್ತುತ ಯಾವುದೇ ಪದವಿಯನ್ನು(ಯುಜಿ) 3ನೇ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಅಥವಾ ಈಗಾಗಲೇ ಇಂಜಿನಿಯರಿಂಗ್/ತಂತ್ರಜ್ಞಾನ/ಆರ್ಕಿಟೆಕ್ಚರ್/ವಿಜ್ಞಾನ/ವಾಣಿಜ್ಯ/ಕಲೆ/ಹ್ಯುಮಾನಿಟೀಸ್ ವಿಷಯಗಳಲ್ಲಿ ಯುಜಿಸಿ(UGC)/ಎಐಸಿಟಿಇ(AICTE) ಅನುಮೋದಿತ ಪದವಿ ಪೂರ್ಣಗೊಳಿಸಿರಬೇಕು.

ಪ್ರಸ್ತುತ 5ನೇ/6th/7ನೇ ಸೆಮಿಸ್ಟರ್ ಅಥವಾ ಅದಕ್ಕಿಂತ ಹೆಚ್ಚಿನ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಥವಾ ಈಗಾಗಲೇ ಎಂಬಿಬಿಎಸ್‌/ಬಿ.ಡಿ.ಎಸ್/ಬಿ.ವಿ,ಎಸ್ಸಿ/ಬಿ.ಎಸ್ಸಿ(ಕೃಷಿ, ತೋಟಗಾರಿಕೆ, ಅರಣ್ಯಶಾಸ್ತ್ರ) ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳೂ ಸಹ ಈ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಭಾರತದ ಹೊರಗಿನ ದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಥವಾ ಪದವಿ ಪಡೆದಿರುವ ಅಭ್ಯರ್ಥಿಗಳು ಪ್ರಸ್ತುತ ಕನಿಷ್ಠ 3 ವರ್ಷಗಳ ಅವಧಿಯ ಇಂಜಿನಿಯರಿಂಗ್/ತಂತ್ರಜ್ಞಾನ/ವಿಜ್ಞಾನ/ವಾಣಿಜ್ಯ/ಕಲೆ/ಆರ್ಕಿಟೆಕ್ಚರ್/ಹ್ಯುಮಾನಿಟೀಸ್ ಬ್ಯಾಚುಲರ್ ಪದವಿಯ 3ನೇ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದಲ್ಲಿರಬೇಕು ಅಥವಾ ಪದವಿ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:

ಈ ಪರೀಕ್ಷೆ ಬರೆಯಲು ಯಾವುದೇ ಗರಿಷ್ಠ ವಯೋಮಿತಿ ಇರುವುದಿಲ್ಲ.

ಅರ್ಜಿ ಶುಲ್ಕ (ಪ್ರತಿ ಪತ್ರಿಕೆಗೆ):

  • ಮಹಿಳಾ/ಎಸ್ಸಿ/ಎಸ್ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಸಾಮಾನ್ಯ ಅವಧಿಯಲ್ಲಿ ₹1000, ವಿಸ್ತರಿತ ಅವಧಿಯಲ್ಲಿ ₹1500.
  • ಇತರ ಅಭ್ಯರ್ಥಿಗಳಿಗೆ ಸಾಮಾನ್ಯ ಅವಧಿಯಲ್ಲಿ ₹2000, ವಿಸ್ತರಿತ ಅವಧಿಯಲ್ಲಿ ₹2500.

Important Direct Links:

Official Notification PDFDownload
GATE 2027 Registration LinkApply Now
Official Websitewww.iitm.ac.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment